ಪುಟ:ಶ್ರೀ ಮದಾನಂದ ರಾಮಾಯಣ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨9 ಶ್ರೀಮದಾನಂದ ರಾಮಾಯಣ, • . .. . . . . . . . . . ಆಗ ಯೂಪಕರುವು 'ಪ್ರಯೋ, ಈ ರಾಜರ ಹದರಿಕಯು ನನಗೆ ಸ್ವಲ್ಪ ದಾರರೂ ಇಲ್ಲ. ನನ್ನ ಪಂಕ್ತನುವು ನಿನಗೆ ತಿಳಿಯದ್ದರಿಂದ ಹೀಗೆ ಮಾತಾಡುತ್ತಿ , ಹೆದರಬೇಡ, ನನ್ನ ಹಸ್ತಕೌಶಲ್ಯವನ್ನಾದರೂ ನೋಡು' ಎಂದು ಹೇಳಿ ಕೈಯಲ್ಲಿ ಧನುಸ್ಸನ್ನು ಸ್ವೀಕರಿಸಿ ಮೋಹನಾಸ್ತ್ರವನ್ನು ಉಪಸಂಹಾರಮಾಡಿದನು. ಒಳೆಳ ಸಮುಕ್ತ ರಾಜರೂ ಎಚ್ಚರಹೊಂದಿದರು. ನಡೆದ ಸಂಗತಿಯನ್ನು ತಿಳಿದು ಅವರು ಹೊಸಕೇತುವಿನೊಡನೆ ಯುದ್ಧ ಮಾಡಲು ನಗರದ ಹೊರಭಾಗಕ್ಕೆ ಬಂದ ರು, ಯಪಕೇತುವು ಎದುರಾಗಿ ಬರುತ್ತಿರುವ ರಾಜರನ್ನು ನೋಡಿ ನಗುನಗುತ್ತ ವಾಯವ್ಯಾಸ್ತ್ರವನ್ನು ಧನುಸ್ಸಿನಲ್ಲಿ ಜೋಡಿಸಿ ಬಿಟ್ಟನು. ಅಗ ಸಮಸ್ತರಾಜರೂ ಒಣಗಿದ ಎಲೆಗಳಂತ ಯೋಜನಾಂತರಗಳವರೆಗೆ ಹಾರಿಬಿದ್ದರು. ಅದನ್ನು ನೋಡಿ ಮದನಸುಂದರಿಗೆ ಆಶ್ಚರ್ಯವಾಯಿತು. ಈ ವಾರ್ತೆಯನ್ನು ಕೇಳಿ ಕಂಬುಕಂತನು ತನ್ನ ಸೇನೆಯೊಡನೆ ಗ್ರಾಮದ ಹೊರಗೆ ಬಂದು ಯೂಪಕೇತುವಿನೊಡನೆ ಝುದ್ದ ಮಾಡಲು ನಿಂತನು. ಅವನ ರಥದಲ್ಲಿ ಕುಳಿತಿರುವ ತನ್ನ ಮಗಳನ್ನು ನೋಡಿದೆ ಡನೆ ಕಂಬುಕಂಠನಿಗೆ ಪ್ರಚಂಡವಾದ ಕೋಪಬಂತು. ಯಪಕೇತುವು ಒಂದು ಕ್ಷಣದಲ್ಲಿ ಅವನ ಎಲ್ಲ ಸೈನ್ಯವನ್ನು ಯಮಪುರಿಗೆ ಕಳುಹಿದನು. ಕಂಬುಕಂಠನು ಬಹು ಕ್ರೋಧದಿಂದ ರೂಪಕೇತುವಿನ ಮೇಲೆ ಅನೇಕ ಶಸ್ತ್ರಗಳನ್ನು ಪ್ರಯೋಗಿಸಿ ದನು. ಅದರಿಂದ ಸ್ವಲ್ಪವಾದರೂ ಪ್ರಯೋಜನವಾಗಲಿಲ್ಲ. ಯೂಪಕೇತುವು ಅವನ ಸಾರಥಿ, ಕುದುರೆಗಳು ಇವೆಲ್ಲವನ್ನು ನಾಶಮಾಡಿ, ರಥವನ್ನು ಮುರಿದು, ಅವನನ್ನು ಪಾಶಗಳಿಂದ ಕಟ್ಟಿ ತನ್ನ ರಥದಲ್ಲಿ ಹಾಕಿಕೊಂಡು ಖಡ್ಗದಿಂದ ಶಿರಚ್ಛೇದ ಮಾಡಲುದ್ಯುಕ್ತನಾದನು. ಆಗ ಮದನಸುಂದರಿಯು ನನ್ನ ತಂದೆಯನ್ನು ಕೊಲ್ಲ ಬಾರದು, ದಯವಿಟ್ಟು ಅತನ ಪ್ರಾಣದಾನಮಾಡಿರಿ' ಎಂದು ಪ್ರಾರ್ಥಿಸಿದಳು, - ಯಪಕೇತುವು ಪತ್ನಿಯ ವಚನದಂತೆ ಅವನ ಪ್ರಾಣಗಳನ್ನುಳಿಸಿದನು. ಪ್ರತಿಪಕ್ಷಗಳು ಯಾರೂ ಎದುರಿಗೆ ಬರದಿರಲು ಯೂಪಕೇತುವು ಮದನ ಸುಂದರಿ ಯೊಡನೆ ಅಯೋಧ್ಯೆಗೆ ಪ್ರಯಾಣ ಬೆಳಸಿದನು, ಅಷ್ಟರಲ್ಲಿ ಎದುರಿಗೆ ಉತ್ತರದಿ ಕ್ಕಿನಿಂದ ಬರುವ ಸೇನೆಯ ದುಂದುಭಿಗಳ ಧ್ವನಿಯನ್ನು ಕೇಳಿ, ಆತನು ತನ್ನ ಹೆಸ ರಿನ ಒಂದು ಬಾಣವನ್ನು ಆ ಕಡೆಗೆ ಪ್ರಯೋಗಿಸಿದನು, ಅದು ಶತ್ರುತ್ವನ ಪಾದ ಗಳ ಮೇಲೆ ಬಿತ್ತು. ತನ್ನ ಮಗನ ಹೆಸರನ್ನು ನೋಡಿ ಶತ್ರುಘ್ನನಿಗೆ ಪರಮ ಸಂತೋಷವಾಯಿತು. ಮತ್ತು ಶತ್ರುಘ್ನನು ತನ್ನ ನಾಮಾಂಕಿತವಾದ ಒಂದು ಬಾಣವನ್ನು ರೂಪಕೇತುವಿನ ಕಡೆಗೆ ಬಿಟ್ಟನು, ಅದು ಯೂಪಕೇತುವಿನ ತಲೆ