ಪುಟ:ಶ್ರೀ ಮದಾನಂದ ರಾಮಾಯಣ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮಕುಂಡ. NFL - - - - - - - - - - - - - - - - - - - ಭೇದಕ ವಚನಗಳನ್ನು ಕೇಳಿ ಲಕ್ಷಣನು ಬಹಳ ಕೋಪದಿಂದ ಲವನ ಮೇಲೆ ಶಾಸ್ಪದಳ ಮಳೆಕರೆದನು. ಅವನು ಅವನ್ನೆಲ್ಲ ತನ್ನ ಬಾಣದಿಂದ ತಡೆದು, ಲಕ್ಷಣನನ್ನು ಹೊರತಾಗಿ ಮಿಕ್ಕ ಸೇನೆಯನ್ನು ಶ್ರೀ ರಾಮನ ಎದುರಿಗೆ ಬೀಳು ವಂತೆ ಮಾಡಿದನು. ಆ ಸೈನಿಕರು ರಾಮಚಂದ್ರಾ, ಆ ನೀರನಮುಂದೆ ನಮ್ಮ ಪರಾಕ್ರಮಗಳೇನೂ ನಡೆಯುವಂತಿಲ್ಲ. ಲಕ್ಷಣನಿಗೆ ನೀನು ಜಾಗ್ರತೆ ಸಹಾಯ ಮಾಡು' ಎಂದು ಬೇಡಿಕೊಂಡರು. ಈ ಮಾತುಗಳನ್ನು ಕೇಳಿ ಶ್ರೀ ರಾಮನಿಗೂ ಸ್ವಲ್ಪ ಯೋಚನೆಯುಂಟಾಯಿತು.

  • ಇತ್ತ ಲವನಿಗೂ ಲಕ್ಷ್ಮಣನಿಗೂ ಭಯಂಕರವಾದ ಯುದ್ಧವು ನಡೆಯಿತು. ಲವನ ಬಾಣಗಳು ಲಕ್ಷ್ಮಣನ ಶರೀರವನ್ನು ಭೇದಿಸುತ್ತಿದ್ದವು, ಲಕ್ಷ್ಮಣನ ಒಂದು ಬಾಣವಾದರೂ ಲವನಿಗೆ ತಗಲಲಿಲ್ಲ. ಬಳಿಕ ಲಕ್ಷಣನು ಬ್ರಹ್ಮಾಸ್ತ್ರದಿಂದ ಲವ ನನ್ನು ಕಟ್ಟಿ, ಕುದುರೆಯೊಡನೆ ಶ್ರೀ ರಾಮನ ಬಳಿಗೆ ಆತನನ್ನು ಕರೆತಂದನು. ಆಗ ರಾಮಚಂದ್ರನು ಎಲೈ ಲಕ್ಷಣನೆ, ಈ ಬ್ರಾಹ್ಮಣ-ಕುಮಾರನನ್ನು ನಾಶಮಾಡು, ಇವಸಿಂವ ನಮಗೆ ಪ್ರತಿಕೂಲವೇ ಹೊರತು ಅನುಕೂಲವೇನೂ ಕಾಣುವದಿಲ್ಲ' ಎಂದನು. ಅದಕ್ಕೆ ಲಕ್ಷ್ಮಣನು ಅಣ್ಣಾ, ಈ ಮುನಿಪುತ್ರನ ಮೇಲೆ ಯಾವ ಅಸ್ತ್ರಗ ಆ ಆಟವೂ ನಡೆಯುವದಿಲ್ಲ, ಬ್ರಹ್ಮಾಸದ ದಾಕ್ಷಿಣ್ಯಕ್ಕಾಗಿ ಈತನು ಸುಮ್ಮನಿ ರುವನು. ಆದಕಾರಣ ಈತನಿಗೆ ಯಾತರಿಂದ ಮರಣವಾಗುವದೆಂಬದನ್ನು ತಾ ವೇ ವಿಚಾರಿಸಬೇಕು' ಎಂದು ವಿಜ್ಞಾಪಿಸಿದನು. ಈ ಮಾತುಗಳನ್ನು ಕೇಳುತ್ತಲಿ ದ್ದ ಲವನು, ಅವರೇಕೆ ವಿಚಾರಿಸಬೇಕು? ನನ್ನ ಮೇಲೆ ನೂರು ಬಿಂದಿಗೆ ನೀರು ಸುರಿದರೆ ನಾನು ಮರಣ ಹೊಂದುವನು' ಎಂದು ನುಡಿದನು, ಆಗ ಲಕ್ಷಣನು ಆ ಲವಕುಮಾರನನ್ನು ಒಂದು ದೊಡ್ಡ ಬಂಡೆಯ ಮೇಲೆ ಕುಳ್ಳಿರಿಸಿ, ನೀರು ಸುರಿಸಲಾ ರಂಭಿಸಿದನು. ಅವನು ನೀರು ಸುರಿದ ಹಾಗೆಲ್ಲ ಪರ್ವತದಂತ ಬೆಳೆಯುತ್ತಿದ್ದನು. ಅದನ್ನು ನೋಡಿ ನೌಮಿತ್ರಿಯು “ಎಲೈ ವೀರನೇ, ನೀನು ನನಗೆ ಸುಳ್ಳು ಹೇಳಿ ರುವೆ. ಇದೇನು? ನಿನ್ನ ದೇಹವು ಇಷ್ಟು ಉನ್ನತವಾಗುತ್ತಿರುವದು ?' ಎಂದ ನು. ಆಗ ಲವನು ಏಸಯಾ ಲಕ್ಷಣನೆ, ನೀನು ಇಷ್ಟು ಯೋಚಿಸಲಿಲ್ಲವಲ್ಲ? ಎಣ್ಣೆ ತೀರಿದ ಮೇಲೆ ದೀಪವು ಅವಸಾನ ಕಾಲದಲ್ಲಿ ಹೊಗೆ ದೊಡ್ಡದಾಗುವ ದೂ, ಅದರಂತೆ ನನ್ನ ದೇಹವು ಮರಣಕಾಲಕ್ಕೆ ಈ ಸ್ಥಿತಿಯಲ್ಲಿ ರುವದು. ಇನ್ನು ಸ್ವಲ್ಪ ನೀರು ಹಾಕಿಸು, ಆಟ ಮುಗಿಯುವದು ” ಎಂದು ಮಾತನಾಡಿದನು. ಆ ತನ ಮಾತಿನಂತೆ ಇನ್ನು ಸ್ವಲ್ಪ ನೀರು ಸುರಿಯಲು , ಲವನ ದೇಹವು ಸಂಪೂರ್ಣ

h ಅ೫