ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧ ಸುದೆ EN ( ಬಿಂದು ೧ ) ಅಥ - - ಸಿದ್ಧಗಿರಿಯ ಶ್ರೀಕಾಡಸಿದ್ದೇಶನಿಂ ಪರಮಾರ್ಥ-ಸಾಧನವ ತಾವು ಪಡೆದು ಸಮರ್ಥರು ಮುಂದೆ ಸಂಸಾರ ಸಾಗಿಸುತ ಸಾಧನದಿ ' ಯೋಗ' ವನ್ನು ಸಾಧಿಸಿದರು. ನಿಂಬರಗಿಯಲ್ಲವರು ತುಂಬ ಮರೆಯಲಿ ಬಾಳಿ ಕಾಡಿನಲಿ ಸಾಧನವ ನಡೆಸುತಿಹರು. ತುಂಬಿ ಹೃದಯವ ವಿಪುಲ ದಿವ್ಯ ಆನಂದದಿಂ ನಂಬಿದವರಿಗೆಯವನು ಉಣಿಸುತಿಹರು. ಹಿರಿ ಗುರುಗಳೀ ತೆರದಿ ವರಭಕುತಿ ಬೆಳೆಸುತಿರೆ ಜನಕೆ ಬೋಧದ ಸುಧೆಯ ಸಲಿಸುತಿಹರು, ಸಿರಿ ಮುಖದಿ ಹೊರಹೊರಟ ಸಹಜ ಕಿರಿನುಡಿಗಳಿಂ ಭಕುತರಿಗೆ ನಡೆನುಡಿಯ ಕಲಿಸುತಿಹರು, ಅ೦ತರ೦ಗದಲಾರ ನಿಂತಿರುವ ಭಗವಂತ ಅವರ ನುಡಿ ಅವನ ನುಡಿಯಿರುತಲಿಹುದು. ಇಂತು ಸಂತರ ಮುಖದಿ, ಸುರಿದ ದೇವರ ನುಡಿಯು ಪರಮಾರ್ಥಸಾರವನು ಬೀರುತಿಹುದು, 11011 11 9 11 || a || || 8 ||