ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮದನಂದ ರಾಮಾಯಣ, ಕವನ್ನು ಕೊಟ್ಟು , ತಾನೂ ಆತನ ಬಳಿಯಲ್ಲಿ ಕುಳಿತು ಮಾತನಾಡುತ್ತಿದ್ದಳು, ಶ್ರೀ ರಾಮನು ಗೋಡೆಯ ಮೇಲೆ ಕಾಣುತ್ತಿರುವ ರಾವಣನ ಚಿತ್ರವನ್ನು ನೋಡಿ, ಈ ಚಿತ್ರವನ್ನು ಬರೆದವರು ಯಾರು ಎಂದು ಪ್ರಶ್ನೆ ಮಾಡಿದನು. ಆಗ ಕೈಕೇಯಿ ಯು ರಾವಣನ ಚಿತ್ರವನ್ನು ಬರೆಯುವವರಿನ್ನು ; ಜಾನಕಿ, ಅವಳದೇ ಈ 5 ತಪ) ಯಾರ ಮನಸ್ಸಿನಲ್ಲಿ ಯಾವ ಯೋಚನೆ ಇರುವದೊ, ಅವರ ಕಾರ್ಯ ಗಳಲ್ಲ ಅದೇ ಹೊರಬೀಳುವದು' ಎಂದು ಉತ್ತರಕೊಟ್ಟಳು ಈ ಮಾತುಗಳ ನ್ನು ಕೇಳಿದೊಡನೆ ಶ್ರೀ ದುನು ಬಹಳ ಸಿಟ್ಟಿನಿಂದ (ನಾಳೆ ಬೆಳಿಗ್ಗೆ ಸೀತೆಯನ್ನು ಖಂಡಿತವಾಗಿ ಅರಣ್ಯಕ್ಕೆ ಕಳುಹಿಸುವ ಪ್ರಯತ್ನ ಮಾಡುವೆನು' ಎಂದು ತಾಯಿಯ ಎದುರಿಗೆ ಪ್ರತಿಜ್ಞೆ ಮಾಡಿ, ಸ್ವಲ್ಪ ಹೊತ್ತು ಮಾತನಾಡುತ್ತ ಕುಳಿತಿದ್ದು, ಬಳಿಕ ಅಲ್ಲಿಂದ ಹೊರಟನು. ಶ್ರೀ ರಾಮನ ಈ ಮಾತುಗಳನ್ನು ಕೇಳಿ ಕೈಕೇಯಿಗೆ ಬಹಳ ಸಮಾಧಾನ ಯಿತು. ಶ್ರೀ ರಾಮನು ನಿತ್ಯಕೃತ್ಯಗಳನ್ನು ತೀರಿಸಿಕೊಂಡು ಸೀತಾದೇವಿಯ ಮಂದಿರಕ್ಕೆ ತೆರಳಿದರು. ಅಲ್ಲಿ ಸೀತೆಯು ಸಿದ್ಧ ಪಡಿಸಿಟ್ಟಿದ್ದ ತಾಂಬೂಲವನ್ನು ಸ ವಿದು, ಕೈಕೇಯಿಯ ಅಂತಃಪುರದಲ್ಲಿ ನಡೆದ ಸಮಾಚಾರಗಳೆಲ್ಲವನ್ನೂ ತಿಳುಹಿ ದನು. ಈ ಮಾತುಗಳನ್ನು ಕೇಳಿ ಜಾನಕಿಯು ಆಶ್ಚರ್ಯಗೊಂಡು ಆ ದಿವಸ ನಡೆದ ತನ್ನ ಸಮಾಚಾರವನ್ನು ಪತಿಗೆ ತಿಳುಹಿದಳು. ಅನಂತರ ಅವರಿಬ್ಬರೂ ಕೈಕೇಯಿ ಯ ಕೌಟಿಲ್ಯಕ್ಕೆ ಆಶ್ಚರ್ಯ ಪಟ್ಟರು. ಶ್ರೀ ರಾಮನು ಪ್ರಿಯೆ, ನೀನು ಏನ ನ್ನು ಅಪೇಕ್ಷಿಸುವೆ?' ಎಂದನು. ಆಗ ಜಾನಕಿಯ ಪ್ರಭೂ, ಉಪವನ ವಿಹಾರಿ ರಕ್ಕೆ ಹೋಗಬೇಕೆಂದಿರುವೆನು' ಎಂದು ತಿಳುಹಿದಳು. ಈ ಬಯಕೆಯನ್ನು ನಾಳೆ ಪ್ರಾತಃಕಾಲದಲ್ಲಿ ನಿನಗೆ ಕೈಗೂಡಿಸಿ ಕೊಡುವೆನೆಂದು ಹೇಳಿ ಶ್ರೀ ರಾಮನು ಸೀ ಶರೊಡನೆ ನಿದ್ರೆ ಮಾಡಿದನು. - ಬೆಳಿಗ್ಗೆ ಶ್ರೀ ರಾಮನ ಅಪ್ಪಣೆಯಂತ ಲಕ್ಷಣನು ರಥವನ್ನು ಸಿದ್ಧಗೊಳಿಸಿ ದ್ದನು. ಅಷ್ಟರಲ್ಲಿ ಜಾನಕಿಯ ಕೌಸಲ್ಯ ಮೊದಲಾದ ಎಲ್ಲಾ ಹಿರಿಯರ ಆ ಪ್ರಣೆಯನ್ನು ಪಡೆದು, ಅರುಂಧತಿಯ ಪಾದಗಳಿಗೆ ನಮಸ್ಕರಿಸಿ , ಮೆಲ್ಲನೆ ರಥದ ಬ ಳಿಗೆ ಬಂದು ಅತಿಪ್ರಯಾಸದಿಂದ ರಥವನ್ನೇರಿದಳು ಲಕ್ಷಣನು ಶ್ರೀ ರಾಮನ ಆಜ್ಞೆಯಂತೆ ವಾಲ್ಮೀಕಿ ಮಹರ್ಷಿಗಳ ವನದ ಬಳಿಗೆ ರಥವನ್ನು ನಡೆಸಿದನು. ಆ ಣ್ಣುಗಳಲ್ಲಿ ನೀರು ಸುರಿಸುತ್ತಿರುವ ಸೀತೆ-ಲಕ್ಷಣರನ್ನು ನೋಡಿ, ಪುರಜನರು ಬಹಳ ವ್ಯಸನ ಪಟ್ಟರು. ಲಕ್ಷಣನು ದಕ್ಷಿಣದಿಕ್ಕಿಗೆ ಅತಿವೇಗದಿಂದ ರಥವನ್ನು