ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಮಾಯಣ, ವಾಲ್ಮೀಕಿಯು ಸಾನಾದಿ ನಿತ್ಯ ಕರ್ಮಗಳನ್ನು ನೆರವೇರಿಸಿ ತನ್ನ ಆಶ್ರಮಕ್ಕೆ ಬಂದನು. - ಅಷ್ಟರಲ್ಲಿ ಆಶ್ರಮಕ್ಕೆ ಬ್ರಹ್ಮನು ಬಂದಿದ್ದನು. ವಾಲ್ಮೀಕಿಯು ಬ್ರಹ್ಮನ ನ್ನು ಯೋಗ್ಯವಾದ ಆಸನದಲ್ಲಿ ಕುಳ್ಳಿರಿಸಿ, ಅರ್ಥ್ಯಪಾದ್ಯಾದಿ ಸಾಮಗ್ರಿಗಳಿಂದ ಪೂಜಿಸಿದನು. ಬಳಿಕ ಬ್ರಹ್ಮನು “ಎಲೈ ವಾಲ್ಮೀಕಿಯೇ, ನೀನು ನದೀತೀರದಲ್ಲಿ ಮಾನಿಷಾದ' ಎಂಬ ಶ್ಲೋಕವನ್ನು ಹ್ಯಾಗೆ ಉಚ್ಚಾರಣೆ ಮಾಡಿದೆ. ಅದರಂತೆ ಮುಂದೆ ನಡೆಯುವ, ಶ್ರೀ ರಾಮನ ಚರಿತ್ರೆಯನ್ನು ನೀನು ರಚಿಸು. ನನ್ನ ಕೃಪ ಯಿಂದ ಎಲ್ಲಾ ಕಥಾನಕವೂ ನಿನ್ನ ಮನಸ್ಸಿಗೆ ಗೋಚರವಾಗಲಿ, ರಾಮ-ಲಕ್ಷಣ. ಸುಗ್ರೀವ-ವಾಲಿ-ಮಾರುತಿಗಳೇ ಮೊದಲಾದವರ ಸಮಸ್ತ ಗೋಪ್ಯವಿಚಾರಗಳೂ ನಿನಗೆ ಸೇರಿಸಲಿ, ನೀನು ಬರೆದ ಚರಿತ್ರೆಯು ಎಂದೂ ಸುಳ್ಳಾಗದಿರಳಿ, ನೀನು ರಚಿಸಿದ ಶ್ರೀ ರಾಮನ ಚರಿತ್ರೆಯು ಸೂರ್ಯ-ಚಂದ್ರ,-ನಕ್ಷತ್ರ,-ಭಾಮಿ-ಸ ಮುದ್ರ, ಇವುಗಳಿರುವ ವರೆಗೂ ಪ್ರಸಿದ್ದವಾಗಿರಲಿ.' ಎಂದು ಮಾತನಾಡಿ, ನಾರ ದರಿಂದ ಉಪದಿಷ್ಟವಾದ ಶ್ರೀ ರಾಮಚರಿತ್ರೆಯನ್ನು ವಾಲ್ಮೀಕಿಗೆ ಬ್ರಹ್ಮನು ಮ ಈ ಉಪದೇಶ ಮಾಡಿ, ಸತ್ಯಲೋಕಕ್ಕೆ ಪ್ರಯಾಣಮಾಡಿದನು. ಅನಂತರ ವಾ ಲ್ಮೀಕಿಯು ಪರಮಾನಂದದಿಂದ ಶ್ರೀ ರಾಮಚರಿತ್ರೆಯನ್ನು ಬರೆದನು. ಈಶ್ವರನು ಗ್ರಹದಿಂದ ಆಶತಕೋಟಿರಾದಾಯಣವೂ ಅನುಷ್ಟುಪ್ ಶ್ಲೋಕಗಳಿಂದ ಈ ರ್ಣವಾಯಿತು - ಪಾರ್ವತಿಯೇ, ವಾಲ್ಮೀಕಿಯು ರಚಿಸಿದ ರಾಮಾಯಣವನ್ನು ಕೇಳಿ ದೇವತೆ ಗಳು ಸಂತುಷ್ಟರಾದರು. ಈ ಮಹಾಕಾವ್ಯದ ವಿಷಯವಾಗಿ ದೇವತೆಗಳು, ಗಂಧ ಮರು, ದಾನವರು, ರಕ್ಷಸರು ಇವರುಗಳಲ್ಲಿ ಪರಸ್ಪರ ಕಲಕಬಿತ್ತು, ಆಗ ನಾನು ಸಮಸ್ತರನ್ನೂ ಕರೆದುಕೊಂಡು ಶ್ರೀಮನ್ನಾರಾಯಣನ ಬಳಿಗೆ ಬಂದನು. ನಾರಾಯಣನು ಶೇಷಶಾಯಿಯಾಗಿದ್ದನು. ಆ ಪರಮಾತ್ಮನ ಸಮಕ್ಷವಾಗಿ ನಾನು ಆ ಮಹಾಕಾವ್ಯವನ್ನು ಮೂರುಭಾಗ ಮಾಡಿ ಮೂರು ಲೋಕಗಳಿಗೂ ಸರಿಯಾಗಿ ಹಂಚಿಕೊಟ್ಟನು. ಬಳಿಕ ಅವುಗಳನ್ನು ಆಯಾ ಲೋಕದವರು ತಮ್ಮ ತಮ್ಮ ಅನುಕೂಲತೆಯಂತ ಅನೇಕ ಭಾಗಗಳನ್ನಾಗಿ ಮಾಡಿಕೊಂಡರು. ಮುಂದೆ ಅಲ್ಲಾ ಯುಷ್ಯವಂತರಾದ ಜನರಿಗೆ ಈ ಮಹಾಪ್ರಬಂಧವು ತಿಳಿಯಲು ಸಾಧ್ಯವಿಲ್ಲವೆಂದು, ಕೃಪಾನಿಧಿಯಾದ ವೇದವ್ಯಾಸರು, ಹದಿನೆಂಟು ಪುರಾಣಗಳು, ಉಪಪುರಾಣಗಳು ಇತಿಹಾಸಗಳು ಎಂಬ ಭೇದಗಳಿಂದ ಅದೇ ರಾಮಾಯಣವನ್ನೇ ವಿಸ್ತರಿಸಿದರು.