ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯಕಂಡ ಉತ್ತರಾರ್ಧ ' ನನ್ನ ದೂತರನ್ನು ಶ್ರೀ ರಾಮನು ಹೊಡೆಯಲು ಕಾರಣವೇನು' ಎಂದು ಕೂಡ ಗೊಂಡು, ಯಮನು (ಈಗಲೇ ಆಗರ್ವಿಷ್ಠನಾದ ಈತನಿಗೆ ಶಸನ ಮಾಡುವನು ಎಂದು ಹೇಳಿ ಅಲ್ಲಿಂದ ಹೊರಟನು. ಆತನು ಇಂದ್ರನಿಗೆ ತನ್ನ ವಿಪತ್ತನ್ನು ತಿಳುಹಿ ನೀನು ನನಗೆ ಸಹಾಯಮಾಡು' ಎಂದು ಕೇಳಿದನು, ಆಗ ದೇವೇಂದ್ರನು ಯಮನಿಗೆ ಆತನು ಸಾಕ್ಷಾತ್ ಪರಮೇಶ್ವರ ಸ್ವರೂಪಿ ಯುಗಿರುವನು. ನಮಗೆ ಆತನೊಡನೆ ಸ್ಪರ್ಧೆಮಾಡುವದು ಯೋಗ್ಯವಾದದ್ದಲ್ಲ, ನಾನು ಆತನಿಗೆ ಕಲ್ಪವೃಕ್ಷವನ್ನು ಸಮರ್ಪಿಸಿರುವೆನು ನೋಡು ಎಂದು ಬುದ್ದಿಮಾತು ಗಳನ್ನು ಹೇಳಿದನು. ಅಲ್ಲಿಂದ ಯಮನು ಅಗ್ನಿ ಲೋಕಕ್ಕೆ ಹೋದನು. ಅಲ್ಲ ಅತನಿಗೆ ಸಹಾಯವು ಶರರುಲಿಲ್ಲ. ಬಳಿಕ ಯಮನು ಇತರ ದಿಕ್ಕಾಲಕರು, ನವ ಗ್ರಹಗಳು, ಇತ್ಯದಿ ಸಮಸ್ತ ದೇವತೆಗಳನ್ನೂ ತನಗೆ ಸಹಾಯಮಾಡುವಂತೆ ಕೇಳಿ ಕಂಡನು, ಕೊನೆಗೆ ಆಗುವದಿಲ್ಲ' ಎಂಬುದೊಂದೇ ಉತ್ತರದಾಯಿತು. ಅನಂತರ ಯಮನು ತನ್ನ ಸೇನೆಯೊಡನೆ ಬಂದು ಅಯೋಧ್ಯೆಯ ಕೋಟೆಯನ್ನು ಮುತ್ತಿ ದನು. ಈ ವರ್ತಮನವನ್ನು ಕೇಳಿ ಶ್ರೀರಾಮನು ಯಮನೊಡನೆ ಯುದ್ಧ ಮಾಡಲು ಲವನನ್ನು ಕಳುಹಿಸಿದನು. ಆ ವಾಲ್ಮೀಕಿಶಿಷ್ಯನಾದ ಲವನು ಯದುನೊಡನೆ ಯುದ್ಧ ಮಾಡಲಾರಂಭಿಸಿದನು. ಆ ಯುದ್ಧವನ್ನು ನೋಡಲು ದೇವತೆಗಳು ವಿಮಾನಗಳಲಿ ಕುಳಿತು ಆಕಾಶಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದರು. ಲವನು ತನ್ನ ಶಸ್ತ್ರಗಳಿಂದ ಯಮನ ಮಹಿಷವನ್ನು ಮೂರ್ಛಗೊಳಿಸಿದನು. ಯಮನು ಲವನಮೇಲೆ ಅತಿ ಕೋಪದಿಂದ ಯಮದಂಡವನ್ನು ಪ್ರಯೋಗಿಸಿದನು, ಲವನು ಆ ಉಗ್ರವಾದ ದಂಡವನ್ನು ನಾಶಮಾಡಲು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಅದನ್ನು ನೋಡಿ ದೊಡನೆ ದಂಡವು ಹಿಂತಿರುಗಿತು. ಯಮನು ಗಡಗಡನೆ ನಡುಗಲಾರಂಭಿಸಿದನು. ಮತ್ತು ಹೆದರಿ ಓಡುತ್ತಿರುವ ಯಮನನ್ನು ಬ್ರಹ್ಮಾಸ್ತ್ರವು ಹಿಂಬಾಲಿಸಿತು. ಈ ಸಂ ಕಳವನ್ನು ನೋಡಿ ಸೂರ್ಯನು ಲವನಬಳಿಗೆ ಬಂದು, ಎಲೈ ಲವನೆ, ಬ್ರಹತ್ರ ವನ್ನು ಉಪಸಂಹರಿಸು, ನೀನು ಹಾಗೆ ನನ್ನ ವಂಶದವನೋ ಹಾಗೆ ಅವನ ನನ್ನ ಮಗನಲ್ಲವೆ? ಒಬ್ಬನು ಮೂರ್ಖನಾದನೆಂದು ಮತ್ತೊಬ್ಬನೂ ಹಾಗೆಯೇ ಅಗಬೇಕೇ ಶತ್ರುವು ರಣದಲ್ಲಿ ಹಿಂತಿರುಗಿದನೆಂದರೆ ಅವನನ್ನು ಶೂರನಾದವನು ಕಾಪಾಡಬೇಕು. ಈ ರೀತಿ ಭೋಧನೆಮಾಡಲು, ಲವನು ಬ್ರಹ್ಮಾಸ್ತ್ರವನ್ನು ಉಪ ಸಂಹರಿಸಿದನು. ಆಗ ದೇವತೆಗಳು ಲವನಮೇಲೆ ಪುಷ್ಪಗಳನ್ನು ಎರಚಿದರು. ಬಿಯಡಿಯಕಾರಮಾಡಿದರು, ಜರಾಜೇರಿಗಳು ಭೋರ್ಗರೆದವು. ಜಯಶಾಲಿ