ಪುಟ:ಶ್ರೀ ಮದಾನಂದ ರಾಮಾಯಣ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ano ಶ್ರೀಮದಾನಂದ ರಾಮಾಯಣ, ಆ ತುರಗದ ಹಿಂದೆ ಅನೇಕವೇಶದ ರಾಜರೂ ಸೇನಾಪಿತನಾದ ಶತ್ರು ಸೂ ಸುರಕ್ಷಿತವಾಗಿ ಬಂದರು. ಯಯಾತ ಬಂದ ವರ್ತಮಾನವನ್ನು ಕೇತಿ, ಶ್ರೀ ರಾಮನು ಬಹು ವಿಜೃಂಭಣೆಯಿಂದ ಆ ಅರಗವನ್ನು ಎದುರುಗೊಂಡು, ವಿಧ್ಯುಕ್ತ ಪ್ರಕಾರವಾಗಿ ಪೂಜಿಸಿ ಯಜ್ಞ ಮಂಟಪಕ್ಕೆ ಕರೆತಂದನು. ಆ ಕಾಲದಲ್ಲಿ ದೊಡ್ಡ ಉತ್ಸವವು ನಡೆಯಿತು. ಈ ಮಂಟಪವು ಹೆತ್ತು ಯೋಜನ ವಿಸ್ತೀರ್ಣ ಹಾಗಿದ್ದರೂ ಜನಗಳಿಗೆ ಸಾಲದಾಯಿತು. ಎಷ್ಟೋ ಜನರು ಸಮುದಾಯಗಳಲ್ಲಿ ಮರೆಯಾದ ತಮ್ಮ ಬಂಧುಗಳು, ಮಕ್ಕಳು ಇವರನ್ನು ಹುಡುಕಲಾರಂಭಿಸಿದರು. ಹದಿನೈದು, ಇಪ್ಪತ್ತು ದಿವಸಗಳಾದರೂ ಅವರಿಗೆ ತಮ್ಮ ಜನಗಳ ದರ್ಶನವಾಗಲಿ ಲ್ಲ. ಅನಂತರ ಅವರೆಲ್ಲರೂ ಲಕ್ಷಣನಿಗೆ ತಮ್ಮ ಸ್ಥಿತಿಯನ್ನು ತಿಳುಹಿದರು. ಆಗ ತನ್ನ ಗೃಹದಲ್ಲಿ ಶೋಷಿತರಾದ ಆ ಅನಾಥರನ್ನು ಅವರವರ ಬಂಧುಗಳೊಡನೆ ಕ ಳುಹಿಸಿದನು. ಶ್ರೀ ರಾಮಚಂದ್ರನ ಪ್ರಭಾವದಿಂದ ಯಾವ ಪ್ರಾಣಿಗೂ ಎಳ್ಳಷ್ಣಾ ದರೂ ತೊಂದರೆಯು ಸಂಭವಿಸಲಿಲ್ಲ. ಆ ಯಜ್ಞಶಾಲೆಯಲ್ಲಿ ಒಬ್ಬರ ಮಾತು ಮತ್ತೊಬ್ಬರಿಗೆ ಕೇಳದಂತೆ ಮಹಾ ಕೋಲಾಹಲವಾಯಿತು - ಶಿವಕರ್ಣ ವೆಂಬ ಯಜ್ಜಿಯಾವು ದಿಗ್ವಿಜಯ ಮಾಡಿ ಬಂದಕೂಡಲೆ ಋತ್ವಿಜರು ಅಶ್ವ ಮೇಧವನ್ನು ಪ್ರಾರಂಭಿಸಿದರು. ಅಷ್ಟರಲ್ಲಿ ಪಾರ್ವತಿ-ಪರ ಮೇರರು ವೃಷಭಾರೂಢರಾಗಿ ಬಂದರು. ಲಕ್ಷಣ-ಸುಗ್ರೀವ ಎದುರು ಗೊಂಡು ಉಚಿತೋಪಚಾರಗಳಿಂದ ಸತ್ಕರಿಸಿ ಯಜ್ಞ ಮಂಟಪಕ್ಕೆ ಅವರನ್ನು ಕರೆತಂದರು, ಪಾರ್ವತೀ-ಶಂಕರರು ಆಗ್ನಿಕುಂಡದ ಬಳಿಯಲ್ಲಿ ಬರುವಷ್ಟರೊಳಗೆ ಶ್ರೀ ರಾಮನು ಎದ್ದು , ಎದುರಾಗಿ ಸ್ವಲ್ಪ ಪ್ರಯಾಣ ಮಾಡಿ, ಅವರನ್ನು ರತ್ನದ ಸಿಂಹಾಸನದ ಮೇಲೆ ಕುಳ್ಳಿರಿಸಿದನು. ಮತ್ತು ಆ ರೀ-ಶಂಕರರ ಪಾದಪ್ರಕ್ಷಾ ಲನೆ ಮಾಡಿದನು. ಆಗ ಸೀತೆಯು ಸುವರ್ಣದ ಝಾರಿಯಿಂದ ನೀರು ಹಾಕಿದಳು. ಈ ಉತ್ಸವವನ್ನು ಸಭೆಯವರೆಲ್ಲ ರೆಪ್ಪಿ ಹಾಕದೆ ನೋಡುತ್ತಿದ್ದರು. ದೇವತೆಗಳು ಇಬ್ಬರಾಗಿ ನೋಡುತ್ತ ನಿಂತಿದ್ದರು. ಆ ಕಾಲದಲ್ಲಿ ಸಮುಕ್ತರೂ ಶ್ರೀ ರಾಮಸೀ ಶೆಯರನ್ನು ಮಾಡಿದರು. ಶ್ರೀ ರಾಮನು ಸಮಸ್ತ ಬ್ರಾಹ್ಮಣರನ್ನೂ, ಮು ನಿಗಳನ್ನೂ, ಸುಮಂಗಲೆಯರನ್ನೂ ಪೂಜಿಸುವಂತ ಲಕ್ಷಣಗೆ ಆಜ್ಞಾಪಿಸಿದನು, ಶಂಕರನು (ಎಲೈ ಭೂಪತಿಯೋ, ನಿನ್ನ ದರ್ಶನದಿಂದ ನಾರು, ಸೀತಾ, ನನ್ನ ತಮ್ಮಂದಿರು , ನನ್ನ ಕುಲ, ಇವರೆಲ್ಲರೂ ಕೃತಾರ್ಥರಾಗಿರುವವು” ಎಂದು ಹೇಳಿ ದನು. ಈ ಮಾತುಗಳನ್ನು ಕೇಳಿ ಸ್ವಲ್ಪ ನಗುತ್ತ ಶಂಕರನು (ಎಲೈ ಲಾಮಚಂದ್ರ