ಪುಟ:ಶ್ರೀ ಮದಾನಂದ ರಾಮಾಯಣ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮದಾನಂದ ರಾವಣ ಕೋಪ ಬಂತು. ಆಗ ಭೂದೇವಿಯು ಗದಗದನ ನಡುಗಲಾರಂಭಿಸಿದಳು. ಪರ ಶುರಾಮನಿಗೆ ಕೋಪಬಂದಿದೆಯೆಂದು ತಿಳಿದು, ದಶರಥಿಯು ಆತನ ಹಸ್ತದಲ್ಲಿರುವ ಧನುಸ್ಸನ್ನು ಶೀಘ್ರವಾಗಿ ತನ್ನ ಕೈಗೆ ಸೆಳೆದುಕೊಂಡನು. ಆಗ ಆ ಧನುಸ್ಸಿಗೆ ಮೌರ್ನಿಯನ್ನು ಕಟ್ಟಿ, ಶ್ರೀ ರಾಮನು ಬಾಣವನ್ನು ಜೋಡಿಸಿದನು, ಬಳಿಕ ರಘು ನಾಥನು-ಎಲೆ ವಿಪ್ರವರ್ಯನೇ, ಈ ಬಾಣವನ್ನು ಎಲ್ಲಿಗೆ ಬಿಡಲಿ” ಹೀಗೆಂದ್ರ ಕೇಳಲು, ಆ ಪ್ರಸಂಗವನ್ನು ನೋಡಿದೊಡನೆ ಪರಶರಾಮನಿಗೆ ಆಶ್ಚರ್ಯವಾಯಿ ತು, ಆತನ ಮುಖವು ಬೆವರಿ ನೀರಾಯಿತು, ದೇಹವು ನಡುಗಲಾರಂಭಿಸಿತು. ಬಳಿಕ ಪರಶುರಾಮನು ಶ್ರೀ ರಾಮನ ಎದುರಾಗಿ ಕೈ ಜೋಡಿಸಿ ನಿಂತು- ಭವ ಕೃಲನೇ, ಕೃಪಾನಿಧಿಯೇ, ಪತಿತಪಾವನನೇ, ತ್ರೈಲೋಕ್ಯನಾಥನೇ, ನಾರಾ ಯಡಾ, ಅವಿವೇಕಿಯಾದ ನನ್ನ ಅಪರಾಧವನ್ನು ಕ್ಷಮಿಸು, ನಾನು ನಿನ್ನ ಅಂಶ ವಾಗಿರುವನು. ಇದುವರೆಗೂ ನಾನು ಮಾಡಿದ ಮಹಾಕಾರ್ಯಗಳು ನಿನ್ನ ಕೃಪೆ ಯಿಂದಲೇ ಕೈಗೂಡಿದವ, ನಿನ್ನ ಕೃಪೆಯಿಂದ ಇದುವರೆಗ ನನಗೆ ಯಾವ ಸ್ಥಳದಲ್ಲ೧ ಅಪಜಯವಾಗಲಿಲ್ಲ. ನಿನ್ನ ಅಪ್ಪಣೆಯಂತೆ ಮ ಕತ್ರಿಯಾಧವ ರನ್ನೂ ನಾಶಗೊಳಿಸಿ, ಭೂಭಾರವನ್ನು ಕಡಿ ' ಇದರಿಂದ ನನಗೆ ಬಹಳ ಪಾಪವು ಸಂಘಟಿಸಿರುವದು , ಮತ್ತು . ' ಚಗಳನ್ನು ಹೊಂದ ಬೇಕೆಂದು ನಾನು ಬಹಳ ಸುಕೃತವನ್ನು ಸಂಪಾದಿಸಿರುವೆನು, ಈ ನಿನ್ನ ಬಾಣದಿಂದ ಮುಂದೆ ನನ್ನನ್ನು ಹೊಂದಬೇಕೆಂದು ಕಾದಿರುವ ಪುಣ್ಯಪಾಪಗಳಿಂ ದುಂಟಾದ ಲೋಕಗಳನ್ನು ನಾಶಮಾಡಿ, ನನ್ನನ್ನು ನಿನ್ನ ಚರಣಗಳಲ್ಲಿ ಸೇರಿಸಿಕೊ.” ಎಂದು ಸ್ತೋತ್ರಮಾಡಿ, ಶ್ರೀ ರಾಮನ ಚರಣಗಳಲ್ಲಿ ಮಸ್ತಕವನ್ನಿಟ್ಟು ನಮ್ಮ ಸ್ಮರಿಸಿದರು. ಬಳಿಕ ಶ್ರೀ ರಾಮನು ಆತನಿಗೆ ಪ್ರಸನ್ನನಾಗಿ ಆತನ ಕೋರಿಕೆಯಂ ತ ಸಾಯುಜ್ಯ ಪದವಿಯನ್ನಿತ್ತು ಕಾಪಾಡಿದನು. ಆಗ ಪರಶುರಾಮನು ಶ್ರೀ ರಣ ಮನ ಅಪ್ಪಣೆಯನ್ನು ಪಡೆದು, ಹಿಮಕ್ಷರ್ವತದಲ್ಲಿ ಯಾವವವೂ ತಪತ್ಮರಣ ಮಾಡಲು ತೆರಳಿದನು. ಪರುಶುರಾಮನು ಹಿಂದಕ್ಕೆ ಹೋದದ್ದನ್ನು ನೋಡಿ, ದಶರಥನಿಗೆ ಪರಮ ಹ ರ್ಷವಾಯಿತು. ಆತನು-ಈ ದಿವಸ ನವರಮನಿಗನುನರ್ಜನ ವಾಯಿತೆಂದು ಮತ್ತೆ ಮತ್ತೆ ಹೇಳುತ್ತಿದ್ದನು. ಆಗ ಸಮೀಪಕ್ಕೆ ಬಂದ ರಾಮನನ್ನು ಗಾಢಾ ಲಿಂಗನ ಮಾಡಿಕೊಂಡು, ದಶರಥನು ಆನಂದಾಶ್ರುಗಳನ್ನು ಸುರಿಸಿದನು. ಯಾವ ರಾವಣನಿಂದ ಸಮಸ್ತ ದೇವತೆಗಳೂ ನಿರ್ವೀಯರಾದರೋ, ಅಂಥ ರಾವಣನ