ho ಶ್ರೀಮದಾನಂದ ರಾಮಾಯಣ, ಈ ಆಶ್ರಮಗಳಿಗೆ ತೆರಳುತ್ತಿದ್ದರು. ಒಂದು ದಿವಸ ಕುಂಭೋದರನೆಂಬ ಬ್ರಾಹ ಣನು ಗಂಗಾಯಾತ್ರೆಗಾಗಿ ಹರಟು ಜಾರಿಯಲ್ಲಿ ಕಾಣುತ್ತಿರುವ ಆ ಸ್ಥಾನಕ್ಕೆ ಬಂದನು, ಆತನು ಶ್ರೀ ರಾಮನ ದೂತರನ್ನು ನೋಡಿ, “ನೀವು ಯಾರು? ಈ ಉನ್ನತವಾದ ಚಿತ್ರ-ವಸ್ತ್ರಗಳಿಂದ ಕೂಡಿದ ಧ್ವಜಸ್ತಂಭವು ಯಾವ ರಾಜನದು? ಇಲ್ಲಿ ನಮಗೆ ಕೇಳಿ ಬರುತ್ತಿರುವ ಜಯಜಯ ಶಬ್ದಗಳು ಯಾರವು? ಅವುಗಳನ್ನೆ ೪ ಸವಿಸ್ತಾರವಾಗಿ ಹೇಳಿರಿ” ಎಂದು ಪ್ರಶ್ನೆ ಮೂಡಿದನು. ಆಗ ದೂತರು (ಎಲೆ ಬ್ರಾಹ್ಮಣೋತ್ತಮರೇ, ಅಯೋಧ್ಯಾಧಿಪತಿಯಾದ ಶ್ರೀ ರಾಮಚಂದ್ರನು ಇಲಿ ಯಾತ್ರೆಗಾಗಿ ಬಂದಿರುವನು. ಆತನು ಇಲ್ಲಿ ಮಹಾ ವಿಭವದಿಂದ ಒಂದು ಅನ್ನ ಸ ಇವನ್ನಿರಿಸಿರುವನು. ಅಲ್ಲಿ ತೃಪ್ತರಾದ ಬ್ರಾಹ್ಮಣರು ಶ್ರೀ ರಾಮನಿಗೆ ಆಶೀರ್ವಾ ದ ಮಾಡುತ್ತಿರುವರು. ಅದೇ ಶಬ್ದಗಳೇ ಇಲ್ಲಿಗೆ ಕೇಳಬರುವವು, ಮಹಾನ್ನಾ ಮೀ, ತಾದಾದರೂ ಒಳಕ್ಕೆ ದಯಮಾಡಿಸಬೇಕೆಂದು ಪ್ರಾರ್ಥಿಸುವೆವು” ಎಂ ದರು. ಆಗಲಾಬ್ರಾಹ್ಮಣನು ಈ ಮಾತುಗಳನ್ನು ಕೇಳಿ ಹಿಂತಿರುಗಿದನು. ಶ್ರೀರಾ ದುದೂತರು ಆ ಬ್ರಾಹ್ಮಣನನ್ನು ದಾರಿಯಲ್ಲಿ ತಡೆದು 'ಮಹಾಸ್ವಾಮೀ, ಇದೇನು? ಶ್ರೀ ರಾಮನ ಕೋರಿಕೆಯನ್ನು ನೆರವೇರಿಸದೆ ದಯಮಾಡಿಸುವಿರಲ್ಲ?' ಎಂದರು. ಅಗಲೂ ಬ್ರಾಹ್ಮಣನು ಏನೂ ಮಾತನಾಡದೆ ಮುಂದೆ ನಡೆದನು. ಬಳಿಕ ಶ್ರೀಶ ಮುಸೇವಕರು ಬಹಳ ನಿರ್ಬ೦ಧ ಪಡಿಸಿದರು. ಆಗಲಾ ಬ್ರಾಹ್ಮಣನು ಮನಸ್ಸಿನಲ್ಲಿ ಇಂಥಾ ಜಗನ್ನಾಯಕನಾದ ಶ್ರೀ ರಾಮನು ನಮ್ಮ ಭರತಖಂಡದಲ್ಲಿ ಹಾಗೆ ಯಾತ್ರೆ ಮಾಡ್ಯಾನು? ಈತನು ಅಲ್ಲಲ್ಲಿ ಯಾತ್ರೆ ಮಾಡದೆ ಹೋದರೆ ಒಂದಾದರು ಕ್ಷೇತ್ರಗಳಾಗುವಂತೆ ಇಲ್ಲ. ಒಳ್ಳೇದು. ಶ್ರೀ ರಾಮನು ಯಾತ್ರೆಗೆ ಹೊರಡುವ ಉಪಾಯವನ್ನೇ ಮಾಡುವೆನು' ಎಂದು ಯೋಚಿಸಿ , “ಎಲೈ ದೂತರೆ, ನಿಮ್ಮ ಶ್ರೀ ರಾಮನು ಲಂಕೆಯಲ್ಲಿ ಪುತ್ರ-ಮಿತ್ರ ಸಹಿತನಾದ ರಾವಣನೆಂಬ ಬ್ರಾಹ್ಮಣನನ್ನು ಕೊಂದಿರುವನು. ಆ ಪಾಪ ಪರಿಹಾರಕ್ಕಾಗಿ ಆತನು ತೀರ್ಥಾಟನವನ್ನೂ , ಯ ಜ್ಞವನ್ನೂ ಮಾಡಿಲ್ಲ. ಆದಕಾರಣ ನಾನು ಆತನ ಮನೆಯಲ್ಲಿ ಅನ್ನೋದಕಗಳನ್ನು ತೆಗೆದುಕೊಳ್ಳುವದಿಲ್ಲ. ಈ ಮಾತುಗಳನ್ನು ನಿಮ್ಮ ರಾಜನಿಗೆ ತಿಳುಹಿರಿ' ಎಂದು ಹೇಳಿ ಪ್ರಯಾಣ ಮಾಡಿದನು. ಬಳಿಕ ದೂತರು ಸಭಾಮಧ್ಯದಲ್ಲಿ ಸಿಂಹಾಸನಾರೂಢನಾದ ಶ್ರೀ ರಾಮ ನಿಗೆ ಈ ವರ್ತಮಾನವನ್ನು ತಿಳುಹಿದರು. ಶ್ರೀ ರಾಮನು ಆ ಬ್ರಾಹ್ಮಣನ ಅಭಿಪ್ರಾ ಯವನ್ನು ಮನಸ್ಸಿನಲ್ಲಿ ತಿಳಿದು, ಧನಿಷ್ಠ, ಸುಮಂತ್ರರೇ ಮೊದಲಾದ ಹಿರಿಯರ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೩೬
ಗೋಚರ