ಈ ಪುಟವನ್ನು ಪರಿಶೀಲಿಸಲಾಗಿಲ್ಲ.
99 ಶ್ರೀಮದಾನಂದ ರಾಮಾಯಣ, ನಿನಗೆ ಹೇಳಲಾರಂಭಿಸಿರುವೆನು. ಈ ಚತ್ರೆಯನ್ನು ಮುಂದೆ ರಾಮದಾಸನು ತನ್ನ ಶಿಷ್ಯನಾದ ವಿಷ್ಣುದಾಸನಿಗೆ ಹೇಳತಕ್ಕವನಿರುವನು.
- ಗಂಗಾಸರಯೂ-ಸಂಗವು ಪ್ರಯಾಣ, ಅದಕ್ಕೆ ಪಾರ್ವತಿಯು 'ಎಲೈ ಶಂಕರನೇ, ವಿಷ್ಣುದಾಸನು ಯಾರು? ಆತನಿಗೆ ಶಾರದಾಸನು ರಾಮಾಯಣವನ್ನು ಯಾವಾಗ ಹೇಳುವನು' ಎಂದು ಕೇಳಿದಳು. ಪರಮೇಶ್ವರನು ಪಾರ್ವತಿಯೇ ಕೇಳು, ಭಾರತ ವರ್ಷದಲ್ಲಿ ದಂಡಕಾರಣ್ಯದ ಲ್ಲಿರುವ ಗೋದಾವರೀತೀರದಲ್ಲಿರುವ ಅಬ್ಬವೆಂಬ ಕ್ಷೇತ್ರದಲ್ಲಿ ನೃಸಿಂಹನೆಂಬ ಒಬ್ಬ ಮುನಿಯು ವಾಸಮಾಡುವನು. ಆತನಿಗೆ ರಾಮನೆಂಬ ಒಬ್ಬ ಮಗನು ಹುಟ್ಟುವ ನು, ಆ ಮಗನಿಗೆ ವಿಷ್ಣು ವೆಂಬ ಒಬ್ಬ ಶಿಷ್ಯನಾಗುವನು, ಆ ಗುರುಶಿಷ್ಯರಿಬ್ಬರೂ ಶ್ರೀ ರಾಮ-ಸೇವೆಯಲ್ಲಿ ಬಹು ಪ್ರೀತಿಯುಳ್ಳವರಾಗುವರು. ಆದ್ದರಿಂದ ಅವರಿಗೆ ದಾಸರೆಂಬ ಹೆಸರು ಬರುವದು. ಆ ರಾಮದಾಸನು ಶಿಷ್ಯನೊಡನೆ ತೀರ್ಥಾಟನ ಮಾಡುತ್ತ ಗಯೆಯಲ್ಲಿ ಪಿತೃಶ್ರಾದ್ಧಾದಿಗಳನ್ನು ನೆರವೇರಿಸಿ, ಗುರುಗಳ ಅಪ್ಪಣೆಯಂ ತೆ ಗೃಹಸ್ಥಾಶ್ರಮವನ್ನು ಹೊಂದುವನು. ಅನಂತರ ಆತನು ತನ್ನ ಶಿಷ್ಯನಿಗೆ ಈ ವಿಷಯವನ್ನು ಬೋಧಿಸುವನು. ಒಂದಾನೊಂದು ಕಾಲದಲ್ಲಿ ಕಾರಕಾಂಡವನ್ನೆಲ್ಲ ಗುರುಗಳ ಮುಖದಿಂದ ಕೇಳಿದ ವಿಷ್ಣುದಾಸನು 'ಪ್ರಭೋ, ಮಾರಕಾಂಡವೆಲ್ಲ ಕೇಳಿದ್ದಾಯಿತು. ಅದರಲ್ಲಿ ಸೀತಾರಾಮರ ಸುಖಸಮಾಚಾರವೇ ಬರಲಿಲ್ಲ, ಆದ್ದರಿಂದ ಅವರು ಹ್ಯಾಗೆ ಸುಖಗಳನ್ನು ಅನುಭವಿಸಿದರು, ಅಶ್ವ ಮೇಧವನ್ನು ಹ್ಯಾ ಗೆ ಮಾಡಿದರು, ಪುತ್ರ-ಪೌತ್ರರ ವಿವಾಹಗಳನ್ನು ಯಾವರೀತಿ ನಡೆಸಿದರು. ಈ ಎಲ್ಲ ವನ್ನೂ ನನಗೆ ತಿಳಿಸಬೇಕು' ಎಂದು ಪ್ರಾರ್ಥಿಸಿದನು. ಆಗ ಕಾಮದಾಸನು 'ಪ್ರಿಯ ಶಿಷ್ಯನೇ, ಬಹಳ ಉತ್ತಮವಾದ ಪ್ರಶ್ನೆ ಮೂಡಿದೆ. ಆನಂದಕರವಾದ ಶ್ರೀರಾಮನ ಚರಿತ್ರೆಯನ್ನು ಹೇಳುವೆನು ಕೇಳು, ಶ್ರೀರಾಮನು ಸಮಸ್ತಶತ್ರುಗಳನ್ನೂ ಗೆದ್ದು ನಾ ರ್ವಭೌಮ ಪದವಿಯನ್ನನುಭವಿಸುತ್ತಿರುವ ಕಾಲದಲ್ಲಿ ಸೀತೆಯು “ಎಲೈ ರಘುನಾಥನೆ, ನನ್ನ ದೊಂದು ಪ್ರಾರ್ಥನೆ ಇದೆ. ಅದನ್ನು ನೆರವೇರಿಸುವೆನೆಂದು ಭರವಸೆಕೊಟ್ಟರೆ, ವಿಜ್ಞಾಪನೆ ಮಾಡಿಕೊಳ್ಳುವೆನು ಎಂದಳು. ಆಗ ಶ್ರೀರಾಮನು ಪ್ರಿಯೆ, ನಿನಗೆ ಏನು ಇಚ್ಛೆ ಇರುವದುಹೇಳು. ಅದನ್ನು ಈಗಲೆ ನೆರವೇರಿಸಿ ಕೊಡುವೆನು' ಎಂ
ದು ಹೇಳಿದನು, ಬಳಿಕ ಸೀತೆಯು (ಪ್ರಭೂ, ನಾವು ಇಲ್ಲಿಂದ ದಂಡಕಾರಣ್ಯಕ್ಕೆ ಹೋಗು ರಾಗ ಶೃಂಗವೇರಪುರದಲ್ಲಿ ಒಂದು ರಾತ್ರಿ ವಾಸಮಾಡಿ, ನಾನೆಯಿಂದ ಗಂಗಾ