ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಭಾಹಕರಿಂಡ. ೨೧೩ - - -- --- ಯ ಮೇಲೆ ಪುಷ್ಪದಂತ ಬಿತ್ತು, ಅದನ್ನು ನೋಡಿ ತನ್ನ ತಂದೆಯು ತನಗೆ ಸಹಾ ಯ ಮಾಡುವದಕ್ಕೋಸ್ಕರ ಬರುತ್ತಿರುವನೆಂದು ತಿಳಿದು ಯಪಕತುವ ಅತಿನೇ ಗದಿಂದ ಶತ್ರುಪನನಿರುವ ಬಳಿಗೆ ಬಂದು ಆತನಿಗೆ ನಮಸ್ಕರಿಸಿ, ನಡೆದ ವೃತ್ತಾಂತ ವನ್ನು ತಿಳು ಕಂಬುಕಂಠನನ್ನು ಆತನ ಪಾದಗಳಿಗರ್ಪಿಸಿದನು, ಶತ್ರುಘ್ರನು ದಯೆಯಿಂದ ಕಂಬುಕಂಠನನ್ನು ಬಂಧನದಿಂದ ಬಿಡುಗಡೆ ಮಾಡಿಸಿದನು, ಮತ್ತು ಆತನ ಪ್ರಾರ್ಥನೆಯಂತೆ ಎಲ್ಲರೂ ಶಿವಕಾಂತಿ ನಗರದ ಕಡೆಗೆ ತೆರಳಿದರು. ಕಿತ್ತು ಫೈನು ಆ ನಗರದ ಬಳಿಗೆ ಹೋದ ಕೂಡಲೆ ಪಟ್ಟಣದ ಬೈಲು ಭಾಗದಲ್ಲಿ ವಾಸ ಮಾಡಲು ಇಚ್ಛೆಪಟ್ಟನು, ಆ ಕ್ಷಣವೇ ಅಲ್ಲಿ ಪಟಗೃಹಗಳಿಂದ ರಮ್ಯವಾದ ಪ್ರದೇಶಗಳನ್ನು ಸಿದ್ದಪಡಿಸಿದರುಬಳಿಕ ಶತ್ರುಘ್ನನ ಅಪ್ಪಣೆಯಂತೆ ಕಂಬುಕಂಠನು ಶ್ರೀ ರಾಮನಿಗೆಲಗ್ನ ಪತ್ರಿಕೆಯನ್ನು ಬರೆದು ಮಂತ್ರಿಗಳನ್ನು ಅಯೋಧ್ಯೆಗೆ ಕಳುಹಿದನು. ಶಿವಕಾಂತಿನಗರದಿಂದ ಬಂದ ದೂತರು ಅಯೋಧ್ಯೆಗೆ ಬಂದು ಶ್ರೀ ರಾಮ ನಿಗೆ ಲಗ್ನ ಪತ್ರಿಕೆಯನ್ನು ಸಮರ್ಪಿಸಿದರು. ಅದನ್ನು ನೋಡಿ ರಾಮಚಂದ್ರನಿಗೆ ಬಹಳ ಸಂತೋಷವಾಯಿತು. ಈ ಪಾರ್ತೆಯನ್ನು ಸೀತಾದೇವಿಗೆ ತಿಳುಹಿ ಶುಭ ಮುಹೂರ್ತದಲ್ಲಿ ವಸಿಷ್ಠ, ಅಂತಃಪುರಜನರು, ಪುರಜನರು, ಬಂಧುಗಳು ಇವರಾದ ಶ್ರೀರಾಮನು ಶಿವಕಾಂತಿನಗರಕ್ಕೆ ಹೊರಟನು. (ತನ್ನ ನಗರದ ಬಳಿಗೆ ಶ್ರೀ ರಾಮಾದಿಗಳು ಬಂದಿರುವರೆಂಬ ವರ್ತಮಾನವನ್ನು ಕೇಳಿ ಕಂಬುಕಂಠನು ಬಹಳ ನಿಜೃಂಭಣೆಯಿಂದ ಅವರನ್ನು ಎದುರುಗೊಂಡು, ಉಚಿತವಾದ ಸತ್ಕರಗಳಿಂದ ಪರಿ ಪೂರ್ಣವಾದ ಮಂದಿರಗಳಲ್ಲಿ ವಾಸಮಾಡಿಸಿದನು. ಆ ಕಾಲದಲ್ಲಿ ಶ್ರೀ ರಾಮ ನನ್ನು ನೋಡಬೇಕೆಂದು ಜನಗಳ ಸಮುದಾಯವು ಕಾಜಬೀದಿಗಳಲ್ಲಿ ತರಂಗತರಂ ಗಗಳಾಗಿ ನಿಂತಿತ್ತು. ಯೂಪಕೇತುವನ್ನು ಆನೆಯ ಮೇಲೆ ಕುಳ್ಳಿರಿಸಿ ಉತ್ಸವವು ನಡೆಯಿತು. ವಿವಾಹಮಹೋತ್ಸವವು ಸಾಂಗರಾಗಿ ನೆರವೇರಿದ ಬಳಿಕ ಶ್ರೀ ರೀಮನು ಸಮಸ್ತ ಬಂಧುಗಳೊಡನೆ ಅಯೋಧ್ಯೆಗೆ ಪ್ರಯಾಣ ಮಾಡಿದನು. ಆ ಕಾಲದಲ್ಲಿ ಕಂಬುಕಂಠನು ದರಪಕ್ಷದವರಿಗೆ ಅಮೂಲ್ಯವಾದ ಆಭರಣಗಳನ್ನೂ, ವಸ್ತ್ರಗಳನ್ನೂ ಸಮರ್ಪಿಸಿದನು, ಮತ್ತು ತನ್ನ ಮಗಳಾದ ಮುದಸುಂದರಿಯನ್ನು ರೂಪಕತುವಿನೊಡನೆ ಕಳುಹಿದನು, ಈ ರೀತಿ ಶ್ರೀರಾಮನು ಅತಿಸಂಭ್ರಮದಿಂದ ಜಪುತ್ರರೊಡನೆ ಅಯೋಧ್ಯೆಯನ್ನು ಪ್ರವೇಶಿಸಿದನು. ಅಗ ನಗರವಾಸಿಗಳು ಶ್ರೀ ರಾಮನಿಗೆ ನಾನಾವಿಧವಾದ ಉತ್ಸವಗಳಿಂದ ಸಂತೋಷವನ್ನುಂಟುಮಾಡಿದ ರು, ಶ್ರೀರಾಮನು ಶುಭಮುಹೂರ್ತದಲ್ಲಿ ವಧೂವರರೊಡನೆ ಗೃಹಪ್ರವೇಶ ಮಾಡಿ