ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧ- ಸುಧೆ ತನ್ನ ನಡೆಯಲು ಎಲ್ಲವೊದಗುವದು ಇದು ದಿಟವು. ಒಳಿತು ನಡೆಯಿಂದೆಂದೂ ಕೆಡಕಾಗದು. ತನ್ನ ನಡೆ ಕೆಡಕು ಇರುತಿರೆ ಕೆಡಕು ತಾ ಬಿಡದು ಇದನರಿತು ಒಳಿತನ್ನೇ ಮಾಡುತಿಹುದು ತನಗೆ ಒದಗುವ ಬೇನೆ ಕೆಡಕು ನಡತೆಯ ಫಲವು. ಮುಳ್ಳು ನೆಡುವುದು ಕೂಡ ಅದರ ಕುರುಹು. ತನಗೆ ಸರಿ ನಡೆಯ ಬರೆ ಬೇನೆ ಬೇಸರ ಸರಿದು ಯಾವ ಬಾಧೆಗಳೆಂದೂ ಬಾರದಿಹವು ನಡತೆಯಾ ಬಲಕೆ ಮಿಗಿಲಾದ ಬಲವೊಂದಿಲ್ಲ. ದೇವ ಬಲವೂ ಅದಕೆ ಸಾಟಿಯಲ್ಲ. ನಡತೆಯನೆ ಕೂಡಿಹವು ಒಳಿತು ಕೆಡಕುಗಳೆಲ್ಲ ಅದನುಳಿದು ಬೇರೆ ಬಲ ಇಲ್ಲವಲ್ಲ ನಡತೆ ಒಳಿತಿರುತಿರಲು ಹರಿಹರ-ಬ್ರಹ್ಮರು ಕೆಡಕು ಮಾಡಲು ಬಯಸೆ ಕೆಡಕಾಗದು. ನಡತೆ ಕೆಡಕಾಗಿರಲು ಮೂದೇವರೂ ಕೂಡಿ ಒಳಿತು ಮಾಡಲು ಬಯಸೆ ಒಳಿತಾಗದು. ನಾವು ಮಾಡಿದ ಕರ್ಮ ಬಲವಂತವಾಗಿರಲು ದೇವ ನಮಗೇನನ್ನೂ ಮಾಡನಯ್ಯ ! ನಾವು ಒಳಡೆ ನಡೆಯೆ ದೇವ ನಮ್ಮವನೆ ಸರಿ ! ಅರಿತು ತಪ್ಪದೆ ನಡೆಯ ಜಪ್ಪಿ ಸಯ್ಯ. 1 ಸಮಾನ. 2 ಕಾಪಾಡು. || 80 || ॥ ೧೫ | 110211 || 02 ||