ಪುಟ:ಶ್ರೀ ಮದಾನಂದ ರಾಮಾಯಣ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದರಾಮಾಯಣ, ಬದುಕುವವಿಲ್ಲವೆಂದು ತಿಳಿದರು, ಅನಂತರ ಶ್ರೀರಾಮನು ಲಕ್ಷಣನನ್ನು ಕುರಿತು-ಎಲೈ ಸಖಿಯೋ, ಇಲ್ಲಿಗೆ ಸ್ವಲ್ಪ ದೂರದಲ್ಲಿ ಮುದಲ ಮಹರ್ಷಿಗಳ ಆಶ್ರಮ ಇರುವದು. ಅಲ್ಲಿಗೆ ಹೋಗಿ ಸಂಜೀವಿನಿಯೇ ಮೊದಲಾದ ಮಹಷಧಗಳನ್ನು ತಗೆದುಕೊಂಡು ಬಾ, ಅದರಿಂದ ನನ್ನ ತಮ್ಮನು ಎಚ್ಚರಗೊಳ್ಳುವರು ಎಂದು ಹೇಳಿದನು, ಲಕ್ಷಣ ನು ಒಡನೇ ರಥವನ್ನೇರಿ ಮದ್ಯ ಮಹರ್ಷಿಗಳ ಆಶ್ರಮಕ್ಕೆ ಪ್ರಯಾಣ ಮಾಡಿ ದನು ಅಲ್ಲಿ ವನವಾಸಿಗಳಾದ ಮುನಿಪರುಎಳ್ಳ 'ಸಶ್ರೇಷ್ಠನೇ, ನಮ್ಮ ಗುರುಗಳು ಸಮಾಧಿನಿಷ್ಠರಾಗಿರುವರು. ಅವರು ಬಹಿರ್ಮುಖpದ ಬಳಿಕ ಅವರ ಅಪ್ಪಣೆಯನ್ನು ಪಡೆದು ಬೇಕಾದ ಲತಗಳನ್ನು ತೆಗೆದುಕೊಂಡು ಹೋಗು, ಅವರು ಮಾತನಾಡುವವರೆಗೂ ಒಂದು ಲತಯನ್ನಾದರೂ ಮುಟ್ಟಬೇಡ' ಎಂದು ಹೇಳಿ, ದರು. ಈ ವಿಷಯವನ್ನು ಲಕ್ಷಣನು ತನ್ನ ಅಣ್ಣನಿಗೆ ಹಿಂತಿರುಗಿ ಬಂದು ಅಂಕ ಮಾಡಿಕೊಂಡನು. ಅದನ್ನು ಕೇಳಿ ಶ್ರೀರಾಮನು 'ಎಲೈ ತಮ್ಮನೇ, ಇಷ್ಟ ನಿಧಾನ ಮಾಡಿದೆ? ಆದದ್ದಾಯಿತು. ಈಗಲಾದರೂ ಹೋಗಿ ಮುನಿರತ್ರರನ್ನು ಲಕ್ಷ ಮಡದಿ ಶೀಘ್ರವಾಗಿ ಅಮೂಲಿಕೆಗಳನ್ನು ತೆಗೆದುಕೊಂಡು ಬಾ, ಆ ಮುನಿಯು ಕೋಪ ಮಾಡ್ತಾನೆಂದು ಸ್ವಲ್ಪವಾದರೂ ಮನಸ್ಸಿನಲ್ಲಿ ಸಂದೇಹ ತರಬೇಡ, ನೀನು ಅಲ್ಲಿಂದ ಬರುವಾಗ ಮಾತ್ರ ನಿನ್ನ ಹೆಸರನ್ನು ಆ ಸುನಿತನಯರ ಮುಂದೆ ಹೇಳಿಬ ಎಂದನು. ಒಡನೆ ಲಕ್ಷಣನು ಆ ವನಕ್ಕೆ ಹೋಗಿ ಮುನಿಪುತ್ರರನ್ನು ಗಣನೆಗೆ ತರದೆ ಸಂಜೀವಿನೀಲತೆಯನ್ನು ತೆಗೆದುಕೊಂಡು, ಮುನಿಕುಮಾರರಿಗೆ ತನ್ನ ಹೆಸರನ್ನು ತಿಳಿಸಿ ಶೀಘ್ರವಾಗಿ ಶ್ರೀ ರಾಮನಿರುವ ಸ್ಥಳಕ್ಕೆ ಬಂದನು. ಶ್ರೀ ರಾಮನು ಆ ಸಂಜೀವಿನೀಲತಯನ್ನು ಭರತನಿಗೆ ಪ್ರಯೋಗಿಸಲು, ಕೂಡಲೆ ನಿದ್ರೆಯಿಂದ ಎದ್ದು 3ಭರತನು ಎದ್ದು ಕುಳಿತನು. ಅದನ್ನು ನೋಡಿ ಎಲ್ಲರೂ ಬಹಳ ಸಂತೋಷ ದಿಂದ ಶ್ರೀ ರಾಮನನ್ನು ಸ್ತೋತ್ರ ಮಾಡಿದರು. ಇತ್ತ ವನದಲ್ಲಿ ವಟುಗಳು ಹಾ ಹಾ ಕಾರಮಾಡುತ್ತ ಮುಲಮುನಿಗಳ ಬಳಿಗೆ ಬಂದು ಎಲ್ಲ ವರ್ಗಮಾನಗಳನ್ನು ವಿಜ್ಞಾಪನ ಮಾಡಿಕೊಂಡರು. ಆಗ ಮುದ್ಧಲರು ಎಚ್ಚೆ ವಟುಗಳಿರಾ, ಲಕ್ಷಣನೆಂಬುವವನು ಯಾರು? ಅವನು ಎಲ್ಲಿಂದ ಬಂದನು; ಇಲ್ಲಿ ಸಂಜೀವಿನೀಲತೆ ಇದೆ ಎಂದು ಅವನಿಗೆ ಹೇಗೆ ಗೊತ್ತಾ ಯಿತು; ಯಾವ ವಿಷಯವೂ ನಮಗೆ ಚನಗಿ ತಿಳಿಯಲಿಲ್ಲ. ನಿಮ್ಮಲ್ಲಿ ಕೆಲವರು ಈಗಲೇ ಹೊರಟು, ಆ ವಿಚಾರವನ್ನು ಸಮಗ್ರವಾಗಿ ತಿಳಿದುಕೊಂಡು ಜಾಗ್ರತ