ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಯಾತ್ರಾಕಾಂಡ. han ಅನುಮತಿಯಂತೆ ಮೊದಲು ತೀರ್ಥಾಟನ, ಅನಂತರ ಯಜ್ಞ ಇವುಗಳನ್ನು ನಡಿಸ ಬೇಕೆಂದು ನಿಶ್ಚಯ ಮಾಡಿದನು, ಮತ್ತು ಸಮಸ್ತ ಸಂಭಾರಗಳನ್ನೂ ಅಯೋ ಧೈಯಿಂದ ತರಿಸಿದನು. ಬಳಿಕ ಶ್ರೀ ರಾಮನು ಪುಷ್ಟಕವನ್ನು ಕುರಿತು=ಎಲೈ ಸು ಪ್ರಕವೆ, ನೀನು ಪರಮ ಸಮರ್ಥನೇ ಇದ್ದೀಯೆ, ಈ ನನ್ನ ಸಮಸ್ತ ವೈಭವ, ರಥ ತುರಗ, ಗಜ, ಪ್ರಜೆಗಳು, ಇವರೆಲ್ಲರನ್ನೂ ಧರಿಸುವ ಸಾಮರ್ಥ್ಯವು ನಿನ ಗೆ ನನ್ನ ಕೃಪೆಯಿಂದ ಬರಲಿ.' ಎಂದು ಹೇಳಿದನು. ಶ್ರೀ ರಾಮನ ಈ ಮಾತುಗ ಳನ್ನು ಕೇಳಿ ಪುಷ್ಪಕವಿಮಾನವೆ ಹೆತ್ತು ಯೋಜನದಷ್ಟು ಅಗಲವಾಯಿತು. ಅಂ ಥಾ ವಿಮಾನದಲ್ಲಿ ಒಂದು ಪಟ್ಟಣದಲ್ಲಿ ಯಂತ ಸರ್ವಾನುಕೂಲಗಳೂ ಸಿದ್ದ ಏಕ ದವು. ಅಲ್ಲಲ್ಲಿ ಗಜಶಾಲೆಗಳು, ಅಶ್ವ ಶಾಲೆಗಳು, ವೀರರು ವಾಸಮಾಡುವ ದುಂ ದಿರಗಳು, ಸೀತಾದೇವಿಯೇ ಮೊದಲಾದ ಸಮಸ್ತ ರಾಜಸ್ತ್ರೀಯರಿಗೂ ಅಂತಃಪುರ ಗಳು, ವಸಿಷ್ಠರೇ ಮೊದಲಾದ ಮಹರ್ಷಿಗಳಿಗೆ ತಪಸ್ಸು ಮಾಡಲು ಯೋಗ್ಯವಾದ ವಿಶ್ರಾಂತಿಷ್ಟಾನಗಳು ಶಿಲ್ಪಿಗಳಿಂದ ಅದೇ ಕ್ಷಣದಲ್ಲಿ ರಚಿಸಲ್ಪಟ್ಟವು. ಎಲ್ಲರೂ ತ ಮ ತಮ್ಮ ಸ್ಥಳಗಳಲ್ಲಿ ಕುಳಿತರು.
- ಬಳಿಕ ಶ್ರೀ ರಾಮನು ಸೀತಾಸಮೇತನಾಗಿ ಅಯೋಧ್ಯಾನಗರಿಯಿಂದ ನಿಬಿ ಡವಾದ ಪುಷ್ಪಕವನ್ನು ಹತ್ತಿದನು. ಆಗ ಜಯಘೋಷಗಳಾದವು, ನಾನಾವಿಧ ಪಾದ ವಾದ್ಯಗಳು ಧ್ವನಿಮಾಡಿದವು, ನಾಲ್ಕು ದಿಕ್ಕುಗಳನ್ನೂ ತನ್ನ ಕಾಂತಿಯಿಂದ ಪ್ರಕಾಶಗೊಳಿಸುವ ಆ ಪುಷ್ಪಕವಿಮಾನವು ಶ್ರೀ ರಾಮನ ಅಪ್ಪಣೆಯಂತೆ ಪೂರ್ವ ದಿಕ್ಕಿಗೆ ತೆರಳಿತು. ಸೂರ್ಯನಂತೆ ಹೊಳೆಯುವ ಆ ವಿಮಾನವು ಅತಿ ವೇಗವಾಗಿ ಪ್ರಯಾಣಮಾಡುತ್ತಿದ್ದುದರಿಂದ ಅದರ ಸುತ್ತಲೂ ಇರುವ ಘಂಟೆಗಳು ಧ್ವನಿಮಾಡ ಲಾರಂಭಿಸಿದವು. ಸಮಸ್ತ ಸ್ತ್ರೀ-ಪುರುಷರೂ ಭೂಲೋಕದಲ್ಲಿರುವ ಅನೇಕ ವಿಚಿ ತ್ರಗಳನ್ನು ನೋಡುತ್ತ ಆನಂದದಿಂದ ವಿಮಾನದಲ್ಲಿ ಕುಳಿತಿದ್ದರು. ಶ್ರೀ ರಾಮನ ರಥಗಳಿಗೆ ನಾಲ್ಕು ಧ್ವಜಗಳಿದ್ದವು; ಯಾಕಂದರೆ, ಆತನು ಬಾಲ್ಯದಲ್ಲಿ ತಂದೆಯ ರಥದ ಮೇಲೆ ಕುಳಿತುಕೊಳ್ಳುತ್ತಿದ್ದ ನಾದ್ದರಿಂದ ಕೋವಿದರಧ್ವಜವು ಆತನ ರಥ ದಲ್ಲಿ ಕಂಗೊಳಿಸುತ್ತಿತ್ತು; ಮತ್ತು ಆತನು ಜಾಣಾಂಕಿತವಾದ ರಥದಲ್ಲಿ ಕುಳಿತು ತಾಟಿಕೆಯನ್ನು ನಾಶಮಾಡಿದ್ದರಿಂದ ಆತನ ರಥದಲ್ಲಿ ಬಾಣಧ್ವಜವೊಂದು ಪ್ರಕಾಶಿ ಸುತ್ತಿತ್ತು. ಇಂದ್ರನ ವಜ್ರಧ್ವಜವನ್ನು ರಾವಣನು ಯುದ್ಧದಲ್ಲಿ ಸುರಿದಾಗ ಶ್ರೀ ರಾಮನು ಅಂಜನೇಯನನ್ನು ಧ್ವಜಸ್ಥಾನದಲ್ಲಿ ಕುಳ್ಳಿರಿಸಿಕೊಂಡದ್ದರಿಂದ ರಥದಲ್ಲಿ ಕಪಿಧ್ವಜವೊಂದು ದೇದೀಪ್ಯಮಾನವಾಗಿತ್ತು, ಯುದ ದಲ್ಲಿ ರಾವಣನನ್ನು ಕೊಲ್ಲ