ಪುಟ:ಶ್ರೀ ಮದಾನಂದ ರಾಮಾಯಣ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಕಾಂಡ. ರ್ಗವಿರಲಿಲ್ಲ, ಎಲ್ಲಾ ಕೆಲಸಗಳೂ ಒಂದೇ ವಿಮಾನದಲ್ಲಿ ನಡೆಯ ಬೇಕಾದ್ದರಿಂ ದ ಅದು ಒಂದು ದೊಡ್ಡ ನಗರದಂತೆ ಶಬ್ಯಾಯಮಾನವಾಗಿತ್ತು. ವಿಮಾನವು ಸಮೀಪಕ್ಕೆ ಬಂದ ಹಾಗೆಲ್ಲ ಪುಷ್ಕರ ಕ್ಷೇತ್ರವಾಸಿಗಳಾದ ಜನರು ಭಯಭರಿತರಾ ದರು. ಕೆಲವರು ಇದು ದೇವಕನ್ಯಯರ ವಾಹಸವಿರಬಹುದೆಂದರು, ಮತ್ತೆ ಕೆ ಲವರು ವಿಷ್ಣು ವಿಮಾನವಿರಬಹುದೆಂದರು. ಹೀಗೆ ಜನರು ನಾನಾ ವಿಧವಾಗಿ ತ ರ್ಕಮಾಡುತ್ತಿರಲು, ಪುಷ್ಪಕವಿಮಾನವು ಜನರ ದೃಗ್ಗೋಚರವಾಯಿತು. ಬಳಿಕ ಶ್ರೀ ರಾಮನನ್ನು ನೋಡಿ ಆ ಜನರು ಪರಮಾನಂದಭರಿತರಾದರು. ತೀರ್ಥವಾಸಿ ಗಳಾದ ಸಮಸ್ತ ಬ್ರಾಹ್ಮಣರನ್ನೂ ಶ್ರೀ ರಾಮನು ವಂದನೆ ಮಾಡಿ, ಕುಶಲ ಪ್ರಶ್ನೆ ಮಾಡಿದರು. ಮತ್ತು ಆ ತೀರ್ಥದಲ್ಲಿ ಸ್ನಾನ ಮಾಡಿ, ನಿತ್ಯ-ನಿಯಮಗಳನಾಡ ರಿಸಿ, ಕಾಶಿಯಲ್ಲಿ ಮಾಡಿದ ದಾನಕ್ಕಿಂತಲೂ ಹತ್ತರಷ್ಟು ಅಧಿಕವಾಗಿ ದಾನ-ಧ ರ್ಮಗಳಿಂದ ಸಮಸ್ತರನ್ನೂ ಸಂತೋಷಗೊಳಿಸಿದನು. ಈ ರೀತಿ ಸಮದಿಕ್ಕಿನ ಯಾತ್ರೆಯನ್ನು ಮುಗಿಸಿ, ಬ್ರಾಹ್ಮಣರ ಅನುಮತಿಯನ್ನು ಪಡೆದು ಉತ್ತರದಿಕ್ಕಿಗೆ ಪ್ರಯಾಣ ಮಾಡಲು ಶ್ರೀ ರಾಮನು ಪುಷ್ಪಕವಿಮಾನಕ್ಕೆ ಅಪ್ಪಣೆ ಮಾಡಿದನು. * ಶ್ರೀರಾಮನು ವಿಮಾನದಲ್ಲಿ ಕುಳಿತು ಉತ್ತರದಿಕ್ಕಿನಲ್ಲಿಯ ಪರ್ವತ, ತೀರ್ಥ, ಜಾಲಾಮುಖಿ ಇವೇ ಮೊದಲಾದ ಸ್ಥಳಗಳನ್ನು ನೋಡುತ್ತಾ ತಸ್ತಮಣಿಕರ್ಣಿ ಕಗೆ ಬಂದು ಸೇರಿದನು. ಕರತೋಯಾ ನದಿಯಲ್ಲಿ ನಮಾಡಿ, ಮುಂದೆ ಸ್ಯ ಯಾಣಮಾಡುವದು ಶ್ರ ಸಮ್ಮತವಲ್ಲವೆಂದು ತಿಳಿದು ಹಿಂತಿರುಗಿದನು. ಕರತೋ ಯಾನದಿಯನ್ನು ದಾಟಿ ಮುಂದೆ ಹೋಗುವದು, ತಾಸುಮಾಡಿದ ಪುಣ್ಯ ಕೃತ್ಯಗಳನ್ನು ತಾನೇತ್ರ ಮೂಡಿಕೊಳ್ಳುವದು ಇವೇ ಮೊದಲಾದ ಕೆಲವು ಸಂಗತಿಗಳು ಶಾಸ್ತ್ರ ದಲ್ಲಿ ನಿಷೇಧಿಸಿರುವವು. ಆದ್ದರಿಂದ ಶ್ರೀ ರಾಮನು ಅಲಕನಂದೆಯ ಮಾರ್ಗವಾಗಿ ದೇವಪ್ರಯಾಗಕ್ಕೆ ಪ್ರಯಾಣಮಾಡಿ, ಅಲ್ಲಿಂದ ನರನಾರಾಯಣರನ್ನು ನೋಡಲು ಮುಂದೆ ಪ್ರಯಾಣಮಾಡಿದನು, ಬದರಿಕಾಶ್ರಮದಲ್ಲಿ ಕೇದಾರೇಶ್ವರನನ್ನು ಪೂಜಿಸಿ, ದೇವಗಂಧರ್ವರಿಗೆ ಪಾಸಾನವಾದ ಹಿಮಲಯ ಪರ್ವತದ ಮಾರ್ಗಜಾಗಿನ ಸಸರೋವರಕ್ಕೆ ಹೊರಟನು. ಇದೇ ಸರೋವರದಿಂದ ಗಂಗಾ ಸರಯಾ ನದಿಗಳು ಉತ್ಪನ್ನವಾಗಿವೆ. ನಾವೀರು ಹಂಸಪಕ್ಷಿಗಳು ಅಲ್ಲಿ ವಾಸವಾಗಿದ್ದವು. ಅವುಗಳ ರೂಪವು ಬಹಳ ಸುಂದರವಾಗಿತ್ತು, ಅದೇ ಸರೋವರದಲ್ಲಿ ದೇವತೆಗಳು ತಮ್ಮ ಸ್ತ್ರೀ ಯರೊಡನೆ ಜಲಕ್ರೀಡೆ ಮಾಡುವರು. ಶ್ರೀ ರಾಮನು ಆ ಸರೋವರದಲ್ಲಿ ಸ್ನಾನ ಮಡಿ, ಬಿಂದು ಸರಸ್ಸಿನಲ್ಲಿ ಸ್ನಾನದಾನಾದಿಗಳನ್ನು ಮುಗಿಸಿಕೊಂಡು, ಹಿಲ