ಪುಟ:ಶ್ರೀ ಮದಾನಂದ ರಾಮಾಯಣ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾಶಕಾಂಡ hy ನೇ, ನಾನು ನಿನ್ನ ಮಾಯೆಗೆ ಆಧೀನನಾಗಿರುವೆನು, ನಿನ್ನ ನಾಭಿಕಮಲದಿಂದ ಬ್ರಹ್ಮನು ಹುಟ್ಟಿದನು. ಆತನಿಂದ ಮರೀಚ್ಚಾದಿಗಳು ಜನಿಸಿದರು. ಮರೀಚಿಗೆ ಕಶ್ಯಪರು, ಅವರಿಗೆ ಸೂರ್ಯನು ಮಗನಾಗಿ ಅವತರಿಸಿದನು. ಈ ನಿತ್ಯ ವಂಶಕ್ಕೆ ಮೂಲಪುರುಷನಾದ ಸೂರ್ಯನು ನಿನಗೆ ಮೊಮ್ಮೊಗನ ಮೊಮ್ಮೊಗನಾಗ ಬೇಕೆ ಲ್ಲವೆ? ಹೀಗಿರಲು, ನನಗೆ ದೊಡ್ಡಸ್ತಿಕೆಯನ್ನು ಕೊಟ್ಟು ಯಾಕೆ ಮೋಹಗೊಳಿ ಸುವೆ? ಎಲೈ ಪ್ರಭುವೆ, ನೀನು ದೇವತೆಗಳಿಗಾಗಿ ಜನ್ಮ ಸ್ವೀಕಾರ ಮಾಡಿರುವೆ, ನೀನು ಲೋಕಶಿಕ್ಷಣೆಗಾಗಿ ಯಜ್ಞಾದಿಕರ್ಮಗಳನ್ನು ಮಾಡಬೇಕೆಂದು ಉದ್ಯುತ್ತ ನಾಗಿದ್ದೀ, ಎಂದನು. ಈ ಮಾತುಗಳನ್ನು ಕೇಳಿ ಶ್ರೀ ರಾಮನು ಸ್ವಲ್ಪ ನಕ್ಕು, ಯಜ್ಞಕುಂಡದ ಸವಿಾಸಕ್ಕೆ ಹೋದರು. ಅಷ್ಟರಲ್ಲಿ ಸಾವಿರಾರು ಗಂಧರ್ವರು, ಕಿನ್ನರರು, ಸಿದ್ದರು, ಯಕ್ಷರು, ಅಪ್ಪರಕ್ಷತೂಹತ್ರ, ಲೋಕಪಾಲರು, ದಿಕ್ಷಾ ಲರು, ರಸಾತಲವಾಸಿಗಳು, ನವಗ್ರಹಗಳು, ಷಡ್ರುತುಗಳು, ಅರವತ್ತು ಸಂವತ್ಸ ರಗಳು, ನಕ್ಷತ್ರಗಳು, ಯೋಗಗಳು, ಕರಣಗಳು, ತಿಥಿಗಳು, ರಾಶಿಗಳು, ಪರ್ವತ ಗಳು, ವೃಕ್ಷಗಳು, ಸಮುದ್ರಗಳು, ಸರೋವರಗಳು ಇವುಗಳೆಲ್ಲ ಮನುಷ್ಯ ರೂಪಗಳನ್ನು ಧರಿಸಿ ಯಜ್ಞ ಕುಂಡದ ಬಳಿಗೆ ಬಂದರು. ಸಂಪಾತಿ, ಗುಹಕ, ಮಾರುತಿಯ ಮಗನಾದ 'ಮಕರಧ್ವಜ, ಸಮ ಾಕ್ಷಸರಿಂದ ಯುಕ್ತನಾ ಧ ವಿಭೀಷಣ ಇವರೆಲ್ಲರೂ ಅಲ್ಲಿಗೆ ಬಂದರು. ಅವರೆಲ್ಲರಿಗೂ ಯಯೋಗ್ಯ ಸ ನಾನಗಳನ್ನು ಕೊಟ್ಟು, ಶ್ರೀ ರಾಮನು ತನ್ನ ಜೊತೆಗೆ ಕಳ್ಳಿರಿಸಿಕೊಂಡನು. ಅಷ್ಟರಲ್ಲಿ ಯಾವ ಕುಂಭೋದರ ಮಹರ್ಷಿಗಳು ಪೂರ್ವದಲ್ಲಿ ಶ್ರೀ ರಾಮನಿಗೆ ತೀ. ರ್ಥಯಾತ್ರೆ, ಅಶ್ವ ಮೇಧಾದಿಗಳನ್ನು ಮಾಡುವಂತೆ ಹೇಳಿದ್ದರೂ, ಅವರು ಆ ಯೋಧ್ಯೆಯ ಗಡಿಯ ಬಳಿಗೆ ಬಂದರು, ಆ ಮಹರ್ಷಿಗಳನ್ನು ನೋಡಿದೊಡನೆ ದೂತರು ಬಹಳ ಹೆದರಿದರು. ಮತ್ತು (ಈ ಬ್ರಾಹ್ಮಣನು ಶ್ರೀ ರಾಮನಲ್ಲಿ ಇನ್ನು ಯಾವ ತಪ್ಪುಗಳನ್ನು ಎಣಿಸುವನೋ? 3, ಎಂದು ಪರಸ್ಪರ ಮಾತನಾಡಿದರು. ಆದರೆ ಕುಂಭೋಧರನು ಆ ದಾತರನ್ನು ನೋಡದೆ ಶ್ರೀ ರಾಮನ ಯಜ್ಞ ಮಂಟಪಕ್ಕೆ ಪ್ರಯಾಣ ಮಾಡಿದನು. ಈ ಮುನಿ ಗಳನ್ನು ನೋಡಿದೊಡನೆ ದ್ವಾರಪಾಲಕರು ಭಯದಿಂದ ಓಡಿಹೋಗಿ ಮಹಾ ಸ್ವಾಮಿ ರಾಮಚಂದ್ರ, ಭೋಯುವರಾಜಲಕ್ಷಣ, ಇಕೋ , ಶ್ರೀ ರಾಮನಿಗೆ ಪೂರ್ವದಲ್ಲಿ ದೋಷ ಕೊಟ್ಟ ಕುಂಭೋದರ-ಮುನಿಗಳು ಬರುತ್ತಿರುವರು.? ಎಂ, ಧರು. ಆ ಕ್ಷಣದಲ್ಲಿಯೇ ಶ್ರೀರಾಮನು ಸಮಸ್ತ ಯದ್ಧಿ ಕಾರ್ಯಗಳನ್ನೂ ಸ್ವಲ್ಪ