ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧ-ಸುಧೆ ಚೆನ್ನ ವಚನಗಳಂತೆ, ಪ್ರತಿನಿತ್ಯ ನಡೆವವನು ದಿವ್ಯ ದರುಶನಗಳನು ಕಾಣುತಿಹನು. ತನ್ನ ರೂಪವ ಕಂಡು, ಆತ್ಮ-ಸುಖವನ್ನುಂಡು ಸಾಯುಜ್ಯ ಸಂಪದವನುಣ್ಣುತಿಹನು ಗುರುವಚನಗಳ ನಿತ್ಯ ಕೇಳಿ, ತೇಜವ ತಾಳಿ, ಬಾಳಿ ಬೆಳಗಿದ ಮಹಿಮ ಧನ್ಯನಹನು. ವರವಚನಗಳ ಸಾರ ಹೀರಿ, ಬರಹದಿ ಬೀರಿ, ಜನಕೆ ಬೆಳಕನು ತೋರಿ ಹರಸಿರುವನು. ಧನ್ಯ ರಘುನಾಥಾರ್ಯ ! ಅವರ ಬರಹದ ಕಾರ್ಯ! ಗುರು-ಬೋಧವಲ್ಲಿ ಒಡಮೂಡಿಯಿಹುದು, ಧನ್ಯ 1 ಶ್ರೀಗುರುವರ್ಯ ! ಧನ್ಯವರ ಚಾತುರ್ಯ ಬರಹ-ಬೆಟ್ಟದಿ ಸುಧೆಯ ಸಲೆ ಕಂಡುದು ಅವರು ತೋರಿದ ಸುಧೆಯ ಅವರೇ ತೋರಿದ ತೆರದಿ ಹರಿಸಿರುವೆ ಪದ್ಯಗಳ ಸಾಲ್ಗಳಲ್ಲಿ || 89 || || 2 || || 2 || ದೇವ-ಭಕುತಿಯ ರಸವ “ ಬೋಧ-ಸುಧೆಯಿಂ ' ಪಡೆದು ಭಕುತ ಹೃದಯಗಳೆಲ್ಲ ಮರಳರಳಲಿ ! ಇಂತು ಗುರುವರರ ಹಿರಿನುಡಿಯ ಕೇಳಿರಯ್ಯ ವರವಚನದೊಲು ನಿತ್ಯ ಬಾಳಿರಯ್ಯ | ಭಕುತಿ ಭಾವದಿ ಹೃದಯ ತುಂಬಿರಯ್ಯ ಆತ್ಮ ದೇವನ ಕೃಪೆಯ ಕೊಂಬಿರಯ್ಯ - ( 1 ರಾನಡೆ ರಾಮರಾಯರು. || es ||