ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಬಿಂದು ೨) ನಡತೆಯ ಮೂಲತತ್ವವು ೧. ಉತ್ತಮ ನರದೇಹ ನರಜನ್ಮ ಹಿರಿಯದೆ ! ಮರಮರಳಿ ದೊರೆಯದೆ !! ಆತ್ಮದರುಶನವ ದಯಪಾಲಿಸುವದು. ತರತರದ ಯೋನಿಗಳ ತಿರುತಿರುಗಿ ಬಂದಾಗ ನಡತೆಯಾ ಬಲದಿಯದು ದೊರೆಯುತಿಹುದು || ೧ | ಹಿಂದಿನಾ ಜನ್ಮದಲಿ ನಿಂದ್ಯ ಕರ್ಮವನೆಸಗಿ ಅವರ ಕಟುಫಲವುಂಡು ನೊಂದೆಯಯ್ಯಾ ! ಇಂದಾದರೂ ಮರಳಿ 1 ಗುಣಗಣಗಳನೆ ಬಯಸಿ ಅವನಲ್ಲಗಳೆಯದಿರು ಸುಮ್ಮನಯ್ಯ ! ೨. ಜೀವಿಯ ನಾಲ್ಕು ಸ್ಥಿತಿಗತಿಗಳು ಎಲ್ಲ ಜೀವಿಗಳಲ್ಲಿ ಬಾಲ್ಯ-ಯೌವನ-ಪ್ರೌಢ- ತನ-ಮುಪ್ಪು, ಈ ನಾಲ್ಕು ಸ್ಥಿತಿಗಳಿಹವು. ಎಲ್ಲರಿಗೆ ಭ್ರಮೆ-ಭೂಲಿ-ಬಯಕೆ-ಕಸಿವಿಸಿಗಳೆಂ- ಬೀ ತರದ ನಾಲ್ಕು ಆ ಕೀಳಗತಿಗಳಿಹವು, 1 ವಿಷಯಗಳು, ಒಡವೆಗಳು, 2 ಕೀಳು ಭಾವಗಳು, 11911