ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ಶ್ರೀಮದ್ಭಾಗವತವು [ಅಧ್ಯಾ, ೨. ಕಿವಿ, ಮೊದಲಾದ ನವರಂಧ್ರಗಳೂ ಅದರ ಪೊಟ್ಟರೆಗಳು ! ಪ್ರಾಣ, ಆ ಪಾನ, ವ್ಯಾನ ಉದಾನ, ಸಮಾನ, ನಾದ, ಕೂರ, ಕೃಕರ, ದೇವದತ್ತ, ಧನಂಜಯಗಳೆಂಬ ದಶಪ್ರಾಣಗಳೂ ಹತ್ತು ಎಲೆಗಳು! ಜೀವಾತ್ಮ ಪರಮಾ ತ್ಮಗಳೆಂಬಿವೆರಡೂ ಅದರಲ್ಲಿ ವಾಸಮಾಡುವ ಎರಡುಪಕ್ಷಿಗಳು ! ಇಂತ ಹ ಜಗದ್ರೂಪವಾದ ವೃಕ್ಷಕ್ಕೆ ಆಧಾರಭೂತನಾದ ನಿನ್ನನ್ನು ವಂದಿಸುವೆವು. ದೇವಾ ! ಈ ಸಮಸ್ತಪ್ರಪಂಚದ ಉತ್ಪತ್ತಿ ಸ್ಥಿತಿ ಲಯಗಳೆಲ್ಲಕ್ಕೂ ನೀನೆ ಕಾರಣವು. ನೀನು ಜೀವನಿಗಿಂತಲೂ ಬೇರೆಯಾಗಿದ್ದರೂ ನಿನ್ನ ಮಾಯೆಯಿಂದ ಮೋಹಿತರಾದ ಮೂಢರು, ನಿನ್ನ ಸ್ನೇ ಅನೇಕಜೀವರೂಪ ದಿಂದಿರುವುದಾಗಿ ಶ್ರಮಿಸುವರೇಹೊರತು, ನಿನ್ನ ಪರಸ್ವರೂಪವನ್ನು ತಿಳಿಯಲಾರರು ದೇವಾ ! ಕೇವಲಜ್ಞಾನಾನಂದಸ್ವರೂಪನಾದ ನೀನು ಲೋಕ ಕ್ಷೇಮಕ್ಕಾಗಿ, ಶುದ್ಧಸತ್ವಮಯವಾಗಿಯೂ, ಸಾಧುಗಳಿಗೆ ಕ್ಷೇಮಪ್ರದ ವಾಗಿಯೂ, ದುರ್ಜನರಿಗೆ ಹಾನಿಕರವಾಗಿಯೂ ಇರುವ ಬೇರೆಬೇರೆ ಆವ ತಾರಗಳನ್ನೆತ್ತಿ ಲೋಕವನ್ನು ದರಿಸುವೆ. ಓ ಪುಂಡರೀಕಾಕಾ! ಹೀಗೆ ಸೀನು ಲೋಕಕ್ಷೇಮಾರವಾಗಿ ಬೇರೆಬೇ ರೆ ಅವತಾರಗಳನ್ನೆ ತಿದಾಗಲೂ, ಕೆಲವು ಜ್ಞಾನಿಗಳು, ತಮ್ಮ ಸಮಾಧಿ ಯೋ ಗ) ಬಲದಿಂದ ಶುದ್ಧಸತ್ವಮಯವಾದ ನಿನ್ನ ಪರಸ್ವರೂಪವನ್ನು ತಮ್ಮ ಮ ನಸ್ಸಿನಲ್ಲಿ ಸಾಕ್ಷಾತ್ಕರಿಸುತ್ತ, ನಿನ್ನ ಪಾದಾರವಿಂದವೆಂಬ ನಾವೆಯನ್ನು ಹಿ ಡಿದು, ಸದಾಚಾರಸಂಬ ನಾವಿಕನ ಸಹಾಯದಿಂದ,ಸಂಸಾರವೆಂಬ ಮಹಾ ಸಮುದ್ರವು ಗೋಷ್ಟದದಂತೆ ನಿರಾಯಾಸವಾಗಿ ದಾಟುವರು ಓ ದೇವಾ' ಹೀಗೆ ಜ್ಞಾನಿಗಳು ತಾವುಮಾತ್ರ ಭಯಂಕರವಾದ ಆ ಸಂಸಾರಸಮುದ್ರವನ್ನು ದಾಟುವುದಲ್ಲದೆ, ನಿನ್ನ ಪಾದಭಕ್ತಿಯೇ ಸಂಸಾ ರಸಾಗರವನ್ನು ದಾಟಿಸತಕ್ಕೆ ನಾವೆಯೆಂಬುದನ್ನು ಇತರಜೀವರಾತಿಗೂ ತೋರಿಸಿ ಲೋಕವನ್ನು ದರಿಸುವರು. ಹೀಗೆ ಸಾಧುಗಳನ್ನೂ, ಅವರ ಮೂ ಲಕವಾಗಿ ಇರ್ತಲೋ ಗಳನ್ನೂ ಅನುಗ್ರಹಿಸತಕ್ಕ ನೀನು, ಶರಣಾಗತರಾದ ನಮ್ಮನ್ನು ರಕ್ಷಿಸಬೇಕು,