೨೦೨ ಶ್ರೀದುದಾನಂದ ರಾಮಾಯಣ, ರಾಮಸೇ ಮೊದಲಾದ ಸಮಸ್ತ ರಾಜರನ್ನೂ ನಗರವೇಶ ಮಾಡಿಸಿದನು. ಸೀ ತಾ-ರಾಮರನ್ನು ನೋಡಬೇಕೆಂದು ಜನರು ಆ ನಗರದ ರಾಜಬೀದಿಯಲ್ಲಿ ತೆರಪಿ ಲ್ಲದೆ ನಿಂತಿದ್ದರು. ಅವರು ತಮ್ಮ ಕಾರ್ಯಗಳನ್ನು ಅಲ್ಲಲ್ಲಿಗೇ ನಿಲ್ಲಿಸಿ ಶ್ಯಾಮ ಸುಂದರನಾದ ಶ್ರೀ ರಾಮನನ್ನು ನೋಡಿ, ಕೌಸಲ್ಯಯ ಪುಣ್ಯವನ್ನು ಬಹಳ ಕೊ೦ ಡಾಡಿದರು: ಸೀತಾದೇವಿಯು ಐಶ್ವರ್ಯಕ್ಕೆ ಎಣೆಯಿಲ್ಲವೆಂದು ನುಡಿದರು. ಆದ್ರೆ ಧೈಯ ಜನಗಳ ಸುಕೃತಕ್ಕೆ ಪಾರವೇ ಇಲ್ಲವೆಂದು ಭಾವಿಸಿದರು. ಭೂರಿಕೀರ್ತಿಯು ಶ್ರೀ ರಾಮನಿಗೆ ಸಿದ್ಧ ಪಡಿಸಿದ್ದ ರಾಜಭವನದಲ್ಲಿ ಆತನನ್ನು ಇಳಿಸಿ, ಸಮಸ್ತೋಪ ಚಾರಗಳನ್ನೂ ಸಿದ್ಧ ಪಡಿಸಿ, ಹಾಗೆಯೇ ಸಮಸ್ತ ರಾಜಮಂಡಲಿಯ ಯೋಗ-ಕ್ಷ ಮವನ್ನು ವಿಚಾರಿಸಿ, ಅಂತಃಪುರಕ್ಕೆ ಬಂದನು. ಇತರ ನರಾಧಿಪರು 'ಶ್ರೀ ರಾಮ ನು ಪುತ್ರಸಮೇತನಾಗಿ ಸ್ವಯಂವರಕ್ಕೆ ಬಂದಿರುವನು' ಎಂದು ತಿಳಿದು, ತಾ ರಾಜಕನ್ಯಾವಿಷಯದಲ್ಲಿ ನಿರಾಶರಾದರು. ದರದಿವಸ ನಿತ್ಯೋತ್ಸವಗಳೆಲ್ಲ ನಡೆದ ಬಳಿಕ ಭೂರಿಕೀರ್ತಿಯು ಶ್ರೀರಾ ಮನನ್ನು ಮಹದುತ್ಸವದಿಂದ ಸಭಾಮಂಟಪಕ್ಕೆ ಕರೆತಂದನು. ಆಗ ಸಮಸ್ತ ರಾ ಜರೂ ಶ್ರೀ ರಾಮನ ಚರಣಗಳ ಮೇಲೆ ಮಸ್ತಕಗಳನ್ನಿಟ್ಟು ನಮಸ್ಕರಿಸಿದರು. ಸ್ತುತಿಪಾತಕರು ಆಯಾ ರಾಜರ ಹೆಸರುಗಳನ್ನು ಶ್ರೀ ರಾಮನಿಗೆ ನಿವೇದಿಸಿದರು. ಬಳಿಕ ಶ್ರೀ ರಾಮನು ಶ್ರೇಷ್ಠವಾದ ಸಿಂಹಾಸನದ ಮೇಲೆ ಕುಳಿತನು. ಸುತ್ತಲೂ ಸಿದ್ಧ ಪಡಿಸಿದ್ದ ಆಸನಗಳ ಮೇಲೆ ಸಮಸ್ತ ರಾಜರೂ ರಾಜಪುತ್ರರೂ ಯೋಗ್ಯರೀತಿ ಯಿಂದ ಕುಳಿತರು. ಕುಶ-ಲವರೇ ಮೊದಲಾದ ಸೂರ್ಯ ವಂಶದ ರಾಜನಂದನ ರು ಶ್ರೀ ರಾಮನ ಬಳಿಯಲ್ಲಿ ಶ್ರೇಷ್ಠವಾದ ಆಸನಗಳ ಮೇಲೆ ಕುಳಿತಿದ್ದರು. ಅನಂ ತರ ಭೂರಿಕೀರ್ತಿಯ ಪೌತ್ರಿಯರಾದ ಚಂಪಕಾ-ಸುವತಿಯರು ದಾಸಿಯರೊಡನೆ ಸ್ವಯಂವರ ಮಂಟಪವನ್ನು ಪ್ರವೇಶಿಸಿದರು,
- ಆ ರಾಜಪ್ರತಿಯರ ಕಾಂತಿಯಿಂದ ಸಭೆಯು ಝಗಝಗನೆ ಹೊಳೆಯಲಾ ರಂಭಿಸಿತು. ಈ ಕನ್ಯಾರತ್ನಗಳು ಯಾವ ಪುಣ್ಯಶಾಲಿಗೆ ದೊರಕುವವೋ, ನೋ ಡಬೇಕೆಂದು ಸಭೆಯಲ್ಲಿ ಒಬ್ಬರಿಗೊಬ್ಬರು ಮಾತನಾಡುತ್ತಿದ್ದರು. ರಾಜಪುತ್ರಿ ಯಾದ ಚಂಪಕೆಯ ಜೊತೆಗೆ ಒಂದ ದಾಸಿಯು, ಅಯಾ ದೇಶದ ರಾಜರ ಸಕಾ ಕ್ರಮಗಳನ್ನು ಆಕೆಗೆ ತಿಳಿಸುತ್ತ ಸಭೆಯಲ್ಲಿ ಬರುತ್ತಿದ್ದಳು, ಕ್ರಮವಾಗಿ ಆದಾಸಿ ಯು ಲಕ್ಷಣ-ಶತ್ರುಘ್ನರ ಬಳಿಗೂ ಬಂದು ಅವರ ಪರಾಕ್ರಮದ ವಿಷಯವಾಗಿ ಸ್ತೋತ್ರ ಮಾಡಿದಳು, ಹಾಗು ಶ್ರೀ ರಾಮನ ಸನ್ನಿಧಿಗೆ ಬಂದು ಆ ಮಹಾನುಭ