ಪುಟ:ಶ್ರೀ ಮದಾನಂದ ರಾಮಾಯಣ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುಗಾಂಡ, ೧೪೬ ವಾದ ಕಾರ್ಯಗಳನ್ನು ಕಾಲಕಾಲಕ್ಕೆ ನೆರವೇರಿಸುತ್ತಿದ್ದನು. ಸೂರ್ಯನಂತ ಪ್ರ ಕಾಶವೂಪನಾದ ಶ್ರೀರಾಮನು ಗುರುಗಳ ಸನ್ನಿಧಿಯಲ್ಲೇ ಯಾವಾಗಲೂ ಕುಳಿತಿ ರುವನು. ಭರತ, ಲಕ್ಷಣ ಇವರೇ ಮೊದಲಾದ ಸಮಸ್ತ ಭಟರೂ ಯಜ್ಞಕಂಟಕ ಗಳನ್ನು ಪರಿಹಾರ ಮಾಡಲು ಪುಷ್ಪಮಾಲಿಕೆಗಳನ್ನು ಧರಿಸಿ ಸಿದ್ಧರಾಗಿ ಕುಳಿತಿದ್ದರು. ಶ್ರೀ ರಾಮನ ತಾಯಿಯು ಯಜ್ಞಶಾಲೆಯಲ್ಲಿ ಕುಳಿತಿದ್ದಳು ಇಷ್ಟರಲ್ಲಿ ಸಮಸ್ತ ತಪ ಸ್ವಿಗಳೂ ಶ್ರೀ ರಾಮನು ಯಜ್ಞ ಮಾಡುವನೆಂಬ ವರ್ತಮಾನವನ್ನು ಕೇಳಿ ಪತ್ರೀಪುತ್ರ ರಿಂದೊಡಗೂಡಿ ಸರಯೂ ತೀರಕ್ಕೆ ಬಂದರು. ಅವರಲ್ಲಿ ಕೆಲವರು ಫಲಭಕ್ಷಣವೂ ಡುವವರು, ಕೆಲವರು ಸರ್ಣಹಾರಮಾಡುವವರು, ಕೆಲವರು ಅಯಾಚಿತ ವೃತ್ತಿಯದ ರು, ಕೆಲವರು ನಿರಹಾರವೂಡುವವರು, ಕೆಲವರು ಪಂಚಾಗ್ನಿ ಮಧ್ಯದಲ್ಲಿ ತಪಸ್ಸು ಮಾಡುವವರು ಇದ್ದರು. ಇವರೆಲ್ಲರಿಗೂ ಪ್ರತಿದಿವಸವೂ ಯಥಾಯೋಗ್ಯ ಮರ್ಯಾದೆ ಗಳು ಸ್ವಲ್ಪವೂ ತಪ್ಪದೆ ನಡೆಯುತ್ತಿದ್ದವು. ಈ ಅಪೂರ್ವವಾದ ಯಾಗವನ್ನು ನೋ ಡಲು ಕೋಟ್ಯಂತರ ಬ್ರಾಹ್ಮಣರು ಸೇರಿದರು. ಶ್ರೀ ರಾಮನು ಕಾಮಧೇನುವನ್ನು ಪೂಜಿಸಿ ಸಮಸ್ತ ಪ್ರಾಣಿಗಳನ್ನು ತೃಪ್ತಿ ಪಡಿಸುವಂತೆ ಪ್ರಾರ್ಥನೆ ಮಾಡಿದನು. ಪಾಕ ಶಾಲೆಯಲ್ಲಿ ವಾಸಮಾಡಿದ ಆ ಇಂದ್ರನಧೇನುವು ಅತಿಥಿಸತ್ಕಾರಗಳಿಗೆ ಇಷ್ಟವಾದ ಪದಾರ್ಥಗಳನ್ನು ಸ್ವಲ್ಪವೂ ತಡಮಾಡದೆ ಕೊಡುತ್ತಿತ್ತು, ಅಡಿಗೆ ಮನೆಯಲ್ಲಿ ಬೆಂ ಕೆಯ ಸಂಪರ್ಕವೇ ಇರಲಿಲ್ಲ. ಭಕ್ಷ್ಯಭೋಜ್ಯಗಳಿಂದ ಮಹರ್ಷಿಗಳು ಬ್ರಾಹ್ಮಣ ರು, ಸ್ತ್ರೀಯರು ಇವರು ಮೊದಲುಗಾಂಡು ಬೆಕ್ಕು, ಇಲಿ, ಈ ಪ್ರಾಣಿಗಳವರೆಗೂ ಎಲ್ಲರೂ ತೃಪ್ತರಾದರು. ಅವರೆಲ್ಲರಾ ಸೀತಾ-ರಾಮರಿಗೆ ಯಥೇಷ್ಟ ಆಶೀರ್ವಾ ದಗಳನ್ನು ನೋಡಿದರು. ಸೀತೆಯೇ ಮೊದಲಾದ ಸಮಸ್ತ ರಾಜಸ್ತ್ರೀಯರು ಪ್ರತಿ ನಿತ್ಯವೂ ತಾನೇ ಪಂಜಿಗಳಲ್ಲಿ ಸಂಚಾರದೂಡುತ್ತಾ, ಬ್ರಾಹ್ಮಣರಿಗೆ ಬೇಕಾದ ಪ ದಾರ್ಥಗಳನ್ನು ತಾವೇ ತಂದು ಬಡಿಸುವರು, ಶ್ರೀರಾಮನು ಲಕ್ಷ್ಮಣನನ್ನು ಕರೆಸಿ “ಎಲೈ ಸೌಮಿತ್ರಿಯೇ ನೀನು ಯಾವ ದಾರಿಯಲ್ಲಿ ಯಾರನ್ನು ಕಂಡರೂ ಬಹುಮನ ಮೂಡಿ ಈ ಯಜ್ಞಶಾಲೆಗೆ ಕರೆದುಕೊಂಡು ಬರುವಂತೆ ಸೇವಕರಿಗೆ ಆ ಜ್ಞಾಪಿಸು, ಹೂರ್ಗದಲ್ಲಿ ಯಾವ ವಿಷಯದಲ್ಲಿ ನೀವು ಕೋಪಮಾಡಬೇಡಿರೆಂದು ದೂತರಿಗೆ ತಿಳುಹು. ನೀನು ಪ್ರಿಯರು, ಬಾಲಕರು, ವಟುಗಳು, ಇವರೇ ಮೊದಲಾದವರಿಗೆ ಅವಮಾನ ಮೂಡಬೇಡ. ಯಾರಾದರೂ ಯಾವ ಅವಮೌಲ್ಯವಸ್ತು ವನ್ಯ ಪೇಕ್ಷಿಸಿದರೂ ನಮ್ಮ ಅಪ್ಪಣೆಯಿಲ್ಲದೆಯೇ ಆ ವಸ್ತು ವನ್ನು ಕೊಟ್ಟು ಅವರಿಗೆ ಸಂತೋಷಗೊಳಿಸು, ಪಶುಪಕ್ಷಿಗಳಿಗಾದರೂ ಸe