ಪುಟ:ಶ್ರೀ ಮದಾನಂದ ರಾಮಾಯಣ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮದಾನಂದಮಯಣ, ಡರು. ಮುಂದೆ ಸುಮಂತ್ರನು ಸಾರಥಿಯಾಗಿ ಕುಳಿತನು. 'ಬಳಿಕ ರಥವ ವಾಯು ಏನಂತ ವೇಗವಾಗಿ ನಡೆಯಿತು. ಆ ದಿವಸ ವಾಘಶುದ್ಧ ಪಂಚಮಿಯಾಗಿತ್ತು, ಮುಂದೆ ಅವರು ಸಾಯಂಕಾಲಕ್ಕೆ ಗಂಗಾತೀರದಲ್ಲಿರುವ ಶೃಂಗಬೀರವೆಂಬ ಹಟ್ಟಣ * ತಲ್ಪಿದರು. ಅಲ್ಲಿ ಗುಹನೆಂಬ ರಾಜನಿದ್ದನು. ಆತನು ಶ್ರೀ ರಾಮಾದಿಗಳನ್ನು ಭಕ್ತಿಯಿಂದ ತನ್ನಲ್ಲೇ ಇರಿಸಿಕೊಂಡು, ಬಹುಪ್ರೀತಿಯಿಂದ ಆತಿಥ್ಯಮಾಡಿದನು. ಪ್ರಾತಃಕಾಲದಲ್ಲಿ ಶ್ರೀರಾಮನು ಸುಮಂತ್ರನಿಗೆ ಅಲ್ಲಿಂದಲೇ ಅಪ್ಪಣತೊಟ್ಟು, ಸೀತಾ-ಲಕಣಡನೆ ನಾವೆಯನೇರಿ ಗಂಗಾನದಿಯನ್ನು ದಾಟಿದನು. ರಾವಾಜ್ಞೆ ಯಿಂದ ಗುಹನು ಹಿಂತಿರುಗಿದನು. ಮುಂದೆ ರಾಮಾದಿಗಳು ಭರದ್ವಾಜಿ ಮಹರ್ಷಿಗಳ ಆಶ್ರಮಕ್ಕೆ ತೆರಳಿದರು. ಆ ಮುನಿಗಳು ಲಕ್ಷ್ಮಣ ಸಮೇತರಾದ ಸೀತಾ-ರಾಮರನ್ನು ನೋಡಿ, ಪರಮ ಹರ್ಷ ದಿಂಡ ಸತ್ಕರಿಸಿದರು. ಬಳಿಕ ಶ್ರೀ ರಾಮಾದಿಗಳು ಅವರ ಅನುಜ್ಞೆಯನ್ನು ಪಡೆದು ಮುಂದೆ ಯಮುನಾನದಿಯನ್ನು ದಾಟಿ, ಅಲ್ಲಿ ತಪಸ್ಸು ಮಾಡುತ್ತಿದ್ದ ವಾಲ್ಮೀಕಿ ಮಹರ್ಷಿಗಳನ್ನು ನೋಡಿ ಅವರಲ್ಲಿ ಒಂದು ದಿವಸ ಆತಿಥ್ಯವನ್ನು ಸ್ವೀಕರಿಸಿ, ಮುಂದಕ್ಕೆ ಪ್ರಯಾಣ ಮಾಡಿದರು. ದಾರಿಯಲ್ಲಿ ಬಹು ಮನೋಹರವಾದ ಚಿತ್ರ ಕೂಟ ಪರ್ವತವು ಅವರಿಗೆ ಹತ್ತಿತು. ಶ್ರೀ ರಾಮನು ಆದರ ಪಶ್ಚಿಮ ಭಾಗದಲ್ಲಿ ಒಂದು ಪರ್ಣಶಾಲೆಯನ್ನು ರಚಿಸುವಂತೆ ಲಕ್ಷಣನಿಗೆ ಅಪ್ಪಣೆಮಾಡಿದ್ದನು. ಆತ ವತ್ಸಲನಾದ ಲಕ್ಷಣನು ಕೂಡಲೆ ಅದನ್ನು ನಿರ್ಮಾಣಮಾಡಿದನು. ಶ್ರೀ ರಾಮ ನು ಆ ಪರ್ಣಶಾಲೆಯಲ್ಲಿ ಗೃಹಶಾಂತಿಯೇ ಮೊದಲಾದ ಸಮ ವೇದೋಕ್ತ ವಿಧಿ ಗಳನ್ನು ಆಶ್ರಮವಾಸಿಗಳ ಸಹಾಯದಿಂದ ನೆರವೇರಿಸಿ, ಸೀತಾಸಮೇತನಾಗಿ ಬಹಳ ಆನಂದದಿಂದ ವಾಸಮಾಡಿದನು ಪ್ರತಿದಿನವೂ ಲಕ್ಷಣನು ಆ ವನದಲ್ಲಿರುವ ರುಚಿಕರವಾದ ಕಂದಮೂಲಗಳನ್ನು ತರುವನು, ಅವುಗಳನ್ನು ಸೀತಾದೇವಿಯು ಶ್ರೀ ರಾಮನಿಗೆ ಜನುರ್ಷಿಸಿ, ಮಿಕ್ಕವುಗಳನ್ನು ತಾನೂ ಭಕಣ ಮಾಡುವಳು. ಹೀಗಿರಲು, ಒಂದು ದಿನ ಶ್ರೀ ರಾಮನು ಸೀತೆಯ ತೊಡೆಯ ಮೇಲೆ ಮಲಗಿ ನಿದ್ರೆ ಮಾಡುತ್ತಿದ್ದನು. ಆ ಕಾಲದಲ್ಲಿ ಕಾಕಾಸುರನು ಅಲ್ಲಿಗೆ ಬಂದು, ತನ್ನ ಕೈ

  • ನಿಂದ ಸೀತಯ ಜನಗಳನ್ನು ಕುಕ್ಕಲಾರಂಭಿಸಿದನು. ಆದರೂ ಸೀತಾದೇವಿಯು ಇತಿಗೆ ನಿದ್ರಾಭಂಗವಾಗುವದೆಂಬ ಭೀತಿಯಂದ ಹಾಗಯೇ ಕುಳಿತಿದ್ದಳು. ಇನ ಗಳಿಂದ ರಕ್ತ ಸುರಿಯಲಾರಂಭಿಸಿತು. ಅದರಿಂದ ಶ್ರೀ ರಾಮನು ಎಚ್ಚತ್ತು ಘಾತು ಕನಾದ ರಾಕ್ಷಸನನ್ನು ವಧ ಮಾಡಲು, ಹಾರ ಬಿದ್ದಿರುವ ದರ್ಭೆಯನ್ನು ಬ್ರಹ