ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನೋಹರಕಾಂಡಿ, ಒಂದು ದಿವಸ ಕೈಕೇಯಿಯು ಶ್ರೀರಾಮನ ಬಳಿಗೆ ಬಂದು 'ರಾಮ, ಪೂರ್ವ ದ ನನ್ನ ಅಪರಾಧವನ್ನು ಕ್ಷಮಿಸು ನನಗೆ ಸದುಪದೇಶ ಮಾಡು' ಎಂದು ಕೇಳಿ ದಳು ಆಗ ಶ್ರೀರಾಮ ಲಕ್ಷ್ಮಣ, ಈ ನಮ್ಮ ತಾಯಿಯನ್ನು ನಾಳೆ ಬೆಳಿಗ್ಗೆ ಶರಖ ನದಿಗೆ ಕರಕೊಂಡು ಹೋಗು ಅಲ್ಲಿ ಒಂದು ಕುರಿಯ. ಈಕೆಗೆ ಉಪದೇಶ ಮಾಡು ವದು ಎಂದನು ಈ ಮಾತುಗಳನ್ನು ಕೇಳಿ ಸಮೀಪದಲ್ಲಿದ್ದ ಲಕ್ಷಣನು ಹಾಗೇ ಹೇ ಅಗಲೆಂದು ಒಡಂಬಟ್ಟೆ , ಮರುದಿವಸ ಲಕ್ಷಣನು ಕೈಕೇಯಿಯನ್ನು ಶರ ಯೂ ತೀರಕ್ಕೆ ಕರಕೊಂಡು ಹೋವನು, ಮತ್ತು ಸಸಿಯರನ್ನು ದೂರ ಜಾಗಿರುವಂತೆ ಆಜ್ಞಾಪಿಸಿ, ಲಕ್ಷ್ಮಣನು ಕುರಿಯು ನಿಂತಿರುವ ಸ್ಥಳಕ್ಕೆ ಕೈಕೇಯಿ ಯನ್ನು ಕರೆದುಕೊಂಡು ಹೋದನು, ಆಕೆಯು ಕುರಿಯನ್ನು ಬಹಳ ವಿಶ್ವಾಸದಿಂದ ನೋಡಲಾರಂಭಿಸಿದಳುಅದು ಈ ರಾಜಪತ್ನಿಗೆ ಏನನ್ನೂ ಉಪದೇಶಿಸದೆ ಮೇ, ಮೇ ಎನ್ನಲಾರಂಭಿಸಿತು. ಎಷ್ಟು ಹೊತ್ತು ಇಲ್ಲಿ ನಿಂತರೂ ಈ ಕುರಿಯು ನನಗೆ ಏನನ್ನೂ ಉಪದೇಶಿಸಲೊಲ್ಲದು. ಶ್ರೀ ರಾಮನು ನನಗೆ ಮೋಸಮಾಡಿರಬಹುದು ಎಂದು ಕೈಕೇಯಿಯು ಯೋಚಿಸಿದಳು ಮತ್ತು ಕುರಿಯ ಮೇ, ಮೇ, ಶಬ್ದವನ್ನು ಕೇಳಿ ಇದು ಹೀಗೆ ಕೂಗಲು ಕಾರಣವೇನು?” ಎಂದು ಕೈಕೇಯಿಯು ಒಂದೇ ಮನ ಸ್ಸಿನಿಂದಯೋಚಿಸುತ್ತಿರಲು ಶ್ರೀರಂಮನ ಕೃಪೆಯಿಂದ ಅದರ ಆಶಯವು ಗೊತ್ತಾಯಿ ತು ಬಳಿಕ ಲಕ್ಷಣನೊಡನೆ ಕೈಕೇಯಿಯು ಶ್ರೀರಾಮನ ಮಂದಿರಕ್ಕೆ ಒಂದಳು. ಆಗ ಶ್ರೀ ಕವನು ಸೀತೆಯೊಡನೆ ವಿನೋದವಾದ ಮಾತುಗಳನ್ನಾಡುತ್ತ ಕುಳಿತಿದ್ದನು. ಕೈಕೇಯಿಯ ಒಳಗೆ ಬಂದು ಸೀತುಂಮರ ಪಾದಗಳಿಗೆ ನಮಸ್ಕರಿಸಿ 6ರಿಂದ ಚಂದ್ರಾ, ನಿನ್ನ ಕೃಪೆಯಿಂದ ನನ್ನ ಅಜ್ಞಾನವು ದೂರವಾಯಿತು. ಆ ಕುರಿಯ ಮುಖದಿಂದ ಬಂದ ನಿನ್ನ ಉಪದೇಶವು ಲೋಕೋಪಕಾರಕವಾದದ್ದು. ಅದು ನನ್ನನ್ನು ನೋಡಿ ಮೇ, ಮೇ, ಎನ್ನಲಾರಂಭಿಸಿತು. ಮೇ. ಅಂದರೆ ನಾನು, ನನ್ನದು, ಇದ ರಿಂದಲೇ ಲೋಕಕ್ಕೆ ಸಮಸ್ತ ಅನರ್ಥಗಳೂ ಪ್ರಾಪ್ತವಾಗುವವು. ನನ್ನ ರಾಜ್ಯ, ನನ ಮಗ, ನನ್ನ ಸಖಿಯಾದ ಮಂಥರ, ಎಂಬ ಅಭಿಮಾನದಿಂದಲೇ ನನಗೆ ಚಿನ ಪಾದವು ಪ್ರಾಪ್ತವಾಯಿತು. ಈ ಅಭಿಮಾನವು ನಿರರ್ಥಕವಾದದ್ದು, ಕನು ಚಂದ್ರಾ, ನಾನು, ನನ್ನದು ಎನ್ನುವದಕ್ಕಿಂತಲೂ ಅಕೃತ್ಯಗಳು ಯಾವವೂ ಅಲ್ಲ, ಅಂದರೆ ಯಾವ ವಿಷಯದಲ್ಲ ಅಭಿಮಾನಮಾಡಬಾರದು. ನಾನು ಈ ದಿವಸ ದಿಂದ ಇಂಥ ಮನೋವೃತ್ತಿಯನ್ನು ಬಿಡುವನು. ಇನ್ನು ಮೇಲೆ ನನಗೆ ಯಾವ ದುಃಖಗಳೂ ಇಲ್ಲ. ನನ್ನ ಈ ದೇಹವು ಇದ್ದರೂ ಸರಿಯೇ, ಇಲ್ಲವಾದರೂ ಸರಿ