ಯಾಕಾಂಡ. ೧೩ ಅಲ್ಲಿ ರುವ ನೀಲಗಂಗಾತೀರ್ಥದಲ್ಲಿ ಸ್ನಾನಮಡಿ, ಮಲ್ಲಿಕಾರ್ಜುನನ ದರ್ಶನ ಡಿಕೊಂಡು, ಆ ಪರ್ವತದ ಮನೆಲ್ಲಾ ಸಕರಗಳಾದ ಶಿಖರಗಳನ್ನು ನೋಡುತ್ತಾ ಬ್ರಹ್ಮಕೊಂಡಕ್ಕೆ ಬಂದನು. ಅ ಪುಣ್ಯ ತೀರ್ಥದಲ್ಲಿ ಸ್ನಾನಮಡಿ, ಮುಂದಕ್ಕೆ ಯಾಣ ಮಾಡಲುದ್ಯುಕ್ತನಾದನು, "ಆ ಪ್ರಾಂತದ ರಾಜರೆಲ್ಲ ರಾ ಶ್ರೀ ರಾಮನಿಗೆ ಕಾಣಿಕೆಗಳನ್ನರ್ಪಿಸಿ, ಆತನೊಡನೆ ತೀರ್ಥಯಾತ್ರೆಗಾಗಿ ಹೊರಟರು. ಭೀಮಕುಂ ಡ, ನಿವೃತ್ತಿ ಸಂಗಮ, ತುಂಗಭದ್ರಾ ಸಂಗಮ, ಭವನಾಶಿನೀ ಇವುಗಳಲ್ಲಿ ಸ್ನಾನ ದೂಡಿ, ಅಹೋಬಲ ದರ್ಶನ, ನಾರಸಿಂಹಮೂರ್ತಿಯ ಪೂಜನ, ಇವುಗಳನ್ನು ಮು ಗಿಸಿಕೊಂಡು, ಪುಷ್ಪಗಿರಿಗೆ ಪ್ರಯಾಣವೂಡಿದನು. ಅಲ್ಲಿಯ ಪುಣ್ಯತೀರ್ಥಗಳ ನ್ಯೂ, ಪಂಪಾ ಕ್ಷೇತ್ರವನ್ನೂ ನೋಡುತ್ತಾ ಕಿಷ್ಕಂಧೆಗೆ ಪ್ರಯಾಣಮೂಡಿದನು. ಸುಗ್ರೀವನು ಕುಲದೈವತೆಯೂದ ಶ್ರೀ ರಾಮನನ್ನು ಪೂಜಿಸಿದನು. ಬಳಿಕ ರಾಮ ಚಂದ್ರನು ಆ ವಾನರೇಶ್ವರನನ್ನು ಜೊತೆಗೆ ಕರೆದುಕೊಂಡು ಪ್ರಹರ್ಷಣ ಪರ್ವತಕ್ಕೆ ಹೋದನು. ಅಲ್ಲಿ ಸೀತಾದೇವಿಗೆ ತಾನು ಪೂರ್ವದಲ್ಲಿ ವಿಹಾರದೂಡುತ್ತಿದ್ದ ಗುಹ ಯನ್ನು ತೋರಿಸಿದನು, ಮತ್ತು ಷಣ್ಮುಖನೇ ಮೊದಲಾದ ಸಮಸ್ತ ದೇವತೆಗಳ ನ್ನು ಪೂಜಿಸಿ, ಶೇಷಾಚಲಕ್ಕೆ ಬಂದನು. ಅಲ್ಲಿರುವ ಪುಷ್ಕರಿಣೀತೀರ್ಥದಲ್ಲಿ ಸ್ನಾನಮಡಿ, ಸುವರ್ಣಮುಖರಿ-ತೀರದಲ್ಲಿ ರುವ ಕಾಳಹಸ್ತೀಶ ರನನ್ನು ಪೂಜಿಸಿ ಕಾಂಚೀ ಕ್ಷೇತ್ರಕ್ಕೆ ಪ್ರಯಾಣವೂಡಿದನು, ಆ ಕ್ಷೇತ್ರದಲ್ಲಿ ಪ್ರಸಿದ್ಧನಾದ ಏಕಾಂ ಬರೇಶ್ವರನನ್ನು ಪೂಜಿಸಿ, ವಿನಾಕ್ಷಿಯ ದರ್ಶನ ಮೂಡಿಕೊಂಡು, ವೇಗವತಿಯಲ್ಲಿ ಸ್ನಾನಮಡಿ, ವರದರಾಜನಿಗೆ ನಮಸ್ಕಾರದೂಡಿ, ಪ್ರತೀರ್ಥಕ್ಕೆ ತೆರಳಿದನು. ಅ ನಂತರ ಅಲ್ಲಿರುವ ಪುಣ್ಯಕ್ಷೇತ್ರಗಳಲ್ಲಿ ಸ್ನಾನಮಡಿ, ತ್ರಿವಿಕ್ರಮನಿಗೆ ನಮಸ್ಕರಿಸಿ, ಅರುಣಾಚಲಕ್ಕೆ ನಡೆದನು. ಆ ಪರ್ವತವನ್ನು ನೋಡಿ ಪರಮ ಹರ್ಷಗೊಂಡು, ಶ್ರೀರಾಮನು, ಮಣಿಮುಕ್ತಾನದಿ, ವೃದ್ಧಾಚಲ, ಪಟಪಾಲ, ಶ್ರೀಮುಷ್ಟಿ, ಯಜ್ಜಿತ ದಾಹ, ಚಿದಂಬರ, ಕಾವೇರಿ, ಸಿಂಹಕ್ಷೇತ್ರ, ಭವ್ಯವನ, ವೇದಾರಣ್ಯ, ವೃದ್ಧ ಕಾ ವೇಲಿ, ಕುಂಭಕೋಣ, ಶ್ರೀನಿವಾಸ, ವೃಂದಾವನ, ಸಾರನಾಥ, ಶ್ರೀವತ್ಸ ಪ್ರಯಾ ಗ ಮಾಧವ, ಆಭ್ರಶಿರಸ, ಕಮಲಾಲಯ, ತ್ಯಾಗೇಶ್ವರ, ಗಯಾತೀರ್ಧ, ಅಭಯ ದೇಶ್ವರ, ಸವಪಾಪಾಣತೀರ್ಥ, ದೇವಿಪತ್ತನ, ನೇತಾಲತೀರ್ಥ, ರಾಮತೀರ್ಥ, ಲಕ್ಷಣತೀರ್ಥ, ಅಗ್ನಿ ಕುಂಡ, ಧನುಷ್‌ಟಿ, ಜಟಾಯು ತೀರ್ಧ, ವಿಶ್ವ ನಾಥ ಇ ವೇ ಮೊದಲಾದ ಸಮಸ್ತ ಕ್ಷೇತ್ರಗಳಿಗೂ ಹೋಗಿ, ಅಲ್ಲಿ ಸ್ನಾನಮಾಡಿ, ದಾನ ಧರ್ಮಾದಿಗಳಿಂದ ಬ್ರಾಹ್ಮಣರನ್ನು ತೃಪ್ತಿಗೊಳಿಸಿದನು. ಅನಂತರ ಶ್ರೀ ರಾಮನು
ಪುಟ:ಶ್ರೀ ಮದಾನಂದ ರಾಮಾಯಣ.djvu/೧೪೩
ಗೋಚರ