ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೩೯ ಅಧ್ಯಾ, ೨) ದಶಮಸ್ಕಂಧವು. ಓ ಪದ್ಮನಾಭಾ! ಬೇರೆ ಕೆಲವರು ಸಂಸಾರಬದ್ಧರಾಗಿದ್ದರೂ,ತಾವು ಮುಕ್ತರೆಂಬ ವೃಧಾಭಿಮಾನದಿಂದ ಬೀಗಿ ಬೆರೆಯುವರು. ಅವರು ನಿನ್ನಲ್ಲಿ ಭಕ್ತಿಹೀನರಾದುದರಿಂದ ಮನಶುದ್ಧಿಯಿಲ್ಲದವರಾಗಿದ್ದರೂ, ಪೂರಾರ್ಜಿತ ವಾದ ಅಲ್ಪ ಸ್ವಲ್ಪ ಸುಕೃತಏಶೇಷದಿಂದ ಉತ್ತಮಜನ್ಮವನ್ನು ಪಡೆಯು ವುದುಂಟು. ಅತಿಪ್ರಯಾಸದಿಂದ ಈ ಉತ್ತಮಪದವನ್ನೆರಿರುವಾಗಲೂ, ನಿನ್ನಲ್ಲಿ ವಿಮುಖರಾಗುವುದರಿಂದ, ತಿರುಗಿ ನೀಚಜನ್ಮವನ್ನೇ ಹೊಂದುವರು ಮಾಧವಾ ! ನಿನ್ನಲ್ಲಿ ಪೂರ್ಣಭಕ್ತಿಯನ್ನು ಸಾಧಿಸಿದವರಾದರೋ, ಎಂದಿ ಗೂ ಈ ವಿಧವಾಗಿ ದಾರಿತಪ್ಪಿ ಹೋಗಲಾರರು. ಅಂತವರು ಯಾವಾಗಲೂ ನಿನ್ನ ಅನುಗ್ರಹದಿಂದ ರಕ್ಷಿತರಾಗಿ, ತಮ್ಮ ಭಕ್ತಿನಿರೋಧಕಗಳಾದ ವಿಷ್ಣು ದೇವತೆಗಳನ್ನು ಕಾಲಿಂದ ಮೆಚ್ಚುತ್ತ ನಿರ್ಭಯವಾಗಿ ಸಂಚರಿಸುವರು. ಪುರುಷೋತ್ತಮಾ೦! ನೀನು ಈ ವಿಧವಾದ ಶರೀರಗಳನ್ನೆತ್ತುವುದ ಕೈ ಲೋಕರಕ್ಷಣವೆಂಬುದು ವ್ಯಾಜವೇಹೊರತು, ನಿಜವಾಗಿ ಅದರ ಉ ದೇಶವು ಲೋಕರಕ್ಷಣವಲ್ಲ! ಸಂಕಲ್ಪ ಮಾತ್ರದಿಂದಲೇ ಸಮಸ್ತ ಕಾರವ ನ್ಯೂ ಸಿರಹಿಸಬಲ್ಲ ನಿನಗೆ, ಅದಕ್ಕಾಗಿ ಇಷ್ಟು ಪ್ರಯಾಸವೇಕೆ? ನೀನು ಆ ಯಾ ಶರೀರವನ್ನೆತ್ತಿದಾಗ, ಜನರು ನಿನ್ನ ಆಯಾ ಅವತಾರಚರಿತ್ರೆಗಳನ್ನು ಕೇಳಿ, ನಿನ್ನನ್ನು ಪಾಸನೆಮಾಡಿ, ಶ್ರೇಯಸ್ಸನ್ನು ಪಡೆಯಬೇಕೆಂಬುದೇ ಇದರ ಉದ್ದೇಶವೇ ಹೊರತು ಬೇರೆ ಯಲ್ಲ. ನೀನು ಈ ವಿಧವಾದ ಶರೀರಗಳನ್ನೆತ್ತಿದಾ ಗಲೇ ಜನರು, ಯಜ್ಞಕ್ರಿಯೆಗಳಿಂದಲೂ, ಉಪಾಸನದಿಂದಲೂ, ನಿನ್ನನ್ನು ಸುಲಭವಾಗಿ ಆರಾಧಿಸಬಲ್ಲರು, ಹಾಗಿಲ್ಲದ ಪಕ್ಷದಲ್ಲಿ, ನಿನ್ನ ಪರಸ್ವರೂಪವನ್ನು ತಿಳಿಯಲಾರದವರಿಗೆ, ನಿನ್ನನ್ನು ಆರಾಧಿಸುವ ಬಗೆಯೇನು ? ಅಂತವರನ್ನ ನು ಗ್ರಹಿಸುವುದಕ್ಕಾಗಿಯೇ ನೀನು ಈ ವಿಧವಾದ ಶರೀರಗಳನ್ನು ಕೈಕೊಳ್ಳುವೆ. ಓ ಲೋಕಕಾರಣಾ ! ಹೀಗೆ ಸೀನು ಅವತಾರವನ್ನೆತ್ತುವುದು, ಇತರ ಜನರಿಗೆ ಜ್ಞಾನಪ್ರಕಾಶಕವಾಗಿ, ಅಜ್ಞಾನದಿಂದ ತೋರುವ ದೇವಮನು ಹ್ಯಾದಿ ಭೇದಬುದ್ದಿಯನ್ನು ನೀಗಿಸತಕ್ಕುದಾಗಿಯೂ ಇರುವುದು. ಶುದ್ಯಸ ತ್ವಮಯವಾದ ಈ ಶರೀರದಿಂದ ನೀನು ಅವತರಿಸದಿದ್ದರೆ, ಆಗ ಲೋಕದಲ್ಲಿ ಯಾವಯಾವ ಮನುಷ್ಯನಿಗೆ ಅವನವನ ಕರಾನುಗುಣವಾಗಿ ಸಾಗು