ಅಲೆ : ನಾಲ್ಕು
ಬಿಜ್ಜಳರಾಜನ ಆಸ್ಥಾನದಲ್ಲಿ
ಮಂಗಳವಾಡದಲ್ಲಿ :
“ಬರಮಾಡಿಕೊಳ್ಳಯ್ಯ, ಬರುವ ಸಂಗನಬಸವ!
ಕಲ್ಯಾಣ ಪಟ್ಟಣದಲ್ಲಿಯ ಸಿದ್ಧರಸ ದಂಡಾಧಿಪನ ಮಹಾಮನೆಯ
ಶಯ್ಯಾಗೃಹ. ಬೆಳಗಿನ ಸಮಯ. ಮೇಲ್ಕಾಣಿಸಿದ ಶಬ್ದಗಳನ್ನು ಕೇಳಿ ಅದೇ
ಎಚ್ಚತ್ತಸಿದ್ಧರಸನು, ತಾನು ಕಂಡ ಕನಸನ್ನು ತನ್ನ ಮಡದಿಗೆ ಅರುಹಲಿರುವ,
“ಇದು ನೋಡು, ಇಂದಿನ ಕನಸು ತುಂಬ ಅದ್ಭುತವಾದುದು! ಕನಸಿನಲ್ಲಿ
ಒಬ್ಬ ತೇಜಃಪುಂಜನಾದ ಮುನಿ ಬಂದು ಬರಮಾಡಿಕೊಳ್ಳಯ್ಯ, ಬರುವ
ಸಂಗನ ಬಸವ!' ಎಂದು ನುಡಿದು ಕೂಡಲೇ ಕಾಣದಾದ ಸಂತತಿಗಾಗಿ
ಕೊರಗುವ ನಮ್ಮ ಭಾಗ್ಯ ಇಂದು ಬೆಳಗುವದೇನೋ? ಸಂಗಮನಾಥನು
ಅದೆಂತು ಕರುಣಿಸಲಿರುವ ನೋಡೋಣ! ನಸುಕಿನ ಕನಸು ನನಸಾಗದೆ
ಇರದೆಂದು ಬಗೆದು ಸತಿಪತಿಯರಿಬ್ಬರೂ ಪ್ರಮುದಿತರಾದರು. ಬೆಳಗಿನ
ನಿತ್ಯ ಕರ್ಮಗಳನ್ನು ಮುಗಿಸಿ, ಮುಂದೇನಾಗುವದು ಎಂಬುದನ್ನು ಕಾಣಲು
ಆತುರರಾಗಿ ಕುಳಿತರು.
ಅಷ್ಟರಲ್ಲಿ ಅವರ ಸೇವಕನು ಒಳಗೆ ಬಂದು ಸಿದ್ದರಸನ ಕೈಯಲ್ಲಿ
ಒಂದು ಕಾಗದವನ್ನು ಕೊಟ್ಟನು. “ಒಬ್ಬ ಬ್ರಹ್ಮಚಾರಿಯು ಈ ಕಾಗದವನ್ನು
ತಮಗೆ ಕೊಡಹೇಳಿ, ತನ್ನ ಪರಿಚಯವನ್ನು ಮಾಡಿಕೊಡದೆ, ಒಮ್ಮೆಲೆ
ಹೋಗಿಯೇ ಬಿಟ್ಟ ಎಂದು ಅರುಹಿ, ಸೇವಕನು ಅಲ್ಲಿಂದ ತೆರಳಿದನು.
ಆಗ ಸಿದ್ಧರಸನು ಕುತೂಹಲದಿಂದ ಕಾಗದವನ್ನು ತೆರೆದು ಓದಿದ.
ಅದರಲ್ಲಿ ಈ ಬಗೆಯಾಗಿ ಬರೆಯಲಾಗಿದ್ದಿತು :
“ಅನಂತ ಆಶೀರ್ವಾದಗಳು.
“ನಮ್ಮ ಪ್ರಿಯತಮ ಶಿಷ್ಯನಾದ ಭಕ್ತ ಬಸವಣ್ಣನು ಇಂದು ನಿಮ್ಮೆಡೆ
ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೬೩
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ