ಪುಟ:ಶ್ರೀ ಮದಾನಂದ ರಾಮಾಯಣ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕಾಂಡ ಆಣೆಯನ್ನು ಹೊಂದುವದು ಎಂದು ಹೇಳಿದರು. ಅಷ್ಟರಲ್ಲಿ ಎದುರಿಗ ಪರುಶುರಾ ಮನು ಬರುತ್ತಿದ್ದನು. ಅವನ ಮೇಘಶ್ಯಾಮವಾದ ಶರೀರ, ದೀರ್ಘವಾದ ಭುಜ ಗಳು, ಕಂಪಾಡ ಕಣ್ಣುಗಳು, ಜೀರ್ಣವಾದ ಆಟಗಳು ಇವುಗಳನ್ನು ಕಂಡಡ ಸ ದಶರಥನಿಗೆ ಎಚ್ಯಂಕೆತಪ್ಪಿತು. ಅದೇ ಕಾಲದಲ್ಲಿ ತನ್ನ ಬಳಿಗೆ ಬರುತ್ತಿರುವ ಪರಶುರಾಮನನ್ನು ನೋಡಿ, ದಶರಥನು ದೀರ್ಘದಂಡದಂತ ನಮಸ್ಕಾರ ಮೂಡಿ ದನು, ಮತ್ತು ಅಪ್ಪF-ಪಾದ್ಯಾದಿಗಳಿಂದ ಆತನನ್ನು ಪೂಜಿಸಿ, ತನ್ನ ಸುತ್ತ ಪ್ರಾಣದಾನವನ್ನು ಕೊಡೆಂದು ಬೇಡಿಕೊಂಡನು. ಪರಶುರಾಮನು ದಶರಥನ ಆ ಮಾತುಗಳನ್ನು ಕೇಳಲೇ ಇಲ್ಲ. ಆ ಖಷಿಸು ತ್ರನು ವೇಗದಿಂದ ರಾಮನ ಎದುರಿಗೆ ಬಂದು ನಿಂತನು. ಬಳಿಕ ಆತನು ರಾಮನ ನ್ನು ಕುರಿತು, ಎಲೋ ಕ್ಷತ್ರಿಯಾಧಮನೇ, ಸೀನು ರಾಮನೆಂಬ ನನ್ನ ಹೆಸರನ್ನು ಧರಿಸಿ, ಭೂಮಿಯಲ್ಲಿ ಸಂಚಾರ ಮಾಡುತ್ತಿರುವೆಯ? ಬಹು ಸಂತೋಷ ನನ್ನೊಡನೆ ಈಗ ಯುದ್ಧ ಮಾಡಲು ಸಿದ್ದನಾಗು. ನೀನು ಕ್ಷತ್ರಿಯರ ವಂತದಲ್ಲೇ ಹುಟ್ಟಿದವನಾದರೆ, ನನ್ನ ಈ ಮಾತಿಗೆ ಎಂದಿಗೂ ವಿಮುಖನಾಗಲಾರ ಎಲೋ ಮುರ್ಖನೇ, ಹಳೇದಾದ ಶಿವಧನುಸ್ಸನ್ನು ಮುರಿದನೆಂದು ವೃಥಾಗರ್ವಪಡಬೇಡ. ಇಗೋ ಈ ನನ್ನ ವೈಷ್ಣವ ಧನುಸ್ಸಿಗೆ ಗುಣರೋಪಣ ಮಾಡು, ಆಗ ನಿನ್ನನ್ನು ನಾನು ಯೋಗ್ಯನಾದ ಕತ್ರಿಯನೆಂದು ಕರೆದೇನು"? ಹೀಗಂದು ವೀರನಾದ ಶ್ರೀ ರಾಮನನ್ನು ಮುಂದಕ್ಕೆ ಬಿಡದೆ ರಾರಿಯಲ್ಲೇ ತಡೆದು, ಎಲ್ಲಾ ರಾಮಾ, ನೀನು ನನ್ನ ವಚನದಂತ ಈ ಧನುಸ್ಸನ್ನು ಬಗ್ಗಿಸದಿದ್ದರೆ, ಇಲ್ಲೇ ನಿನ್ನ ಸಮ ಪರಿವಾರವನ್ನೂ ನಾಶ ಮಾಡುವನು, ಎಂದು ಗರ್ಜಿಸಿದನು. ಇಂಥ ಕತರವಾದ ವಚನಗಳ ನ್ನು ಕೇಳಿ, ಶ್ರೀ ರಾಮನು, “ಸ್ವಾಮಿ, ನಾನು ಸೂರ್ಯವಂಶದಲ್ಲಿಯ ಒಬ್ಬನು, ತಾವು ಪರಮಗುಣಾಲಿಗಳು ತಪಸ್ಸಿಗಳು, ಹೀಗಿರಲು, ನನಗೂ ತನಗೂ ಹ್ಯಾಗೆ ನಾಮ ನಾದೀತು? ಅದಲ್ಲದೆ, ಗೋವುಗಳು, ಬ್ರಾಹ್ಮಣರು, ದೇವತೆ ಗಳು, ಸ್ತ್ರೀಯರು, ಮಕ್ಕಳು ಇವರ ವಿಷಯಗಳಲ್ಲಿ ನಮ್ಮ ವಂಶದವರು ಎಂ ದಿಗೂ ಬಾಣವನ್ನು ಕೈಯಲ್ಲಿ ಹಿಡಿಯುವವರಲ್ಲ. ನಾನು ನನ್ನ ಸಮಸ್ತ ಪ್ರಾಣ ಗಳನ್ನೂ ತಮ್ಮ ಚರಣಗಳಲ್ಲಿ ಒಪ್ಪಿಸಿರುವೆನು, ತಮಗೆ ಇಷ್ಟವಿದ್ದರೆ ಸಂತೋಷ ದಿಂದ ಹೊಡೆಯಬಹುದು. ಆದರೆ ನಾನು ಬ್ರಾಹ್ಮಣನನ್ನು ನಾಶಮಾಡುವದಕ್ಕಾಗಿ ಎಂದಿಗೂ ಶಸ್ತ್ರವನ್ನು ಧರಿಸಲಾರೆನು.” ಎಂದು ಪ್ರಾರ್ಥಿಸಿದನು ಶ್ರೀ ರಾಮನ ಈ ಮತ ಗಳನ್ನು ಕೇಳಿ, ಪರಶುರಾಮನಿಗೆ ಪ್ರತಂಡವಾದ