ಪುಟ:ಶ್ರೀ ಮದಾನಂದ ರಾಮಾಯಣ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Yo ಶ್ರೀಮದಾನಂದ 5ಾಮಾಯಣ, ದರೂ ವಿಮಾನಾರೋಹಣ ಮಾಡಿದರು. ಆದ್ದರಿಂದ ನಿನಗೆ ಸಂಶಯ ಬರಲು ಏನೂ ಕಾರಣವಿಲ್ಲ? ಇರಲಿ, ಶ್ರೀ ರಾಮನು ಸೀತಾಸಮೇತನಾಗಿ ಸಪ್ತಶೃಂಗ ಪರ್ವತದ ಲ್ಲಿ ಎರಡು ಮೂರು ದಿವಸಗಳ ವರೆಗೆ ವಾಸಮಾಡಿ, ಅಗರ ಆಶ್ರಮ, ಸತೀ ಕ್ಷರ ಆಶ್ರಮ, ಚೈಲಪುರ, ಶೃಣೇಶ್ವರ, ಇವೇ ಮೊದಲಾದ ಸಮಸ್ತ ಪುಣ್ಯಸ್ಥ ಭಗಳಲ್ಲಿ ಸಂಚರಿಸುತ್ತ, ದೇವಗಿರಿಯಿಂದ ವಿರಜಾಕ್ಷೇತ್ರಕ್ಕೆ ಬಂದು ಸೇರಿದನು. ಅಲ್ಲಿ ಸ್ನಾನಮಾಡಿ, ದೇವತಾವಂದನೆ , ದಾನ-ಧರ್ಮ, ಇವುಗಳನ್ನು ನೆರವೇರಿ ಸ, ಸೀತಾದೇವಿಯೊಡನೆ ಮಾತನಾಡುತ್ತ ನಾರಸಿಂಹಕ್ಷೇತ್ರಕ್ಕೆ ಬಂದು ಸೇರಿ ದನು. ಅಲ್ಲಿ ಯಥಾವಿಧಿಯಾಗಿ ಸ್ನಾನ ಮಾಡಿದನು. ಮುಂದೆ ನರ್ಮದಾತೀರಕ್ಕೆ ಪ್ರಯಾಣಮಾಡಿ ಓಂಕಾರೇಶ್ವರನನ್ನು ಪೂಜಿಸಿದನು. ಅಲ್ಲಿಂದ ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡಲು ನಿಶ್ಚಯಿಸಿದನು. ತಾಪೀ, ನರ್ಮದಾ, ಮೊದಲಾದ ತೀ ರ್ಥಗಳಲ್ಲಿ ಸ್ಥಾನಮಾಡಿ, ಪ್ರಭಾಸತೀರ್ಥಕ್ಕೆ ಬಂದು ಸೇರಿದನು. ಪಂಚಸರಸ್ವತಿ ಯಲ್ಲಿ ಸ್ನಾನಮಾಡಿ, ರಾಷ್ಟ್ರ ದೇಶದಲ್ಲಿ ರುವ ಸೋಮನಾಥನ ದರ್ಶನ ತೆಗೆ ದುಕೊಂಡು , ಸಾವ್ರಮತೀತೀರ್ಥದ ಮಾರ್ಗವಾಗಿ, ಅನೇಕ ರಮಣೀಯವಾದ ಸ್ಥಳಗಳನ್ನು ನೋಡುತ್ತ ಶಂಶೋದ್ಧಾರಕ್ಕೆ ಬಂದು ಸೇರಿದನು.

  • ಶ್ರೀ ರಾಮನು ಗೋವತಿಯಲ್ಲಿ ಸಾ ನಮಾಡಿ, ದ್ವಾರವತಿಯನ್ನು ಪ್ರವೇ ಶಿಸಿದನು. ಈ ನಗರಿಯು ಅನಾದಿ ಸಿದ್ಧವಾಗಿದ್ದು ಪುಣ್ಯನಗರಿಗಳಲ್ಲಿ ಗಣನೆಗೆ ಬಂದಿದೆ. ಈ ರೀತಿಯಾಗಿ ಪಶ್ಚಿಮ ದಿಕ್ಕಿನಲ್ಲಿ ತೀರ್ಥಗಳನ್ನು ನೋಡುತ್ತ ಅಲ್ಲ ಇರುವ ಸಮಸ್ತ ರಾಜರಿಂದ ಸತ್ಕಾರಗಳನ್ನು ಸ್ವೀಕರಿಸುತ್ತ ಸಮಸ್ತ ಪರಿವಾರ ದೊಡನೆ ಶ್ರೀ ರಾಮನು ಪುಷ್ಕರತೀರ್ಥಕ್ಕೆ ಬಂದು ಸೇರಿದನು. ವಿಮಾನದಲ್ಲಿ ಪ್ರತಿನಿತ್ಯವೂ ಕೊಟ್ಟಾವಧಿ ಬ್ರಾಹ್ಮಣರ ಭೋಜನವಾಗುತ್ತಿತ್ತು. ಪೂರ್ವ ಪ

ಮ ದಕ್ಷಿಣ ಈ ಮೂರು ದಿಕ್ಕುಗಳ ರಾಜರಾ ಪರಿವಾರಸಮೇತರಾಗಿ ಆ ಪುಷ್ಪ ಕೆವಿಮಾನದಲ್ಲಿ ಕುಳಿತಿದ್ದರು. ಅವರೆಲ್ಲರಿಗೂ ಶ್ರೀ ರಾಮನು ಅತಿಥಿಗಳಂತಸ ತ್ಕಾರ ಮಾಡಿದನು. ಅಷ್ಟು ಜನಗಳಿಗೂ ಒಂದೇ ಕಡೆ ಪಾಕಶಾಲೆಯುಏರ್ಪ ಟೈಶ್ಯ, ರಾಜಾಧಿರಾಜರಿಗೆ ಬೇರೆ, ಶ್ರೀ ರಾಮಾದಿಗಳಿಗೆ ಬೇರೆ, ಬಡಜನರಿಗೆ ಬೇರೆ, ಈ ರೀತಿಯಾಗಿ ಭೇದಭಾವಗಳು ಅಲ್ಲಿ ಯಾವ ವಿಷಯಗಳಲ್ಲ ಇರಲಿ ಲ್ಲ. ಆ ಕಾಲದಲ್ಲಿ ಯಾವ ಪದಾರ್ಥಗಳಿಗೂ ಕೊರತೆ ಇರಲಿಲ್ಲ. ಜನಗಳು ನೃತ್ಯ, ಗೀತ, ವಾದ್ಯ ಮೊದಲಾದ ಕಲಾಕೌಶಲ್ಯಗಳಿಂದ ಯಾವಾಗಲೂ ಪರ ಮಾನಂದವನ್ನು ಹೊಂದುತ್ತಿದ್ದರು. ಈ ಗಲಾಟೆಯಲ್ಲಿ ಯಾರಿಗೂ ನಿದ್ರೆಗೆ ದಾ