ಪುಟ:ಶ್ರೀ ಮದಾನಂದ ರಾಮಾಯಣ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಕಾರರ ೧೬ ಮಾಡಿ, ತಮ್ಮಂದಿರೊಡನೆ ಒಳಕ್ಕೆ ಪ್ರವೇಶಿಸುವನು. ಆಗ ದಾಸಿಯರ ಗಲಬಲ ವು ಹೆಚ್ಚಾಗುತ್ತಿತ್ತು. ಶ್ರೀ ರಾಮನು ಪರಮ ಹರ್ಷದಿಂದ ಸೀತಾ ದೇವಿಯ ಕೈಯಲ್ಲಿ ರುವ ನೀರನ್ನು ಸ್ವೀಕರಿಸಿ ಆಚಮನ ಮಡಿಆಕೆಯೊಡನೆ ಜಲಮಂದಿರದ ಮುಖ್ಯ ಕಾರ* ಚಿಯ ಬಳಿಯಲ್ಲಿರುವ ಸ್ಥಟಕ ಶಿಲೆಯಮೇಲೆ ಕುಳಿತು, ಲಕ್ಷಣನನ್ನು ಕುರಿತು ತನು, ನೀನು ಭರತ-ಶತ್ರುಘ್ನರೊಡನೆ ಮಾಧ್ಯಾತ್ಮಿಕ ಕಾರ್ಯಗಳನ್ನು ನಡೆಸಲು ಅಂತಃಪುರಕ್ಕೆ ನಡೆ ಊರ್ಮಿಳೆಯು ಬ್ರಾಹ್ಮಣಭೋಜನದ ಅನುಕೂಲಗಳನ್ನು ಸಿದ್ಧಪಡಿಸಿಕೊಂಡ ಕಡಲೆ, ನೀನು ನನಗೆ ತಿಳಿಸತಕ್ಕದ್ದು' ಎಂದು ಹೇಳಿ ಎಲ್ಲರನ್ನೂ ತಮ್ಮ ತಮ್ಮ ಕಾರು ಗಳಿಗೆ ಕಳುಹಿಸುವನು. ಅವರು ಅಣ್ಣನ ಆಜ್ಞೆಯಂತೆ ಎಲ್ಲ ಸಾಮಗ್ರಿಗಳನ್ನೂ ಸಿದ್ಧಪಡಿ ಸಲುದ್ಯುಕ್ತರಾಗುವರು. ಇಷ್ಟರಲ್ಲಿ ದಾಸಿಯರು ಅನೇಕ ಸುಗಂಧ ದ್ರವ್ಯಗಳಿಂದ ಮಿತಿ ತವಾದ ಜಲವನ್ನು ಸಿದ್ಧಪಡಿಸುವರು. ಶ್ರೀ ರಾಮನು ಸೀತೆಯೊಡನೆ ಜಲಪಂತ್ರಗಳ ಸಹಾಯದಿಂದ ಜಲಕ್ರೀಡೆಗಳನ್ನು ಆಡುವನು- 7 ಆಗ ಎಲ್ಲ ದೂತಿಯರೂ ಈ ವಿಲಾಸ ಳನ್ನು ನೋಡುತ್ತ ದೂರದಲ್ಲಿ ನಿಂತುಕೊಳ್ಳುವರು - ಅಷ್ಟರಲ್ಲಿ ಲಕ್ಷಣನು ಶ್ರೀ ರಾಮನನ್ನು ಭೋಜನಕ್ಕೆ ಕರೆಯಲುಬರುವನು.ಆಗ ದಾಸಿ ಹರು ಸೌಮಿತ್ರಿಯನ್ನು ಒಳಗೆ ಹೋಗಲಾಗದು; ಸೀತಾ-ರಾಮರು ಜಲಕ್ರೀಡೆಯಲ್ಲಿರು ವರು, ಎಂದು ಬಾಗಿಲಲ್ಲಿ ತಡೆದು ಅಂಜುತ್ತಂಜುತ್ತ ಈ ವೃತ್ತಾಂತವನ್ನು ಶ್ರೀ ರಾಮನಿಗೆ ತಿಳುಹುವರು. ಬಳಿಕ ಸೀತಾ-ರಾಮರು ಶುದ್ಧೋದಕಗಳಿಂದ ಸ್ನಾನ ಮಾಡಿ ರಾಜ್ಯ ಯೋಗ್ಯ ವಸ್ತ್ರಗಳನ್ನು ಧರಿಸಿ, ತಾವು ಉಟ್ಟಿದ್ದ ವಸ್ತ್ರವನ್ನು ದಾಸಿಯರಿಗೆ ಕೊಡುವರು ಅನಂತರ ಎಲ್ಲರೊಡನೆ ಶ್ರೀ ರಾಮನು ಭೋಜನ ಶಾಲೆಗೆ ಬಂದು, ತಮ್ಮಂದಿರೊಡನೆ ವಿಲ. ಸಕರವಾದ ಮಾತುಗಳನ್ನಾಡುತ್ತ ಭೋಜನ ಮಾಡುವನು- ಸೀತಾದೇವಿಯ ಪತಿಯ ಭೋಜನವಾದ ಬಳಿಕ ಆತನಿಗೆ ತಾಂಬೂಲಾದಿಗಳನ್ನು ಕೊಟ್ಟು, ಊರ್ಮಿಳೆಯೇ ಮೊದ 'ಲಾದ ತನ್ನ ತಂಗಿಯರೊಡನೆ ಊಟಮಾಡುವಳು. ಬಳಿಕ ತನ್ನ ಕಾರ್ಯಗಳನ್ನು ಮುಗಿಸಿಕೊಂಡು, ಸಖಿಯರೊಡನೆ ಶಯನಾಗರಕ್ಕೆ ಹೋಗಿ, ಪಗಡೆ ಮೊದಲಾದ ಗಳನ್ನು ಆಡುವಳು. ಅಷ್ಟರಲ್ಲಿ ತನ್ನ ಶಯನಮಂದಿರದ ಕಡೆಗೆ ಬರುತ್ತಿದ್ದ ಶ್ರೀ ರಾಮ ನನ್ನು ನೋಡಿ, ಸಖಿಯರನ್ನು ಹೊರಗೆ ಕಳುಹಿ, *ಕಾದೇವಿಯು ಬಾಗಿಲಿಗೆ ಬಂದ ೫ ಹನುನ ಪಾದಗಳಿಗೆ ವಂದಿಸಿ, ಕೈ ಹಿಡಿದು ಮಂಚದ ಮೇಲೆ ಕುಳ್ಳಿರಿಸುವಳು, ಬಳಿಕ ನಸುನಗುತ್ತ ಸುಗಂಧಗಳಿಂದ ಘಮಘಮಿಸುವ ಜಲವನ್ನಿತ್ತು, ಮಡಿಚಿಟ್ಟಿದ್ದ ತಾಂಬೂ