ಪುಟ:ಶ್ರೀ ಮದಾನಂದ ರಾಮಾಯಣ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಕೆಂಡ. ೧೨೭ ನೇತ್ರಗಳಿಂದ ಆನಂದಾಶ್ರುಗಳು ಥಟಧಟನೆ ಸುರಿದವು, ಆ ಬಿಂದುಗಳು ಮೊ ದಲು ಬಿಂದು ಸರೋವರದಲ್ಲಿ ಬಿದ್ದವು. ಅನಂತರ ಮಾನಸಸರೋವರಕ್ಕೆ ಬಂ ದು ಸೇರಿದವು. ಅಷ್ಟರಲ್ಲಿ ನಿನ್ನ ವಂಶದವನಾದ ವೈವಸ್ಮತಮನುವು ಯಜ್ಞ ದನ್ನು ಮಾಡಬೇಕೆಂದು ಬಯಿಸಿದನು, ಮತ್ತು ಕುಲಗುರುಗಳಾದ ವಸಿಷ್ಠರಿಗೆ ಮಹಾಸ್ವಾಮೀ, ನಾನು ಈ ಅಯೋಧ್ಯೆಗೆ ರಾಜಿನಾಗಿರುವೆನಷ್ಟೆ, ಇಂಥಾ ನನ್ನ ರಾಜಧಾನಿಯ ಬಳಿಯಲ್ಲಿ ಯಜ್ಞ ಮಾಡಲು ನನಗೆ ಆಶೆಯುಂಟಾಗಿರುವದು? ಎಂದು ಹೇಳಿಕೊಂಡನು. ಆಗ ಕುಲಗುರುಗಳು “ಮಹಾರಾಜನೇ, ನೀನು ಮ ಡಿದ ಯೋಚನೆಯು ಬಹಳ ಶ್ರೇಷ್ಠವಾದದ್ದೇ ಸರಿ. ಆದರೆ ಈ ನಗರಿಯ ಬಳಿ ಯಲ್ಲಿ ಜಲಸೌಕರ್ಯಗಳು ಮಾತ್ರ ಇರುವದಿಲ್ಲ, ಆದ ಕಾರಣ ನೀನು ಹಿಮವ ಸ್ಪರ್ವತದಿಂದ ಪತಿತಪಾವನೆಯಾದ ಒಂದು ನದಿಯನ್ನು ಬರಮಾಡು ಎಂದರು. ವೈವಸ್ವತಮನುವು ಗುರುಗಳ ಮಾತುಗಳನ್ನು ಕೇಳಿದೊಡನೆ, ಧನುಸ್ಸಿನಲ್ಲಿ ಬಾಣವನ್ನು ಸೇರಿಸಿ ಮಾನಸಸರೋವರಕ್ಕೆ ಹೊಡೆದನು. ಆ ಬಾಣವು ಅಲ್ಲಿ ಸೇರಿ ದೊಡನೆ, ಅಲ್ಲಿಂದ ಶ್ರೇಷ್ಠವಾದ ಈ ನದಿಯು ಉತ್ಪನ್ನವಾಗಿ, ಬಾಣದ ಮಾರ್ಗವನ್ನೇ ಅನುಸರಿಸಿ ಅಯೋಧ್ಯೆಗೆ ಬಂತು. ಶರಪ್ರಯೋಗದಿಂದ ಬಂತಾದ್ದರಿಂದ ಶರ ಎಂತಲೂ, ಸರೋವರದಿಂದ ಬಂತಾದ್ದರಿಂದ ಸರಯೂ ಎಂತಲೂ ಇದಕ್ಕೆ ಹೊಸ ರುಗಳಿವೆ, ಈ ನದಿಯು ಮುಂದೆ ಪ್ರವಹಿಸುತ್ತ ಸಾಗರವನ್ನು ಸೇರಿತು. ಮುಂದೆ ಕೆಲವು ಕಾಲಗಳ ಮೇಲೆ ಕಪಿಲಮಹರ್ಷಿಯ ಕೋಪದಿಂದ ಸಗರ ಚಕ್ರವರ್ತಿಯು ಅರವತ್ತು ಸಾವಿರ ಮಂದಿ ಮಕ್ಕಳು ಬೂದಿಯಾದರು. ಅವರನ್ನು ಉದ್ದಾರ ಮಾಡ ಬೇಕೆಂದು ಭಗೀರಥನು ತಪಸ್ಸಿನಿಂದ ಶಂಕರನನ್ನು ಸಂತೋಷಗೊಳಿಸಿ, ದೇವಗಂಗೆ ಯನ್ನು ಭೂಲೋಕಕ್ಕೆ ತಂದನು ಆ ಭಾಗೀರಥಿಯು ಈ ಸರಯೂ ನದಿಯೊಡ ನೆ ಕೂಡಿಕೊಂಡಿತು. ಎಲೈ ಪರಮೇಶ್ವರನೇ, ಇದೇ ಭಾಗೀರಥಿಯು ಮುಂದೆ ಕಲಿಯುಗದಲ್ಲಿ ಗಂಗೆ ಎಂಬ ಹೆಸರಿನಿಂದ ಪ್ರಸಿದ್ದ ಳಾಗುವಳು. ಈ ಜಾಹ್ನವಿ ಯು ನಿನ್ನ ಪಾದಾಂಗುಷ್ಠದಿಂದ ಉತ್ಪನ್ನಳಾದ್ದರಿಂದ ಸಮಸ್ತ ಜನರ ಪಾಪಗಳ ನ್ನು ನಾಶಮಾಡುವಳು. ಎಲೈ ಶ್ರೀ ರಾಮನೆ, ಇನ್ನು ನೀನು ಕೇಳತಕ್ಕ ವಿಷ ಯಗಳೇನಿರುತ್ತವೆ? ” ಎಂದರು. ಈ ಪೂರ್ವವೃತ್ತಾಂತವನ್ನು ಕೇಳಿ, ಶ್ರೀ ರಾಮನು (ಎಲೈ ಲಕ್ಷಣನೇ, ಬಾಣ ದನ್ನು ಪ್ರಯೋಗಿಸಿ ಸರಯೂ ನದಿಯನ್ನು ಇಲ್ಲಿಗೆ ಬರುವಂತೆ ಮಾಡು ಎಂದು ಆಜ್ಞಾಪಿಸಿದನು ಲಕ್ಷ್ಮಣನು ಆಗಲೇ ತನ್ನ ಧನುಸ್ಸಿನಲ್ಲಿ ಬಾಣವನ್ನು ಜೋಡಿಸಿ