ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮಕುಂಡ. ೧೬ ಪ್ರಣೆಯನ್ನು ಪಡೆದು, ಪ್ರಮಾಣವೂಡಲು ಸಭೆಯ ಎದುರಿಗೆ ಬಂದಳು. ಮತ್ತು ಈ ಇರಾಭಿಮುಖಳಾಗಿ ನಿಂತು “ಎಲೈಭೂದೇವಿಯೇ, ನಾನು ಶ್ರೀ ರಾಮನನ್ನು ಹೊ ರತಾಗಿ ಮತ್ತೊಬ್ಬ ಪುರುಷನನ್ನು ಮನಸ್ಸಿನಲ್ಲಾದರೂ ಗಮನಿಸದೆ ಇದ್ದದ್ದು ಸತ್ಯ ವಾದರೆ, ನನ್ನನ್ನು ನಿನ್ನೊಳಗೆ ಸೇರಿಸಿಕೊ” ಎಂದು ಪ್ರಾರ್ಥಿಸಿದಳು ಸೀತೆ ವಿಯ ಈ ಮಶುಗಳನ್ನು ಕೇಳಿದ ಕೂಡಲೆ, ಭೂಮಿಯು ಬಿರಿದು ಅದರಿಂದ ಒಂದು ಸುವರ್ಣದ ಸಿಂಹಾಸನವು ಮೇಲಕ್ಕೆ ಬಂತು. ಆಗ ಭೂದೇವಿಯು ತನ್ನ ನಿಜರೂಪದಿಂದ ಬಂದು, ಸೀತೆಯನ್ನು ಆಲಿಂಗಿಸಿ, ಆಕೆಯನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದಳು. ಆನಂತರ ಭೂದೇವತೆಯು ಸೀತೆಯೊಡನೆ ಮೆಲ್ಲ ಮೆಲ್ಲನೆ ಭೂವಿವ ರವನ್ನು ಪ್ರವೇಶಿಸಲಾರಂಭಿಸಿದಳು, ಇದನ್ನು ನೋಡಿ ಸಮಸ್ತ ಜನರೂ ಹೆದರಿದರು. ರಾಜಸತ್ತಿಯು ಗುಪ್ತಾ ಗುವಳೆಂದು ಪ್ರಜೆಗಳು ಹಾ ಹಾಕಾರ ಮೂಡಿದರು. ದೇವತೆಗಳು ಸೀತೆಯ ಮೇಲೆ ಪುಷ್ಪವೃಷ್ಟಿ ದೂಡಿದರು. ಅಷ್ಟರಲ್ಲಿ ಶ್ರೀರಾಮನು ಸಿಂಹಾಸನದಿಂದ ಎದ್ದು ಬಂ ದು, ಒಂದು ಹಸ್ತದಿಂದ ಸೀತೆಯನ್ನೂ, ಮತ್ತೊಂದು ಹಸ್ತದಿಂದ ಭೂಮಿಯನ್ನೂ ಹಿ ಇದು ಪ್ರಾರ್ಥನೆ ಮೋಡಿದನು. ಆದರಾ ಭೂದೇವಿಗೆ ಸ್ವಲ್ಪವೂ ಕರುಣ ಬರಲಿಲ್ಲ. ಸೀತೆಯು ಸಂಪೂರ್ಣ ಗುಪ್ತಳಾಗುವ ಸ್ಥಿತಿಯು ಕಾಣಿಸಿತು. ಆಗ ಶ್ರೀ ರಾಮನು ತಮಾ, ನನ್ನ ಧನುಸ್ಸನ್ನು ತೆಗೆದುಕೊಂಡು ಬಾ, ಈ ಭೂದೇವಿಯನ್ನು ಹೀರಿಸಿ ಬಿಡುವೆನು' ಎಂದು ಅತಿಕೋಪದಿಂದ ಆಜ್ಞೆ ಮಾಡಿ ಧನುಸ್ಸಿಗೆ ಯೌರ್ವಿಯನ್ನು ಕಟ್ಟಿ ಬಾಣವನ್ನು ಹೂಡಲುಪಕ್ರಮಿಸಿದನು. ಆಗ ಅನೇಕ ಉತ್ಪಾತಗಳಾದವು. ಭೂ ದೇವಿಯು ಥರಥರನೆ ನಡುಗಲಾರಂಭಿಸಿದಳು. ಆಕೆಯು ಸ್ತ್ರೀ ರೂಪವನ್ನು ಧರಿ ಸಿ, ಶ್ರೀ ರಾಮನಿಗೆ ಸೀತೆಯನ್ನು ಒಪ್ಪಿಸಿ ಶರಣಾಗತಳಾದಳು ಸೀತಾದೇವಿಯ ನ್ನು ನೋಡಿ ಸಮಸ್ತರೂ ಆನಂದದಿಂದ ಕೋಲಾಹಲ ಮಾಡಿದರು. ಸಭಾಸದರು *ಸೀತೆಯು ಪರಮಪವಿತ್ರಳಿರುವಳು. ನಾವು ಅನ್ಯಾಯವಾಗಿ ಆ ಲೋಕಜನನಿಗೆ ಅಪವಾದದ ಮಾತುಗಳನ್ನಾಡಿದೆವು' ಎಂದು ಹೇಳಿದರು. ಅನಂತರ ಶ್ರೀ ರಾಮ ನು ಸಭಾವಿಸರ್ಜನೆ ಮಾಡಿ ನೂರನೇ ಅಶ್ವಮೇಧಯಾಗವನ್ನು ಮುಗಿಸಿದನು. ಮುತ್ತು ಸಮಸ್ತರನ್ನೂ ನಾನಾ ವಿಧವಾದ ದಾನ-ಧರ್ಮಗಳಿಂದ ತೃಪ್ತಿಗೊಳಿಸಿ ಆ ವರವರ ಸ್ಥಳಗಳಿಗೆ ಕಳುಹಿದನು. ಬಳಿಕ ಶ್ರೀ ರಾಮನು ಪತ್ರೀ-ಪುತ್ರರಿಂದೊಡ ಗೂಡಿ ಅಯೋಧ್ಯೆಗೆ ಬಂದು ಸೇರಿದನು. ಆಗ ಸೀತರಾಮರಿಗೆ ಆರತಿಗಳನ್ನು ಪೌರನಾರಿಯರು ಬೆಳಗಿದರು. ಈ ರೀತಿಯಾಗಿ ಶ್ರೀ ರಾಮನು ತನ್ನ ಸದಾಚಾರ