ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ

೫೯ ೪ನಯ ಪ್ರಕರಣ, ಹದಿನಾರು ಸಾವಿರ ಸ್ತ್ರೀಯರ ಬಂಧ ವಿಮೋಚನೆ. ಒಂದಾನೊಂದು ಕಾಲದಲ್ಲಿ ಶ್ರೀ ರಾಮನು ಪರಿವಾರ ಸಮೇತನಾಗಿ ಬೇ ಚಿಗೋಸ್ಕರ ಅರಣ್ಯಕ್ಕೆ ತೆರಳಿದನು. ಆತನು ಅನೇಕ ಉಪವನಗಳನ್ನು ನೋ ತುತ್ತು, ಅಲ್ಲಲ್ಲಿ ಅನೇಕ ದುಷ್ಟ ಮೃಗಗಳನ್ನು ನಾಶಮಡಿದನು. ಆ ಕಾಲದಲ್ಲಿ ಹು, ಇಕೋ ಇಲ್ಲಿ ಹುಲಿಬಂತ? ಕರಡಿಯನ್ನು ನೋಡು! ಅಕ ಸಿಂಹವನ್ನು ನೋಡಿದೆಯಾ ಹಿಡಿ, ಹಡಿ, ಕಡಿ, ತಿವಿ, ಬಗಿ ಇತ್ಯಾದಿ ವಚನಗಳ ಧ್ವನಿಗ ಳಿಂದ ಆಕಾಶವು ಬ್ಯಾಸ್ತ್ರವಾಗಿತ್ತು. ಸೇನಾಪತಿಗಳಿಗೆ ಒಂದೊಂದುಸಲ ಬಹಳ ಕೋಪಬರುತ್ತಿತ್ತು. ಕೆಲವು ಕಾಮದೂತರು ಮೃಗಗಳನ್ನು ಪೊದೆಗಳಿಂದ ಹ ರಗೆ ಹೊರಡಿಸಲು ತಮ್ಮಟೆ, ಥಕ ಮೊದಲಾದ ವಾದ್ಯಗಳ ಧ್ವನಿಗೂಡುತ್ತ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದರು. ಈ ಶಬ್ದಗಳಿಗೆ ಬೆದರಿ ಒಂದು ಸಿಂಹವು ತನ್ನ ಗುಹೆಯಿಂದ ಹೊರಕ್ಕೆ ಬಂತು. ಆ ಸಿಂಹವು ಶ್ರೀ ರಾಮನನ್ನು ಕೆಂಪಾದ ಕಣ್ಣು ಗಳಿಂದ ನೋಡುತ್ತ ಆತನ ಎದುರಾಗಿ ಬಂತು. ಈ ಸಾಹಸಕೃತ್ಯವನ್ನು ನೋಡಿ ಶ್ರೀ ರಾಮನು ತನ್ನ ಬಾಣದಿಂದ ಆ ಸಿಂಹವನ್ನು ಹೊಡೆದನು. ಆ ಸಿಂಹವು ಎಷ್ಟು ಒಲಶಲಿಯಾದರೂ ಶ್ರೀ ಕಾಮನ ಬಾಣದ ಏಟನ್ನು ತಾಳಲಾರದೆ, ಹಾರಿ ಆತನ ಎದುರಿಗೆ ಬಿತ್ತು. ಆಕ್ಷಣದಲ್ಲಿ ಅದು ದಿವ್ಯರೂಪವನ್ನು ಧರಿಸಿ ಶ್ರೀ ರಾಮನಿಗೆ ನಮಸ್ಕರಿಸಿ ಅಮಚಂದ್ರಾ, ನೀನು ನನಗೆ ಬಹಳ ಉಪಕಾರ ಮಾಡಿದೆ. ನಾನು ಮೊದಲು ವಿದ್ಯಾಧರ ಕುಲದವನು. ನಾನು ಪೂರ್ವದಲ್ಲಿ ಅವಿವೇಕದಿಂದ ಒಬ್ಬ ಋಷಿಪತ್ನಿಯನ್ನು ಬಲಾತ್ಕಾರದಿಂದ ಉಪಭೋಗ ಮೂಡಿದನು. ಆ ಋಷಿಪತ್ನಿಯ ಬಹಳ ಕೋಪದಿಂದ ನೀನು ಕ್ರೂರವಾದ ಸಿಂಹನಾಗು ಎಂದು ಶಪಿಸಿದಳು. ನಾನು ಬಹಳ ಪ್ರಾರ್ಥನೆ ನೋಡಿಕೊಂಡಮೇಲೆ ಕನಿಕರದಿಂದ ಆ ಋಷಿಪತಿಯು “ನೀನು ರಾಮಬಾಣದಿಂದ ಮುಕ್ತನಾಗುವೆ ಎಂದು ವರವನ್ನಿತ್ತು ಪ್ರಯಾಣ ಡಿದಳು, ಆ ಪತಿವ್ರತೆಯ ಮತು ಈ ದಿವಸ ಸತ್ಯವಾಯಿತು” ಎಂದು ಹೇಳಿ ಶ್ರೀ ಕಮನ ಅಪ್ಪಣೆಯನ್ನು ಪಡೆದು ಆ ವಿದ್ಯಾಧರನು ಸ್ವರ್ಗಲೋಕಕ್ಕೆ ತೆರಳಿದನು. ಬಳಿಕ ಶ್ರೀರಾಮನು ಕುದುರೆಯ ಮೇಲೆ ಕುಳಿತು ಅಲ್ಲಲ್ಲಿ ಸಂಚರಿಸುತ್ತಿದ್ದನು.'