ಪುಟ:ಶ್ರೀ ಮದಾನಂದ ರಾಮಾಯಣ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಾಗಕಂಡ. ೧೪ ಇದೇ ದೇಶಕ್ಕೆ ಕೀಕಟ ಎಂದು ನಾಮಧೇಯವುಂಟು. ಈ ವರ್ತನವನ್ನು ಈ ಳಿ ಮುಗಧಾಧಿಪನು ಸೇನಾ ಸಮೇತನಾಗಿ ಬಂದು, ಶತ್ರುತ್ವವನ್ನು ಪರಮ ವಿಶ್ವಾ ಸದಿಂದಿ ಸಾರಭೂಡಿ, ಕಾಣಿಕೆಗಳನ್ನು ಸಮರ್ಪಿಸಿ, ತನ್ನ ಸಟ್ಟಣದ ಜನರನ್ನೆಲ್ಲಾ ಅಯೋಧ್ಯೆಗೆ ಕಳುಹಿದನು. ತಾನೂ ಶತ್ರು ನೊಡನೆ ಅಶ್ವವನ್ನು ಹಿಂಬಾಲಿಸಿ ದನು, ಇದೇ ಮೇರೆಗೆ ಸಮಸ್ತ ನಾಮಂತರಾಜರೂ ತಮ್ಮ ಸದ್ಯ ರ್ತಸಗಳಿಂದ ಕೀರ್ತಿಯನ್ನು ಪಡೆದರು. ಯಾವ ರಾಜನೂ ರಾಮಾಶ್ವವನ್ನು ಕಟ್ಟಲಿಲ್ಲ. ಇಂದ್ರಾ ದಿದೇವತೆಗಳೂ ಕೂಡ ಅದರ ಕಡೆಗೆ ಕ್ರೂರ ದೃಷ್ಟಿಯಿಂದ ನೋಡಲಿಲ್ಲ. ಅನಂತರ ಅಂಗ, ವಂಗ, ಮೊದಲಾದ ಅನೇಕ ದೇಶಗಳನ್ನು ದಾಟಿ, ಆಂಧ್ರ ಪ್ರವಿಡ, ಮೊದ ಲಾದ ದೇಶಗಳನ್ನು ನೋಡುತ್ತಾ, ಚೋಳದೇಶದ ಮಾರ್ಗವಾಗಿ ಅಶ್ವವು ಕಾವೇ ಶ್ವರಕ್ಕೆ ಪ್ರಯಾಣಮಾಡಿತು. ಶತ್ರಜ್ಞನೂ ಅದರ ಹಿಂದೆಯೇ ಸೇನಾ ಸಮೇತ ನಾಗಿ, ಆಯಾಯ ದೇಶದ ರಾಜರುಗಳಿಂದ ಕಪ್ಪ-ಕಾಣಿಕೆಗಳನ್ನು ಸ್ವೀಕರಿಸುತ್ತ ಅಶ್ವ ವನ್ನು ಹಿಂಬಾಲಿಸಿದನು,

  • ಅಕ್ಕನ ಕಾಂಬ್ರಪರ್ಣಿ ತೀರದ ಮಾರ್ಗವಾಗಿ, ಕೇರಳ ಮೊದಲಾದ ದೇಶಗಳನ್ನು ಪ್ರವೇಶಿಸಿ ಅನುಕ್ರವದಿಂದ ಗೋಕರ್ಣಕ್ಕೆ ಬಂದು ಸೇರಿತ್ತು. ಆಮೇ ಲೆ ಕೃಷ್ಣಾ ನದಿಯನ್ನು ದಾಟಿ ಕರ್ನಾಟಕ, ಕೊಂಕಣ ಮೊದಲಾದ ದೇಶಗಳನ್ನು ಪ್ರವೇಶಿಸಿ, ನಾಭ್ರವತೀ ನದಿಯ ಮಾರ್ಗದಿಂದ ಗುಜ್ಞರ ದೇಶವನ್ನು ಹೊಂದಿ ಮುಂದೆ ಪ್ರಭಾಸತೀರ್ಥದ ಬಳಿಗೆ ಬಂತು ವೀರ, ಮಾಥುರ, ಸೌರಾಷ್ಟ್ರ, ಮರುದೇಶ, ಧನ್ಯ ದೇಶ, ಸಾರಸ್ವತ, ಮತ್ತ್ವ, ಮಾಶರ, ಶೂರಸೇನ, ಪಾಂಚಾಲೆ, ಕುಕ್ಷೇತ್ರ, ಕುರುಜಾಂಗಲ, ಕೈಕೇಯ, ಕಾಶ್ಮೀರ, ಭಿಲ್ಲದೇಶ ಗೌಡ, ಶಕ ಇದೇ ಮೊದಲಾದ ಸಮಸ್ತ ದೇಶಗಳನ್ನೆಲ್ಲ ಸುತ್ತಿ, ಆ ಕುದುರೆಯು ಜಾಲಾಮುಖಿ ಕ್ಷೇತ್ರಕ್ಕೆ ಬಂತು. ಅಲ್ಲಿಂದ ಹರಿದ್ವಾರದ ಮಾರ್ಗವಾಗಿ ಬದುಕಾಮವನ್ನು ಪ್ರವೇಶಿಸಿ, ಹಿಮಾಲಯದ ಹತ್ತಿರ ಇರುವ ದೇಶಗಳಲ್ಲಿ ಸಂಚರಿಸುತ್ತ ಮಾನಸ ಸರೋವರಕ್ಕೆ ಪ್ರಯಾಣ ಮಾಡಿತು. ಅನಂತರ ಹರಿಹರಕ್ಷೇತ್ರದ ಮಾರ್ಗವಾಗಿ ಮಿಥಿಲಾ ನಗರಕ್ಕೆ ಬಂದು, ಆರ್ಯಾವರ್ತದ ಮಾರ್ಗ ಏಾಗಿ, ಕಾಶಿ, ತ್ರಿವೇಣಿ, ಶೃಂಗಬೇರಪುರ, ಇವೇ ಮೊದಲಾದ ಸ್ಥಳಗನ್ನು ದಾಟಿ ತನುಸರಿಸದಿಯ ದಾರಿಯಿಂ ದ, ನೈಮಿಷಾರಣ್ಯ, ಗೋಮತಿ ಇತ್ಯಾದಿ ಕ್ಷೇತ್ರಗಳಿಗೆ ಹೋಗಿ ಅಪ್ರತಿಷಶಾಲಿ ಯದ ಅವು ಸರಯೂ ತೀರಕ್ಕೆ ಏಳು ತಿಂಗಳು ತುಂಬುವದರೊಳಗೆ ಬಂದು ನಿಂತಿರು.