ಪುಟ:ಶ್ರೀ ಮದಾನಂದ ರಾಮಾಯಣ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಜಯಕಾಂಡ. ಇnk ವನ ಚರಿತ್ರೆಯನ್ನು ಬಹು ವಿಧವಾಗಿ ತಿಳುಹಿದಳು ಆದರೂ ಆ ರಾಜ ಕನ್ಯಯ ಮನಸ್ಸು ಒಪ್ಪಲಿಲ್ಲ. ಶ್ರೀ ರಾಮನ ಸಮೀಪದಲ್ಲಿ ಕುಳಿತಿದ್ದ ಕುಶನನ್ನು ನೋಡಿ ಈ ರಾಜಪುತ್ರನು ಯಾರೆಂದು ಚಂಪಕರು ದಾಸಿಯನ್ನು ಪ್ರಶ್ನೆ ಮಾಡಿದಳು. ಅಗ ಉದಾಸಿಯು ಈತನು ಶ್ರೀ ರಾಮನ ಮಗನು ಧನುರ್ವೇದದಲ್ಲಿ ಈತನಿಗೆ ಯಾ ರೂ ಸರಿಹೋಲರು. ಬಾಲ್ಯದಲ್ಲಿ ತಂದೆಯೊಡನೆ ಯುದ್ಧ ಮಾಡಿ ಆತನಿಗೂ ಆ ಶ್ವರ್ಯವನ್ನು ಕಟು ಮಾಡಿರುವನು, ಇತ್ಯಾದಿ ಅನೇಕ ಪ್ರಕಾರಗಳಿಂದ ಕುಶನನ್ನೂ ಸೈತ್ರ ಮಾಡಿದಳು ಆಗ ಚಂಪಕೆಯು ಪರಮಹರ್ಷದಿಂದ ಆತನ ಕೊರಳಿಗೆ ನವರತ್ನ ಮಾಲಿಕೆಯನ್ನು ಸಮರ್ಪಿಸಿದಳು. ಆಗ ನಾನಾ ವಿಧವಾದ ವಾದ್ಯಗಳು ಭೋರ್ಗರೆದವ, ಭೂರಿಕೀರ್ತಿಯು ತನ್ನ ಮೊಮ್ಮಗಳಾದ ಚಂಪಕೆಯನ್ನು ಕುಶನ ತೊಡೆಯ ಮೇಲೆ ಕುಳ್ಳಿರಿಸಿದನು. ಸಮಸ್ತ ರಾಜಸ್ತೀಯರೂ ಪಟರಂದ್ರಗಳಿಂದ ನೋಡುತ್ತಿದ್ದರು. ಅವರೆಲ್ಲರೂ ಈ ವಧೂವರರ ಸಾಮ್ಯವನ್ನು ನೋಡಿ ಆನಂದ ಹೊಂದಿದರು. ಇತ್ತ ಭೂರಿಕೀರ್ತಿಯ ಮೊಮ್ಮಗಳಾದ ಸುಮತಿಯ ಜೊತೆಗೆ ಬಂದ ದಾ ಸಿಯು ಸಮಸ್ತ ರಾಜರ ಪ್ರತಾಪಗಳನ್ನೂ ಹೊಗಳುತ್ತ, ಕೊನೆಗೆ ಶ್ರೀ ರಾಮನ ಸ ಮೀಪದಲ್ಲಿ ಕುಳಿತಿದ್ದ ಲವನ ಬಳಿಗೆ ಬಂದು, ಅವನ ಪರಾಕ್ರಮವನ್ನು ವರ್ಣಿಸಹತ್ತಿ ದಳು ಅದೆಲ್ಲವನ್ನೂ ಕೇಳಿ, ರೂಪ, ಲಾವಣ್ಯಗಳಿಗೆ ಮೋಹಿತಳಾದ ಸುಮತಿಯು ತನ್ನ ಕೈಯಲ್ಲಿದ್ದ ನವರತ್ನ ಹಾರವನ್ನು ಲವನ ಕಂಠಕ್ಕೆ ಹಾಕಿದಳು. ಸಭಾ ಸದರ. ವಧೂವರರ ಮೇಲೆ ಪುಷ್ಪಗಳ ದೃಷ್ಟಿ ಮಾಡಿದರು. ಬ್ರಾಹ್ಮಣರು ವಧ ವರರಿಗೆ ಆಶೀರ್ವದಿಸಿದರು. ಭೂರಿಕೀರ್ತಿಯು ತನ್ನ ಮೊಮ್ಮಗಳಾದ ಸುಮತಿ ಯನ್ನು ಲವನ ತೊಡೆಯ ಮೇಲೆ ಕುಳ್ಳಿರಿಸಿದನು, ಮತ್ತು ಸಭೆಯನ್ನು ಉಲ್ಲೇ ಶಿಸಿ-ಭೋ ರಾಜಪುತ್ರರೆ, ನನ್ನ ಪ್ರೌತಿಯರು ತಮಗೆ ಅನುರೂಪಂದ ಪತಿಯ ಳಿಗೆ ನವರತ್ರ ಮಾಲಿಕೆಗಳನ್ನು ಹಾಕಿರುವರು. ಈಗಲೇ ಅವರ ಪಾಣಿಗ್ರಹಣ ಮಹೋತ್ಸವವು ನಡೆಯುವದು. ತವು ಆ ಮಹೋತ್ಸವವನ್ನು ಮುಗಿಸಿಕೊಂಡು ತಮ್ಮ ರಾಜ್ಯಗಳಿಗೆ ಪ್ರಯಾಣ ಮಾಡಬಹುದು, ದಯವಿಟ್ಟು ಈ ನನ್ನ ಮಾತು ಗಳನ್ನು ನೆರವೇರಿಸಿರಿ” ಎಂದು ಪ್ರಾರ್ಥಿಸಿದನು. ಸಮಸ್ತ ರಿಜರೂ ಭೂರಿಕೀ ತಿಯ ವಚನವನ್ನು ಅಂಗೀಕರಿಸಿದರು. ಅನಂತರ ಎಲ್ಲ ರಾಜರೂ ತಮ್ಮ ಬಿಡಾರಗಳಿಗೆ ಪ್ರಯಾಣ ಮಾಡಿದರು. ಶ್ರೀಮನೂ ಸರಿಸಾರ ಸಮೇತನಾಗಿ ಉಜಮಂದಿರಕ್ಕೆ ಪ್ರಯಾಣಭೂಡಿದ