ಪುಟ:ಶ್ರೀ ಮದಾನಂದ ರಾಮಾಯಣ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಕರಿಂಡ. ತ್ರಿಯು “ಅಣ್ಣಾ, ತಾವು ಚಿತ್ರಕೂಟದ ಬಳಿಯಲ್ಲಿ ರುವ ತಮಸಾನದೀತೀರದಲ್ಲಿ, ಪಿಂಡದಾನ ಮಾಡಿದ ಸಮಯದಲ್ಲಿ ದಶರಥನು ತನ್ನ ಹಸ್ತದಿಂದಲೇ ಪಿಂಡಗಳನ್ನು ಸ್ವೀಕರಿಸಿದ್ದನ್ನು ನಾನು ನೋಡಿದ್ದೆನು. ಈಗ ಹೀಗಾಗಲು ಕಾರಣವೇನೋ ನ ನಗೆ ತಿಳಿಯದು. ಸೀತಾದೇವಿಯನ್ನು ಕೇಳಿದರೆ ಈ ವಿಷಯವು ಗೊತ್ತಾಗಬಹದು ಎಂದನು. ಆಗ ಶ್ರೀ ರಾಮನು ಜಾನಕಿಗೆ ಈ ವೃತ್ತಾಂತವನ್ನು ತಿಳಿಸಿದನು. ಸೀ ಶಿಯು ಭಯಪಡುತ್ತ ಹಿಂದೆ ನಡೆದ ಸಂಗತಿಯನ್ನು ವಿಸ್ತಾರವಾಗಿ ಹೇಳಿದಳು. ಶ್ರೀ ರಾಮನು (ಪ್ರಿಯಳೆ, ದಶರಥನು ಪಿಂಡಗಳನ್ನು ಸ್ವೀಕರಿಸಿದುದಕ್ಕೆ ಸಾಕ್ಷಿ ಯಾರಿರುವರು?” ಎಂದನು. ಆಗ ಜಾನಕಿಯು, 'ಮಾವಿನಮರ, ಪಲ್ಕು ನದಿ, ಕ್ಷೇತ್ರವಾಸಿಗಳು, ಬೆಕ್ಕು, ಪಕ್ಷಿಗಳು, ಆಕಳು, ಅಶ್ವತ್ಥ, ಸೂರ್ಯ ಇವರೇ ಈ ವಿಷಯದಲ್ಲಿ ಸಾಕ್ಷಿಗಳಾಗಿರುವರು' ಎಂದು ಪ್ರತ್ಯುತ್ತರ ಕೊಟ್ಟಳು. ಶ್ರೀ ರಾ ಮನು ಅವೆಲ್ಲವನ್ನೂ ವಿಚಾರಿಸುವಲ್ಲಿ ಸೂರ್ಯನ ಹೊರತಾಗಿ ಮತ್ತೆ ಯಾರೂ ಶ್ರೀ ರಾಮನ ಹೆದರಿಕೆಯಿಂದ ಆ ಸಂಗತಿಯನ್ನು ಒಪ್ಪಿಕೊಳ್ಳಲಿಲ್ಲ. ಸೂರ್ಯನು ಮಾತ್ರ “ಎಲೈ ಶ್ರೀ ರಾಮನೇ, ನಿನ್ನ ತಂದೆಯು ತೃಪ್ತನಾಗಿರುವನು. ಈ ವಿಷಯದಲ್ಲಿ ನೀನು ಸ್ವಲ್ಪವಾದರೂ ಅನುಮಾನ ಹೊಂದಲು ಕೆಲಸವಿಲ್ಲ' ಎಂದು ಹೇಳಿದನು. ಬಳಿಕ ಸೀತಾದೇವಿಯು ಸುಳ್ಳು ಹೇಳಿದ ಆ ಸಮಸ್ತ ಪ್ರಾಣಿಗಳಿಗೂ ಶಾಪವನ್ನಿ, ಇಳು. ಆದ ಕಾರಣ ಅಲ್ಲಿಯ ಆವೃಕ್ಷಗಳು ಫಲರಹಿತಗಳಾದವು. ತೀರ್ಥ ನಾಸಿಗಳು ಯಾವಾಗಲೂ ಅತೃಪ್ತರಾದರು. ಬೆಕ್ಕಿನ ಬಾಲವು ಅಸ್ಪೃಶ್ಯದ ಯಿತು. ಆಕಳಿನ ಮುಖವು ಅಮಂಗಲವಾಯಿತು, ಅಶ್ವತ್ಸನ ಎಲೆಗಳು ಯಾ ಪಾಗಲೂ ಚಂಚಲಗಳಾದವು. ಅಷ್ಟರಲ್ಲಿ ದಶರಥನು ವಿಮಾನಾರೂಢನಾಗಿ ಅಲ್ಲಿಗೆ ಬಂದು ಎಲೈ ಶ್ರೀ ರಾಮನೇ, ಸೀತಾದೇವಿಯಿಂದ ಪಿಂಡಗಳನ್ನು ಸ್ವೀಕ ರಿಸಿ ನಾನು ನರಕದಿಂದ ಮುಕ್ತನಾದನು. ಈಗಲೇ ನಾನು ಧನ್ಯನಾಗಿರುವನು. ' ಎಂದನು. ಆದರೂ ಶ್ರೀರಾಮನಿಗೆ ದಶರಥನು ಲೋಕಶಿ ಕ್ಷಣೆಗಾಗಿ ಗಯೆಯಲ್ಲಿ ಪಿತೃಶಾದ್ಧವನ್ನು ಮಾಡು ಎಂದು ಆಜ್ಞಾಪಿಸಿದನು ಆಗ ಶ್ರೀರಾಮನು ತಂದೆಯೇ, ತಾವು ಇಷ್ಟು ಆತುರದಿಂದ ವಾಲುಕಾಪಿಂಡ ಗಳನ್ನು ಯಾಕೆ ಸ್ವೀಕಾರ ಮಾಡಿದಿರಿ?' ಎಂದು ಪ್ರತ್ಯ ಮಾಡಿದನು. ದಶರಥನು Coಾಮಚಂದ್ರನೇ, ಕೇಳು, ಗಯೆಯಲ್ಲಿ ಶ್ರಾದ್ಧ ಮಾಡುವಾಗ ಅನೇಕ ವಿಘ್ನಗಳು ಬರುವವು. ಆದಕಾರಣ ನಾನು ಜಾಗರೂಕನಾಗಿ ಆ ಪಿಂಡಗಳನ್ನು ಸ್ವೀಕರಿಸಿದ ಸು' ಎಂದು ಹೇಳಿ ಗುಪ್ತನಾದನು. ಬಳಿಕ ಶ್ರೀ ರಾಮನು ಗಯೆಯಲ್ಲಿ ಯಥಾ