ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಶ್ರೀ ಸದಾನಂದ ರಾಮಯಣೆ. ದಾನಧರ್ಮಗಳನ್ನು ಮಾಡುತ್ತಿದ್ದನು. ಆ ಮಹಾನುಭಾವನು ಯಾವ ತೀರ್ಥಗಳ ಸನ್ನಿಧಿಗೆ ಹೋಗಿದ್ದನೋ, ಆ ತೀರ್ಥಗಳು ಲೋಕಪ್ರಸಿದ್ಧವಾದವು. ಅವುಗಳ ನ್ನು ಎಣಿಸಲು, ಆದಿಶೇಷನ ಶಕ್ತನಾಗಲಾರನು. ಆ ಸ್ವರ್ಣಭದ್ರಾ ತೀರ್ಥದ ಲ್ಲಿ ಸ್ನಾನಮಾಡಿ ಶ್ರೀರಾಮನು ಸಮಸ್ತ ತೀರ್ಥಕೃತ್ಯಗಳನ್ನೂ ನೆರವೇರಿಸಿದನು ಅಲ್ಲಿ ಆತನು ತನ್ನ ಹಾಗು ತನ್ನ ತಮ್ಮಂದಿರ ಹೆಸರುಗಳಿಂದ ನಾಲ್ಕು ಸೀತೆಯ ಹೆಸರಿನಿಂದ ಒಂದು, ಆಂಜನೇಯನ ಹೆಸರಿಂದ ಒಂದು, ಈ ರೀತಿಯಾಗಿ ಆರು ತೀರ್ಥಗಳನ್ನು ಪ್ರಖ್ಯಾತಿಗೊಳಿಸಿದನು. ಮುಂದೆ ಶ್ರೀ ರಾಮನು ಗಂಡಕೀನದಿಗೆ ಪ್ರಯಾಣಮಾಡಿದನು. ಆ ಮಹಾನದಿಯಲ್ಲಿ ಸ್ನಾನಮಾಡಿ, ನೇಪಾಳದಲ್ಲಿ ರುದ ಮಹಾಕ್ಷೇತ್ರವನ್ನು ನೋಡುತ್ತ ಹರಿಹರ ಕ್ಷೇತ್ರಕ್ಕೆ ಬಂದನು. ಮುಂದೆ ಆತನು ಭಾಗೀರಥಿಯ ದಕ್ಷಿಣದಲ್ಲಿ ರುವ ವೈಕುಂತಪುರ, ಜರಾಸಂಧಪುರ, ಗಯಾ ಮೊದ ಉಾದ ಕ್ಷೇತ್ರಗಳಿಗೆ ಪ್ರಯಾಣಮಾಡಿದನು ಗಯೆಯಲ್ಲಿ ವಿಷ್ಣು ಪಾದಕ್ಕೆ ನಮ್ಮ ಸ್ಮರಿಸುವದಕ್ಕಾಗಿ ಶ್ರೀ ರಾಮನು ವಿಮಾನದಿಂದ ಇಳಿದನು. ಅವನು ತನ್ನ ಈ ಕಾರ್ಯವನ್ನು ಮುಗಿಸಿಕೊಂಡು ಬರುವಷ್ಟರಲ್ಲಿ, ಸೀತೆಯು ಪರಿವಾರಸಹಿತ ಫಲ್ಕು ನದೀ ತೀರಕ್ಕೆ ಪ್ರಯಾಣಮಾಡಿದ್ದಳು. ಆ ನದಿಯಲ್ಲಿ ಸ್ನಾನಮಾಡಿ ಸೀತಾದೇವಿಯು ಮಳಲಿನ ಮೇಲೆ ಗೌರೀಪೂಜೆ ಮಾಡುತ್ತ ಸ್ವಲ್ಪ ಹೊತ್ತು ಕುಳಿತಿದ್ದಳು. ಬಳಿಕ ಜಾನಕಿಗೆ ಆ ಮಳಲು ಭೂಮಿ ಯಲ್ಲಿ ತಮ್ಮ ಪೂರ್ವಜರಿಗೆ ಪಿಂಡದಾನ ಮಾಡಬೇಕೆಂದು ಇಚ್ಛೆಯುಂಟಾಯಿತು. ಆಕೆಯು ಒಂದು ಮಳಲಿನ ಪಿಂಡವನ್ನು ಮಾಡಿ ಭೂಮಿಯಲ್ಲಿಟ್ಟಳು. ಅಷ್ಟರಲ್ಲಿ ಭೂಮಿಯಿಂದ ದಶರಥನ ಒಂದು ಹಸ್ತವು ಮೇಲಕ್ಕೆ ಬಂದು ಆಪಿಂಡವನ್ನು ಕರಿಸಿತ್ತು. ಇದನ್ನು ನೋಡಿ ಸೀತೆಗೆ ಪರಮಾಶ್ಚರ್ಯವಾಯಿತು. ಅನಂತರ ಸೀ ತೆಯು ಮತ್ತೊಂದು ಪಿಂಡವನ್ನು ಭೂಮಿಯ ಮೇಲಿರಿಸಿದಳು. ಇದೇ ಮೇರೆಗೆ ಸೀತಾದೇವಿಯು ಭೂಮಿಯಮೇಲಿರಿಸಿದ ನೂರಾಎಂಟು ಪಿಂಡಗಳನ್ನೂ ದಶರಥನು ತನ್ನ ಹಸ್ತ್ರಗಳಿಂದ ಸ್ವೀಕಾರ ಮಾಡಿದನು. ಈ ಸಮಾಚಾರವನ್ನು ಸೀತಾದೇವಿ ಯು ಯಾರಿಗೂ ತಿಳಿಸಲಿಲ್ಲ. ವಿಷ್ಣು ಪಾದಕ್ಕೆ ನಮಸ್ಕರಿಸಿ ಬಂದ ಶ್ರೀ ರಾಮನು ಆ ನದಿಯಲ್ಲಿ ಸ್ನಾನ ಮಾಡಿ ತನ್ನ ನಿತ್ಯಕೃತ್ಯಗಳನ್ನು ನೆರವೇರಿಸಿ, ಆ ಮಹಾ ಕ್ಷೇತ್ರ ದಲ್ಲಿ ಪಿಂಡದಾನ ಮಾಡಿದನು. ಆಗ ದಶರಥನು ಪಿಂಡವನ್ನು ಹಸ್ತದಿಂದ ಸ್ವೀಕಾರ ಮಾಡಲಿಲ್ಲ. ಇದನ್ನು ನೋಡಿ ಎಲ್ಲರಿಗೂ ಅಶ್ಚರ್ಯವಾಯಿತು. ಶ್ರೀ ರಾಮನು ಇದಕ್ಕೆ ಕಾರಣವೇನಿರಬಹುದು' ಎಂದು ಲಕ್ಷಣವನ್ನು ಪ್ರಶ್ನೆ ಮಾಡಿದನು. ಸೌಮಿ