೨೪ ಶ್ರೀಮದಾನಂದ ರಾಮಾಯಣ, ನೈವೇದ್ಯ, ತಾಂಬೂಲ, ನಮಸ್ಕಾರ, ದಕ್ಷಿಣೆ, ಪ್ರದಕ್ಷಣೆ ಇತ್ಯಾದಿಗಳಿಂದ ದ್ರವ್ಯ ಲೋಭಮಾಡದೆ ಪರಮಭಕ್ತಿಯಿಂದ ಪೂಜಿಸಬೇಕು. ಇದರಿಂದ ಉಪಾಸಕನಿಗೆ ಏನು ಇಷ್ಟಾರ್ಥಗಳೂ ಸಿದ್ಧವಾಗುವವು. (ಈ ರಾಮೋಪಾಸನೆಯ ಸ್ಥಳ, ಕಾಲ, ದ್ರವ್ಯ, ಆಸನ, ಪೂಜಾ, ಇತ್ಯಾದಿ ವಿಷಯಗಳಲ್ಲಿ ಸಂಸ್ಕೃತ ಅನಂದರು ಮಾಯಣವೂ, ಇತರ ಸ್ಮೃತಿಗಳೂ ಬಹುವಿಧವಾಗಿ ಹೇಳುತ್ತಿರುವವು, ಅವು ಕ್ಯವಾದ ವಿಷಯಗಳನ್ನು ಅಲ್ಲಿಂದ ತಿಳಿದುಕೊಳ್ಳುವದು ಅನುಕೂಲವು.) - ಎಲೈ ಶಿಷ್ಯನೇ, ಒಂಬತ್ತು ವಿಧವಾದ ಪುಷ್ಪಗಳಿಂದ ಶ್ರೀ ರಾಮನಿಗೆ ಪೂಜೆ ಮಾಡಿದ ರಾಮಭಕ್ತರ ಒಂದು ಸಣ್ಣ ಇತಿಹಾಸವನ್ನು ಹೇಳುವೆನು ಕೇಳು ಈ ರ್ವದಲ್ಲಿ ರಾಮನಾಥಪುರದಲ್ಲಿ ವಾಸಮಾಡಿದ ಒಬ್ಬ ಬ್ರಾಹ್ಮಣನಿಗೆ ಒಂಬತ್ತು ಚಿನ ಮಕ್ಕಳಿದ್ದರು. ಒಂದು ವರ್ಷ ಆ ಬ್ರಾಹ್ಮಣಪುತ್ರರು ಶ್ರೀರಾಮನನ್ನು ನೋಡ ಬೇಕಂದು ಅಯೋಧ್ಯೆಗೆ ತೆರಳಿದರು, ಅಗ ಚೈತ್ರರೂಪವಾದ್ದರಿಂದ ಶ್ರೀ ರಾಮನ ಸನ್ನಿಧಿಯಲ್ಲಿ ಜನಗಳ ದಟಿಯು ಬಹಳವಾಗಿತ್ತು, ಅ ದ್ವಿ ಚಿಪುತ್ರರಿಗೆ ಕದನ ದನಗಲೇ ಇಲ್ಲ. ಅವರು ಶ್ರೀರಾಮನ ದರ್ಶನ ಮಾಡಿಕೊಳ್ಳಲು ಏನು ಪ್ರಯತ್ನ ಮಾಡೋಣ ಎಂದು ಪರಸ್ಪರ ಯೋಚಸಿದಾಡಲಾರಂಭಿಸಿದರು. ಅವ ರಲ್ಲಿ ಹಿರಿಯನಾದ ಚಂದ್ರನು ರಾಮಭಕ್ತನಾದುದರಿಂದ ತಪಶ್ಚರ್ಯ ದಿಂದ ಶ್ರೀ wಯನ ದರ್ಶನವಾಗುವದೆಂದು ನಿಶ್ಚಯಮಾಡಿ, ತಮ್ಮಂದಿರೊಡನೆ ಸರಯೂ ತೀರ ದಲ್ಲಿ ತಪಸ್ಸು ಮಾಡಲು ಕುಳಿತನು. ಹೀಗೆಯೇ ಒಂಬತ್ತು ದಿವಸಗಳವರೆಗೆ ಏಕಾಗ್ರ ಮನಸ್ಸಿನಿಂದ ಅವರು ತಪಸ್ಸು ಮಾಡಿದರು. ಅಷ್ಟರಲ್ಲಿ ಶ್ರೀ ರಾಮನು ಅವರ ಭಕ್ತಿಗೆ ಮೆಚ್ಚಿ, ಅವರಿದ್ದಲ್ಲಿಗೇ ಬಂದು ಪ್ರತ್ಯೇಕವಾಗಿ ದರ್ಶನ ಕೊಟ್ಟನು. ಸೀಕ್ರಿ, ಲಕ್ಷ್ಮಣ, ಭರತ, ಶತ್ರುಘ್ನರೊಡನೆ ಪ್ರಕಾಶಮಾನನಾದ ಶ್ರೀರಾಮನನ್ನು ನೋಡಿ ಆ ಬ್ರಾಹ್ಮಣರತ್ರರಿಗೆ ಪರಮಾನಂದವಾಯಿತು. ಜನರೆಲ್ಲ ಆ ಚಮತ್ಕರ ವನ್ನು ನೋಡಿ ಆಶ್ಚರ್ಯಪಟ್ಟರು, ಶ್ರೀರಾಮನು ಅದ್ದಿ ಜಾತ್ರರಿಗೆ ಶಾಶ್ವತವಾದ ದರಗಳನ್ನಿತ್ತು, ಅಯೋಧ್ಯೆಗೆ ತರಳಿದನು, ಶ್ರೀರಾಮನು ಆ ಬ್ರಾಹ್ಮಣ ಪುತ್ರ ರಿಗೆ ಒಂಬತ್ತು ರೂಪಗಳನ್ನು ಧರಿಸಿ ದರ್ಶನಕೊಟ್ಟಿದ್ದರಿಂದ ಆತನಿಗೆ ಒಂಬತ್ತು ವಿಧವಾದ ಪುಷ್ಪಗಳನ್ನು ಸಮರ್ಪಿಸಬೇಕು. ಸಮಸ್ತ ಬ್ರಹ್ಮಾಂಡಗಳನ್ನೂ ತನ್ನ ಉದರದಲ್ಲಿ ಧರಿಸಿದ ಶ್ರೀ ರಾಮನ ಉಪಾಸನ ಮಾಡುವದು ರಾಮಭಕ್ತರಿಂದ ಹೊರತಾಗಿ ಮತ್ತಾರಿಂದಲೂ ಸಾಧ್ಯವಿಲ್ಲ, ಆ ರಾಮಭಕ್ತರು ಜಗತ್ತನ್ನೆಲ್ಲ ಕಾಮ ರೂಪವೆಂದೇ ತಿಳಿಯುವರು ಅವರ ಮಹಿಮೆಯನ್ನು ಎಂದು ವರ್ಣಿಸಬೇಕು?
ಪುಟ:ಶ್ರೀ ಮದಾನಂದ ರಾಮಾಯಣ.djvu/೨೯೦
ಗೋಚರ