ಯಾಕಾಂಡ. ೧೨೧ ಅನೇಕ ಮುನಿಗಳು ಅದೇ ರಾಮಾಯಣದ ಒಂದು ಭಾಗದಿಂದ ಆರು ಶಾಸ್ತ್ರ ಗಳನ್ನೂ ನಿರ್ಮಾಣಮಾಡಿದರು, ಬಹಳ ಹೇಳುವದರಿಂದೇನು? ಮಹಾತ್ಮರು ಎಷ್ಟು ಗ್ರಂಥಗಳನ್ನು ಈ ಮೊದಲೇ ರಚಿಸಿರುವರೋ, ಮುಂದೆ ಎಷ್ಟು ರಚಿಸುವರೋ, ಈಗ ಎಷ್ಟು ರಚಿಸುತ್ತಿರುವ, ಆಗ್ರಂಥಗಳಲ್ಲಿ ರಾಮಾಯಣದಿಂದಲೇ ಆದವೆಂದು ತಿಳಿ ಯತಕ್ಕದ್ದು, ನಾರಾಯಣನು ರಾಮಾಯಣದಲ್ಲಿರುವ ಸಾರವೆಂದು ನಾಲ್ಕು ಶ್ಲೋ ಕಗಳನ್ನು ಬ್ರಹ್ಮನಿಗೆ ಉಪದೇಶಿಸಿದನು. ಕೆಲವು ಕಾಲದ ಮೇಲೆ ಆತನು ನಾರದರಿಗೆ ಈ ತತ್ವವನ್ನು ಬೋಧಿಸಿದನು. ನಾರದರಿಂದ ವ್ಯಾಸರು ಈ ತತ್ವವನ್ನು ತಿಳಿದು ಸಮ ಸ್ತ್ರ ಗ್ರಂಥಗಳಲ್ಲ ಈ ವಿಷಯವನ್ನು ಪ್ರಚಾರಮಾಡಿದರು. ಆ ವಿಷಯವು ಬಹಳ ದುರವಗಾಹವಾದದ್ದು. ಆದರೂ ಅದರ ಸಾರವನ್ನು ನಿನಗೆ ಬೋಧಿಸುವೆನು, ನಾರಾಯಣನು ಹೇಳಿದ್ದೇನಂದರೆ-ನಾನು ಪೂರ್ವದಲ್ಲಿ ಒಬ್ಬನೇ ಇದ್ದೆನು, ಸರ್, ಅಸತ ಎಂಬ ಭಾಗಗಳಾವವೂ ಇರಲಿಲ್ಲ. ಅನಂತರ ಉಂಟಾದ ಸಮಸ್ತವೂ ನಾನೇ ಇದ್ದೇನೆ. ಪ್ರಳಯವಾದನಂತರ ಉಳಿಯತಕ್ಕವನೂ ನಾನೇ, ಆತ್ಮನಿಗಿಂತ ಲೂ ಬೇರೆ ಯಾವ ಪದಾರ್ಥಗಳು ಗೋಚರವಾಗುವವೋ, ಆತ್ಮನೇ ಇಲ್ಲವೆಂದು ಏನು ತೋರುವದೋ, ಅದೆಲ್ಲ ಭ್ರಮದ ವ್ಯಾಪಾರವಾಗಿದೆ. ಅದೇ ಭಗವಂತನ ಮಾಯೆಯು, ಯಾವ ರೀತಿಯಾಗಿ ಮಹಾಭೂತಗಳಲ್ಲಿ ಉಚ್ಚ ನೀಚಗಳಾದ ಭೂತ ಗಳು ಒಳಕೊಳ್ಳುತ್ತವೆಯೋ, ಮಹಾಭೂತಗಳು ಉಚ್ಚ ನೀಚ ಭೂತಗಳ ಮಧ್ಯೆ ಹ್ಯಾಗೆ ಒಳಕೊಳ್ಳುವದು ಅಸಂಭವವೋ, ಹಾಗೆ ನನ್ನಲ್ಲಿ ಈ ಸಮಸ್ತ ಜಗತ್ತೂ ಅಂ ತರ್ಭೂತವಾಗುವದು, ನಾನು ಅದರಲ್ಲಿ ಸೇರಲು ಸಾಧ್ಯವಿಲ್ಲ. ನಾನು ಯಾವಾ ಗಲೂ ಎಲ್ಲ ಕಡೆಯಲ್ಲಿ ಇರುವೆನೆಂದು ತಿಳಿಯಬೇಕು. ಪಾರ್ವತಿಯೇ, ಇದರಲ್ಲಿ ಎಲ್ಲ ಶಾಸ್ತ್ರಾರ್ಥಗಳಾ ಕೂಡಿರುವವು. ಈ ಶಕಗಳ ನಿಶ್ಚಯವು ತಿಳಿಯಿತೆಂದರೆ, ಕಾರ್ಯಭಾಗವು ಮುಗಿಯಿತೆಂದು ತಿಳಿಯ ತಕ್ಕದ್ದು, ಅಧಾರ್ಮಿಕರಾದ ಜನಗಳ ದುಷ್ಟತನದಿಂದಖಿಲಾದ 89ಮಚರಿತ್ರೆ ಯನ್ನು ವ್ಯಾಸಮಹರ್ಷಿಗಳು ಇಪ್ಪತ್ತು ನಾಲ್ಕು ಸಾವಿರ ಶ್ಲೋಕಗಳುಳ್ಳ ಏಳು ಆಂಡಗಳಿಂದ ಕೂಡಿದ ಒಂದು ಗ್ರಂಥವನ್ನು ರಚಿಸುವರು. ಅನಂತರ ಬಹು ಹರಿಯ 8ಾಮಯಣಗಳನ್ನು ಅನೇಕ ಕವಿಗಳು ಪ್ರಕಟಮಾಡುವರು. ನಾನು ಈಗ ಹೇಳಿದ ವಿಷಯವೇ ವಾಲ್ಮೀಕಿ ನಿರ್ಮಿತವಾದ ಶತಕೋಟಿodಪಯಣದ ಸರ 5ಾಗಿದೆ. ಅನೇಕರು ರಾಮಾಯಣಗಳನ್ನು ಬರೆದರೂ ತಪಸ್ಸಿದ್ದನಾದ ಪಲ್ಮೀಕಿ ಯಶತಕಟ ರಾಮಾಯಣಕ್ಕೆ ಅವು ಯಾವೂ ಸರಿಬಾರವು. ಆದೇ ವಿಷಯವನ್ನು ೧
ಪುಟ:ಶ್ರೀ ಮದಾನಂದ ರಾಮಾಯಣ.djvu/೧೨೭
ಗೋಚರ