ಪುಟ:ಶ್ರೀ ಮದಾನಂದ ರಾಮಾಯಣ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಶ್ರೀಮದಾನಂದ ರಾಮಾಯಣ, ೧ಾಗಿ ಉಬ್ಬಿತು. ಬ್ರಹ್ಮಾಸ್ತ್ರವು ಚೂರು ಚೂರಿಯಿತ್ತು. ಆಮೇಲೆ ಕೇಳುವದೇ ನು?11 ಲಕ್ಷಣನೊಡನೆ ಮುಷ್ಟಿಯುದ್ಧ ಮಾಡಲು ಆ ಋಷಿಶಿಷ್ಯನು ಭುಜಗಳನ್ನು ಚಪ್ಪರಿಸಿನಿಂತನು.

  • ಇಷ್ಟರಲ್ಲಿ ಕುಶನು ಭಾಗೀರಥಿಯಿಂದ ನೀರು ತರುತ್ತಿರುವ ಜನಗಳನ್ನು ನೋ d, “ಇದೇನು? ಇಷ್ಟು ಜನಗಳು ವೇಗವಾಗಿ ನೀರು ತೆಗೆದುಕೊಂಡು ಎಲ್ಲಿಗೆ ಹೋಗುತ್ತಿರುವಿರಿ?' ಎಂದು ಪ್ರಶ್ನೆ ಮಾಡಿದನು. ಅವರ ಮುಖದಿಂದ ಲವನ ಸದು ಈ ವೃತ್ತಾಂತವನ್ನು ಕೇಳಿ, ಕುಶನು ಆಶ್ರಮಕ್ಕೆ ಶೀಘ್ರವಾಗಿ ಬಂದು, ತಮ್ಮಿಬ್ಬರ ಧನುಸ್ಸುಗಳನ್ನೂ ಸ್ವೀಕರಿಸಿ, ಶ್ರೀ ರಾಮನ ಯಜ್ಞ ಮಂಟಪದ ಬಳಿಗೆ ತೆರಳಿದನು. ಆತನು 'ಎಲೈ ಲಕ್ಷಣನೇ, ಬಾಲಕನ ಸಂಗಡ ಯುದ್ಧ ಮಾಡುವದೇನು ದೊಡ್ಡಸ್ತಿ ಕೆ? ನನ್ನ ತಮ್ಮನಾದ ಲವನಿಗೆ ಸಹಾಯ ಮಾಡುವದಕ್ಕೂ, ನಿಮ್ಮಿಬ್ಬರನ್ನು ಸೋ ಅಸಲಿಕ್ಕೂ ಬಂದಿರುವ ಈ ನನ್ನೊಡನೆ ಯುದ್ಧ ಮಾಡು ನೋಡೋಣ, ಎಂದು ಗರ್ಜಿಸಿದನು. ಆಗ ಕುಶನಿಗೂ ಲಕ್ಷ್ಮಣನಿಗೂ ಬಹಳ ದೊಡ್ಡ ಯುದ್ಧವಾಯಿತು ಲಕ್ಷ್ಮಣನ ಎಲ್ಲ ಬಾಣಗಳೂ ವ್ಯರ್ಥವಾದವು. ಕುಶನು ಮನಸ್ಸಿನಲ್ಲಿ ಲಕ್ಷಣ ನು ಶೇಖಾವತಾರದಾಗಿರುವನೆಂದು ತಿಳಿದು ಗರುಡಾಸ್ತ್ರವನ್ನು ಆ ಶೂರನ ಮೇಲೆ ಪ್ರಯೋಗಿಸಿದನು. ಆ ಅಸ್ತ್ರವನ್ನು ನೋಡಿದೊಡನೆ ಲಕ್ಷಣನು ಭಾಮಿಯ ಮೇಲೆ ಮೂರ್ಛಿತನಾಗಿ ಬಿದ್ದನು. ಈ ಭಯಂಕರ ಪ್ರಸಂಗವನ್ನು ನೋಡಿ, ದೀಕ್ಷಿತ ನಾದ ರಾವುನು ಕೈಯಲ್ಲಿ ಧನುಸ್ಸನ್ನು ಸ್ವೀಕರಿಸಿ ಬ್ರಹ್ಮಾಸ್ತ್ರದಿಂದ ಆ ಗರುಡಾಸ್ತ್ರ ವನ್ನು ಉಪಶಮನ ಮಾಡಿದನು. ಇದನ್ನು ನೋಡಿ ಕುಶನು ಶ್ರೀ ರಾಮನ ಮೇಲೆ ಸರ್ಪಾಸ್ತ್ರವನ್ನು ಪ್ರಯೋಗಿಸಿದನು, ಮತ್ತು ರಾಮಚಂದ್ರಾ, ನಾನು ಅಬಲೆ. ಯಾದ ಸೀತಾವಿಯೆಂದು ತಿಳಿಯಬೇಡ ಆ ಪತಿವ್ರತೆಯಾದ ಸೀತೆಯನ್ನು ಹ್ಯಾಗೆ ಮೋಸಗೊಳಿಸಿದೆಯೋ, ಹಾಗೆ ನನ್ನನ್ನು ಮೋಸಗೊಳಿಸಲಾರೆ, ಈ ದಿವಸ ನಿನಗೆ ನನ್ನ ಗುರುಗಳಾದ ವಾಲ್ಮೀಕಿ ಮಹರ್ಷಿಗಳ ವಿದ್ಯೆಯ ಮಹಿಮೆಯನ್ನು ಸ್ವಲ್ಪ ತೋರಿಸುವನು” ಎಂದು ಹೇಳಿ ಶ್ರೀ ರಾಮನೊಡನೆ ಘೋರವಾದ

ಯುದ್ದ ಮಾಡಿದನು, "ಆ ಯುದ್ಧವನ್ನು ವರ್ಣಿಸಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟರಲ್ಲಿ ಶ್ರೀ ಕಾಮನು ತನ್ನ ಒಬ್ಬ ಮಂತ್ರಿಯನ್ನು ಕರೆದು ಅದಾಗ್ಯವರ್ಯನೇ, ನೀನು ಈ ಲ್ಮೀಕಿ ಮುನಿಗಳ ಬಳಿಗೆ ಹೋಗಿ, ಈ ಕುಮಾರಸು ಯಾರು? ಎಂಬ ಸಮಾಚಾರ ನ್ನು ತಿಳಿದುಕೊಂಡು ಬಾ, ಬಳಿಕ ಅವನಿಗೆ ಪ್ರತಿಕಾರ ಮಾಡುವ ಯೋಚನೆ ಮ