ಯಾಕಾಂಡ ನಾಡುತ್ತಿದ್ದರು. ಯಾವನೋ ಒಬ್ಬನು, ಇದನ್ನು ನೋಡಿದರೆ ನಾರದಮುನಿಗಳ ರಬಹುದೆಂದನು, ಮತ್ತೊಬ್ಬನು, ಇದು ಆಗೇಯಸ್ತವಿರಬಹುದೆಂದು ಊಹಿಸಿದನು. ಇದು ಸಹಸ್ರ ಹೆಡೆಗಳುಳ್ಳ ಆದಿಶೇಷನೇ ಇರಬಹುದೆಂದು ಇನ್ನೊಬ್ಬನು ತರ್ಕಿಸಿದ ನು, ವಿವೇಕಶೂನ್ಯನಾದ ಒಬ್ಬ ಮನುಷ್ಯನು ಇದೇನೋ ಅನರ್ಥವು ಒದಗಿ ತಂದು ಅಳಲಾರಂಭಿಸಿದನು. ಇಷ್ಟರಲ್ಲಿ ಶ್ರೀ ರಾಮನು ಬರುವ ವೃತ್ತಾಂತವು ಎಲ್ಲರಿಗೂ ತಿಳಿಯಿತು. ಅಗ ಎಲ್ಲರಿಗೂ ಪರಮಾನಂದರಾಯಿತು ಶ್ರೀ ರಾಮನು ಮೊದಲು, ವಿನಾಯಕನ ಪೂಜೆಮಾಡಿ, ಬಳಿಕ ವಿಶ್ವೇಶ್ವರ ನ ದರ್ಶನ ಮಾಡಿಕೊಂಡನು. ಅನಂತರ ಸ್ನಾನ, ಕ್ರ, ಶ್ರದ್ಧ, ವಸ್ತ್ರದಾನ, ಅನ್ನದಾನ ಇವುಗಳನ್ನೆಲ್ಲ ಯಥಾವಿಧಿಯಾಗಿ ಮುಗಿಸಿದನು. 'ಪಂಚತೀರ್ಥಯಾತ್ರೆಯನ್ನು ನೆರವೇರಿಸಿದನು. ಸರ್ವಲಿಂಗ, ಗಣಪತಿ, ಭೈರವ, ಯೋಗಿನಿ, ದುರ್ಗಿಯರು, ಮಾಯಾ, ಅಷ್ಟದಿಕಾಲಕರು, ನವಗ್ರಹ ಇವರೇ ಮೊದಲಾದ ಸಮ ತೀರ್ಥದೇವತೆಗಳನ್ನೂ ಪೂಜಿಸಿದನು. ಕ್ಷೇತ್ರ ಪ್ರದಕ್ಷಿಣೆ, ಪಂಚಕೋಶ ಇವೇ ಮೊದಲಾದ ಸಮಸ್ತ ಯಾತ್ರಿಗಳನ್ನೂ ನೆರವೇರಿಸಿದನು. ಶ್ರೀ ರಾಮನು ಕಾಶಿಯ ವಾಯವ್ಯಭಾಗದಲ್ಲಿ ರಾಮೇಶ್ವರನೆಂಬ ಒಂದು ಮಹಾಲಿಂಗವನ್ನು ಸ್ಥಾಪಿಸಿದನು. ಅಷ್ಟರಲ್ಲಿ ಶ್ರೀ ರಾಮನು ತೀರ್ಥಯಾತ್ರೆಗೆ ಹೊರಟಿರುವನೆಂಬ ವರ್ತನವ ನ್ನು ಕೇಳಿ ಮಾರುತಿಯು ಶ್ರೀ ರಾಮನ ಸನ್ನಿಧಿಗೆ ಬಂದನು. ಆತನು ಸೀತಾರಾಮ ರಿಗೆ'ವಂದನೆಮಾಡಿ ಭಾಗೀರಥಿಯಲ್ಲಿ ಸ್ನಾನಮಾಡಿ, ಅಲ್ಲಿ ಶಂಕರತೀರ್ಥವೆಂಬ ಒಂದು ಪ್ರಸಿದ್ಧವಾದ ಪುಷ್ಕರಣಿಯನ್ನು ನಿರ್ಮಾಣಮಾಡಿದನು; ಮತ್ತು ಗಂಗಾತೀರ ದಲ್ಲಿ ಪಾಷಾಣದ ಘಂಟೆಯನ್ನು ಕಟ್ಟಿದನು. ಶ್ರೀ ರಾಮನು ಪಂಚಗಂಗೆಯಲ್ಲಿ ಈ ತಿಕಮಾಸವು ಮುಗಿಯುವ ವರೆಗೂ ಸ್ನಾನಮಾಡಿದನು. ಬ್ರಹ್ಮಚಾರಿ, ಭಿಕ್ಷು ಶಿವ ರುಗಳಿಗೆ ಅನ್ನ ಸತ್ರಗಳನ್ನು ನಿರ್ಮಾಣ ಮಾಡಿಸಿದನು. ನಾನಾ ಪ್ರಕಾರಗಳಾದ ದಾನ ಗಳನ್ನು ನಡೆಸಿದನು. ಅನೇಕ ಪ್ರತಿಗಳನ್ನು ಮಾಡಿದನು. ಈ ರೀತಿಯಾಗಿ ಒಂ ದು ವರ್ಷದ ವರೆಗೂ ಶ್ರೀ ರಾಮನು ಪರಿಪಾಠಸಮೇತನಾಗಿ ಕಾಶಿ ಕ್ಷೇತ್ರದಲ್ಲೇ ವಸವಾಗಿದ್ದನು. ಬಳಿಕ ಅನ್ನಪೂರ್ಣ, ದಂಡಪಾಣಿ ಮೊದಲಾದ ದೇವತೆಗಳಿಗೆ ನಮಸ್ಕರಿಸಿ ಶ್ರೀ ರಾಮನು ಸಕಲ ಜನರೂಡೆನೆ ಪಪ್ಪಕಾರೋಹಣ ಮಾಡಿದನು ಮುಂದೆ ಕರ್ಮನಾಶ ನದಿಯಲ್ಲಿ ಸ್ನಾನಮಾಡಿ, ಶ್ರೀರಾಮನು ದಿನ ಧರ್ಮಾದಿಗಳನ್ನು ಮುಗಿಸಿಕೊಂಡು, ಪರಿವಾರದೊಡನೆ ಸ್ವರ್ಣಭದ್ರಾ ಸಂಗಮಕ್ಕೆ ಪ್ರಯಾಣಮಾಡಿದನು. ಶ್ರೀರಾಮನು ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಮಿತಿಯಿಲ್ಲದೆ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೩೯
ಗೋಚರ