ಪುಟ:ಶ್ರೀ ಮದಾನಂದ ರಾಮಾಯಣ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Y ಶ್ರೀ ದುಗಾನಂದ ರಾಮಾಯಣ, ತೋಷವನ್ನುಂಟು ಮೂಡು. ಅಯೋಧ್ಯೆ, ಕಾಮಧೇನು, ಚಿಂತಾಮಣಿ, ಇಷ್ಟಕ, ಖಜಾನೆ, ಇವುಗಳಲ್ಲಿ ಯಾವ ವಸ್ತುವನ್ನು ಯಾಚಕರು ಬಯಸಿದರೂ ಅವನ್ನು ಕೊಟ್ಟು ಬಿಡು, ಎಲೈ ಲಕ್ಷಣನೇ, ನೀನು ಯಾರಿಗಾದರೂ ಸ್ವಲ್ಪ ಅಸಂತೋಷ ಪಡಿಸಿದ ವರ್ತಮಾನವು ನನ್ನ ಕಿವಿಗೆ ಬಿದ್ದರೆ, ನಿನ್ನ ವಿಷಯದಲ್ಲಿ ನನಗೆ ಬಹಳ ಸಿ Iು ಬಂದೀತು, ಮತ್ತು ನೀನು ಬ್ರಾಹ್ಮಣರಿಗೆ, ಅವನ ಇಲ್ಲವೆ ಇಚ್ಛಾಭಂಗ ಮೂಡಿದ ಸಂಗತಿಯು ನನಗೆ ತಿಳಿದಿದ್ದೇ ಆದರೆ, ನಿನ್ನ ಮುಖದರ್ಶನ ಮಡದೆ, ದೇ ಹಾಂತ ಪ್ರಾಯಶ್ಚಿತ್ತವನ್ನು ವಿಧಿಸೇನು, ಬಹು ಎಚ್ಚರಿಕೆಯಿಂದ ನಡಕೊಳ್ಳತ ಕದ್ದು” ಎಂದು ಆಜ್ಞಾಪಿಸಿದನು. ಲಕ್ಷ್ಮಣನು ತಂದೆಗೆ ಸಮನನಾದ ಶ್ರೀರಾಮ ನ ವಚನವನ್ನು ಶಿರಸಾವಹಿಸಿ, ಅದರಂತೆಯೇ ನಡೆದುಕೊಂಡನು ಶ್ರೀರಾಮನ ಯಜ್ಞೆಯಾಶ್ವವು ಪೂರ್ವದೇಶವನ್ನು ಪ್ರವೇಶಿಸಿತು. ಶತ್ರು ಫನು ಸೇನಾಸಮೇತನಾಗಿ ಆ ತುರಗವನ್ನೇ ಹಿಂಬಾಲಿಸಿ, ಗಂಗಾನದೀತೀರಕ್ಕೆ ಸೇರಿದನು. ಆ ಕುದುರೆಯು ಬ್ರಹ್ಮಾವರ್ತದಲ್ಲೆಲ್ಲಾ ಸಂಚರಿಸಿ ಜಾಹ್ನವೀ ದಡಕ್ಕೆ ಬಂತು. ಅಷ್ಟರಲ್ಲಿ ಮಹತ್ತರವಾದ ದೃಷ್ಟಿಯು ಆಗಿ, ಭಾಗೀರಥಿಯು ಪೂರ್ಣ ವಾಗಿ ಪ್ರವಹಿಸಲಾರಂಭಿಸಿತು. ನಾವೆಗಳೂ ಕೂಡಾ ನದಿಯಲ್ಲಿ ಹೋಗದಂ ತಾದವು. ಇದನ್ನೆಲ್ಲಾ ನೋಡಿ ಶತ್ರುಘ್ನನು ಹೆದರಿ, “ನದಿಯು ಇಳಿದ ನಂತರ ಮುಂದಕ್ಕೆ ಪ್ರಯಾಣ ಮಾಡೋಣವೆಂದರೆ ಕಾಲಾತಿಕ್ರಮಣಪಾಗುವದು ನನ್ನ ಸ್ಥಿತಿಯು ಮೊದಲನೇ ಕವಳಕ್ಕೆ ನೊಣ ಬಂದಂತಾಯಿತಲ್ಲ, ಏನು ಮೂಡಲಿ' ಎಂ ದು ಪುನಸ್ಸಿನಲ್ಲಿ ಯೋಚಿಸುತ್ತಾ, ಶ್ರೀರಾಮನ ಪುಣ್ಯದಿಂದಲೇ ಈ ನದಿಯನ್ನು ದಾ ಟುವೆನೆಂದು ನಿಶ್ಚಯಮಾಡಿ, ಭಾಗೀರಥಿಯ ಎದುರಿಗೆ ಸ್ತಬ್ದ ನಾಗಿ ನಿಂತನು, ಎ ಈ ಜನರೆದುರಿಗೆ ಭಾಗೀರಥಿಯನ್ನು ಪೂಜೆ ಮೂಡಿ, ಕೈ ಜೋಡಿಸಿ ನನ್ನ ಭಾವ ದಿಂದ ನಿಂತು ಶತ್ರುಘ್ನನು-ಎಲ್ಲೆ ಜಾಹ್ನವಿಯೇ, ಶ್ರೀರಾಮನಲ್ಲಿ ಸತ್ಯವಿದ್ದದ್ದೇ ನಿಯವಾದರೆ ಸೇನಾಸಮೇತನಾದ ನನಗೆ ಮೊರ್ಗವನ್ನು ಕೊಡು. ಮುಂದೆ ಬಹಳದೂರ ಪ್ರಯಾಣ ಮಾಡಬೇಕಾಗಿದೆ' ಎಂದು ಪ್ರಾರ್ಥಿಸಿದನು. ಈ ಮೂರು ಗಳನ್ನು ಕೇಳಿ ಗಂಗೆಯು ಎರಡು ಭಾಗವಾಗಿ ಶತ್ರುಘ್ನನಿಗೆ ಭೂರ್ಗವನ್ನು ಈ ಟ್ರಳು, ದೇವತೆಗಳು ಪರಮಶ್ಚರ್ಯ ಪಟ್ಟರು, ಶತ್ರುಘ್ನನ ಸೈನ್ಯವು ಸುರಕ್ಷಿತ ಚಂಗಿ ದಾಟಿದ ನಂತರ ಭಾಗೀರಥಿಯು ಮೊದಲಿನಂತೆ ಪ್ರವಹಿಸಲಾರಂಭಿಸಿತು. ಶ್ರೀ ರಾಮನ ಈ ಮಹಿಮೆಗಳನ್ನೆಲ್ಲಾ ನೋಡಿ ಸೇನಾಜನರು ಪರಮ ಸಂಭ್ರಮದಿಂದ ಜಯಘೋಷದೂಡಿದರು. ಅನಂತರ ಶತ್ರುಘ್ನನು ಮಗಧ ದೇಶಕ್ಕೆ ಬಂದನು