ಪುಟ:ಶ್ರೀ ಮದಾನಂದ ರಾಮಾಯಣ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಶ್ರೀಮದಾನಂದ ರಾಮಾಯಣ ಸರಯೂ ನದಿಯು ಇರುವಲ್ಲಿಗೆ ಪ್ರಯೋಗಿಸಿದನು. ಅನಂತರ ಸರಯೂ ನದಿ ಯು ಎರಡು ಭಾಗವಾಯಿತು, ಮತ್ತು ಒಂದು ಭಾಗವು ಮುದ್ದಲ ಮಹರ್ಷಿಗಳ ಅಶ್ರಮದ ಬಳಿಯಲ್ಲಿ ಪ್ರವಹಿಸುತ್ತ ಗಂಗಾನದಿಯನ್ನು ಸೇರಿತು. ಶ್ರೀ ರಾಮನು ಸರಯೂ ನದಿಯನ್ನು ನೋಡಿ, ಪರದು ಹರ್ಷದಿಂದ ಇಲ್ಲಿ ಮುಂದ ದೃಡೀ ಎಂಬ ನಗರವಾಗಲಿ, ಭೋ ಮಹರ್ಷಿಗಳೇ, ತಮ್ಮ ವಸತಿಯಿಂದ ಈ ಸ್ಥಾನ ವು ಪರಮ ಪವಿತ್ರವಾಗಲಿ” ಎಂದನು. ಬಳಿಕ ಜಾನಕಿಯನ್ನು ಕರೆಸಿ ಲಕ್ಷಣನ ಅದ್ಭುತ ಕೃತ್ಯವನ್ನು ತಿಳುಹಿದನು, ಮತ್ತು 'ಎಲೈ ಸೀತೆಯೇ, ನೀನು ಕೌಸಲ್ಯ, ಅರುಂಧತಿ ಮೊದಲಾದ ಸಮಸ್ತ ಗುರುಜನಗಳೊಡಗೂಡಿ, ಗಂಗಾಸರಯೂ ನದಿ ಗಳ ಹಳೇ ಸಂಗಮಕ್ಕೆ ಹೋಗಿ ಪೂಜಾವಿಧಿಯನ್ನು ತೀರಿಸಿಕೊಂಡು ಬಾ, ಆ ನಂತರ ನಾನು ಇಲ್ಲಿ ಈ ನೂತನವಾದ ನದಿಯನ್ನು ಪೂಜೆಮಾಡಬೇಕೆಂದಿರುವೆನು ಎಂದನು. ಶ್ರೀ ರಾಮನ ಈ ಮಾತುಗಳನ್ನು ಕೇಳಿ, ಸೀತಾದೇವಿಯು ಪೂಜಾ ಸಾಮಗ್ರಿಗಳನ್ನು ತರಲು ಸಖಿಯರಿಗೆ ಅಪ್ಪಣೆಮಾಡಿದಳು, ಶ್ರೀ ರಾಮನ ಅಪ್ಪಣೆಯಂತೆ ಸೀತಾದೇವಿಯು ಪೂಜಾಸಾಮಗ್ರಿಗಳನ್ನು ತೆಗೆದುಕೊಂಡು ವೃದ್ದ ಸರಯೂ ಸಂಗಮಕ್ಕೆ ಸಮಸ್ತ ಬಂಧುಗಳೊಡನೆ ಪ್ರಯಾಣ ಮಾಡಿದಳು. ಅಲ್ಲಿ ಅರಿಶಿನ, ಕುಂಕುಮಗಳೇ ಮೊದಲಾದ ಮಂಗಳ ದ್ರವ್ಯಗಳಿಂದ ಗಂಗೆಯನ್ನು ಪೂಜಿಸಿ, ಪೂರ್ಣಫಲಸಹಿತವಾದ ತಾಂಬೂಲವನ್ನು ವಸ್ತ್ರಸಹಿತ ಭಾಗಿ ಭಾಗೀರಥಿಗೆ ಸಮರ್ಪಿಸಿದಳು, ಮತ್ತು ಸಾವಿರಾರು ಜನ ಬ್ರಾಹ್ಮಣರಿಗೂ ಸುಮಂಗಲೆಯರಿಗೂ ಪಕ್ಕಾನ್ನಗಳಿಂದ ಭೋಜನ ಮಾಡಿಸಿ, ನಾನಾವಿಧಗಳಾದ ಉಪಾಯನಗಳಿಂದ ಸಂತೋಷಗೊಳಿಸಿದಳು. ಆಗ ವಸಿಷ್ಠರೇ ಮೊದಲಾದ ಬ್ರಹ್ಮ ನಿಷ್ಠ ರೂ, ಅರುಂಧತಿಯೇ ಮೊದಲಾದ ಪತಿವ್ರತಾ ಶಿರೋಮಣಿಗಳೂ ಸೀತಾ ದೇವಿಗೆ ಆಶೀರ್ವಾದ ಮಾಡಿದರು. ಬಳಿಕ ಸೀತಾದೇವಿಯು ಶ್ರೀ ರಾಮನು ಇನ್ನೂ ಭೋಜನ ಮಾಡಿಲ್ಲವೆಂದು ಮನಸ್ಸಿನಲ್ಲಿ ಯೋಚಿಸಿ, ತಾನೂ ಭೋಜನ ಮಾಡದೆ ಪರಿವಾರ ಸಹಿತಳಾಗಿ ವಿಮಾನವನ್ನೇರಿ ಶ್ರೀ ರಾಮನಿದ್ದಲ್ಲಿಗೆ ಬಂದು ಸೇರಿದಳು, ಶ್ರೀ ರಾಮನು ಸೀತಾಸಮೇತನಾಗಿ, ನೂತನ ಸರಯೂ ಪೂಜೆಯ ನ್ನು ಅತಿ ವಿಜೃಂಭಣೆಯಿಂದ ನೆರವೇರಿಸಿದನು ಮತ್ತು ಸೀತಾದೇವಿಗಿಂತ ಅಧಿಕ ರಾಗಿ ವಸ್ತ್ರಾಭರಣ ದಾನಗಳನ್ನು ಬ್ರಾಹ್ಮಣ,ಸುಮಂಗಲೆಯರಿಗೆ ಸಮರ್ಪಿಸಿದನು, ಸಾವಿರಾರು ಜನ ಬ್ರಾಹ್ಮಣ ಸಂತರ್ಪಣೆಯನ್ನು ಅತಿ ಸಂಭ್ರಮದಿಂದ ನಡೆಸಿದನು. ಈ ಸಮಾರಂಭವು ನೆರವೇರಿದ ಬಳಿಕ ಶ್ರೀ ರಾಮನು ಭೋಜನಾದಿಗಳನ್ನು ತೀರಿಸಿ