ಮನೋಹರಕಾಂಡ. ಹಾಕಿಕೊಂಡು, ಅದನ್ನು ತನ್ನ ಹೆಗಲಿಗೆ ಕಟ್ಟಿಕೊಂಡು, ವನದಲ್ಲಿ ಸಂಚಾರ ಮಾ. ಡಲು ಹೊರಡುತ್ತಿದ್ದನು. ಅಲ್ಲಿ ನಾನಾವಿಧವಾದ ಚಮತ್ಕಾರಗಳನ್ನು ನೋಡು ವಂತೆ ಆ ಬ್ರಾಹ್ಮಣನು ಶ್ರೀ ರಾಮನಿಗೆ ಪ್ರಾರ್ಥನೆ ಮಾಡುವನು. ದಾರಿಯಲ್ಲಿ ಜನಗಳ ಗಲಾಟ ಬಹಳವಾಗಿದ್ದರೆ ಆ ಬ್ರಾಹ್ಮಣನು ತನ್ನ ಕೈಯಲ್ಲಿ ರುವ ಬೆತ್ತ ದಿಂದ ಅವರನ್ನು ಹೊಡೆಯುವನ್ನು ಜನರು ಈ ಮನುಷ್ಯನು ಹುಚ್ಚನೆಂತಲೂ ತಮಟೆಗಾರನೆಂತಲೂ ತಿಳಿದು ಅವನ ಮೇಲೆ ಕೋಪಮಾಡುತ್ತಿರಲಿಲ್ಲ. ಆತನು ತನ್ನ ಒಂದು ಹುಲ್ಲಿನ ಗುಡಿಸಿಲಿಗೆ ಬಂದು, ಒಂದು ಕಟ್ಟಿಗೆಯ ಮಂಚದ ಮೇಲೆ ಶ್ರೀ ರಾಮ-ಸೀತಾ ಇವರೇ ಮೊದಲಾದ ವಿಗ್ರಹಗಳನ್ನು ಮಲಗಿಸಿ, ತಾನು ಪೇಟೆಗೆ ತರಳುವನು. ಅಲ್ಲಿ ಆ ಬ್ರಾಹ್ಮಣನು ರಾಮಭಕ್ತನೆಂದು ತಿಳಿದು ಯಾರೂ ಭಿಕ್ ಹಾಕದೆ ಇರುತ್ತಿದ್ದಿಲ್ಲ. ಭಿಕ್ಷವನ್ನು ತೆಗೆದುಕೊಂಡು ಮನೆಗೆ ಬಂದು ಆ ಬಾಹ್ಮಣನು ತನೇ ಪಾಕಮಾಡುವನು, ಮತ್ತು ಯೋಗ್ಯರಾದ ಬ್ರಾಹ್ಮಣರನ್ನು ಜೊತೆಗೆ ಕರೆದುಕೊಂಡು, ಆದಿಜನು ಪರಮಾನಂದದಿಂದ ಭೋಜನ ಮಾಡುತ್ತಿದ್ದನು, ಸಾರಾಂಶ, ಈ ರೀತಿ ಆ ಬ್ರಾಹ್ಮಣನು ಪ್ರತಿದಿವಸವೂ ಕಾಮತೃತವನ್ನು ತಪ್ಪದೆ ನಡೆ ಸುತ್ತಿದ್ದನು. ಹೀಗೆ ಒಂಭತ್ತು ವರ್ಷಗಳು ಕಳೆದವ, ಒಂದಾನೊಂದು ದಿವಸ ಆ ಬ್ರಾಹ್ಮಣನ ಗ್ರಾಮಕ್ಕೆ ಒಬ್ಬ ಸೇನಾಸಮೇತನಾದ ರಾಜನು ಬಂದನು. ಈ ಬ್ರಾಹ್ಮಣನು ತನ್ನ ಗುಡಿಸಿಲಿನಲ್ಲಿ ಮಲಗಿ ನಿದ್ರೆ ಮಾಡುತ್ತಿದ್ದನು. ಆಗ ಒಂದು ದೊಡ್ಡ ಮಳಿ ಬಂತು. ಆ ಜನ ಸೇವಕರು ಮಳೆಯ ಹೊಡೆತವನ್ನು ತಡೆಯ ಆರದೆ, ಮನೆಗಳನ್ನು ಪ್ರವೇಶಿಸಿದರು. ಹತ್ತು ಜನ ಸೇವಕರು ಈ ಬ್ರಾಹ್ಮಣನ ಗುಡಿಸಿಲಿನ ಬಳಿಗೆ ಬಂದರು. ಅವರಿಗೆ ಈ ಬ್ರಾಹ್ಮಣನು ಬಾಗಿಲ ಎದುರಿಗೆ ಗುಲ ಗುವಂತ ತಿಳಿಯಿತು. ಅವರ ಜೊತೆಯಲ್ಲಿ ಕುದುರೆ ಶಸ್ತ್ರ ಇವುಗಳೆಲ್ಲ ಇದ್ದವು. ಅವರು ಆ ಬ್ರಾಹ್ಮಣನನ್ನು ಕೂಗಿ ಎಬ್ಬಿಸಿ, ಈ ಬ್ರಾಹ್ಮಣ, ಈಗ ಬಹಳ ಮಳೆ ಬರುತ್ತಲಿದೆ. ನಾವು ಮಳೆ ನಿಲ್ಲುವವರೆಗೂ ಈ ಕುದುರೆಗಳೊಡನೆ ನಿನ್ನ ರೂಪ ಡಿಯಲ್ಲಿ ವಾಸವಾಡುವೆವು” ಎಂದರು. ಈ ಮಾತುಗಳನ್ನು ಕೇಳಿ ಬ್ರಾಹ್ಮಣನು cತ ಗೃಹದಲ್ಲಿ ರಾಮ, ಸೀತೆ, ಲಕ್ಷಣ ಇವರು ಮಲಗಿ ನಿದ್ರೆ ಮಾಡುತ್ತಿರುವರು ಈಗ ಅವರನ್ನು ನಾನು ಹಾಗೆ ಎಬ್ಬಿಸಲಿ? ಸ್ವಲ್ಪ ತಡೆಯಿರಿ, ಅವರು ಎದ್ದ ಕೂಡಲೆ ನಿಮಗೆ ಈ ಮನೆಯನ್ನು ಬೇಕಾದರೂ ಕೊಡುವನು ಎಂದನು, ಮಾತುಗಳನ್ನು ಕೇಳಿ ಸೇವಕರು ಆ ಬ್ರಾಹ್ಮಣನನ್ನು ಹೊಡೆದರು. ಆಗ ಬ್ರಹ್ಮ ಇನ್ನು, “ಮಹಾಸ್ಕವಿ, ಸ್ವಲ್ಪ ನಿಧಾನಿಸಿರಿ, ಇಕೋ ಈಗಲೇ ಒಳಕ್ಕೆ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೯೩
ಗೋಚರ