ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಶ್ರೀಮದ್ಭಾಗವತರು [ಅಧ್ಯಾ, ೨, ಣಗಳಲ್ಲಿ ಯಾವಯಾವಗುಣಗಳು ತಲೆಯೆತ್ತಿರುವುವೋ, ಆಯಾಗುಣಕ್ಕೆ ತಕ್ಕಂತೆ ನಿನ್ನನ್ನೂ ಇತರ ದೇವಮನುಷ್ಟಾದಿಗಳೊಡನೆ ಸಮಾನವಾಗಿಯೇ ಭಾವಿಸುವನು. ನೀನು ಈ ಅವತಾರಶರೀರಗಳಿಂದ ನಿನ್ನ ಪರಸ್ವರೂಪವನ್ನು ಮರೆಸಿಕೊಂಡಿದ್ದರೂ, ಸ್ಪಟಿಕದ ಬರಣಿಯಲ್ಲಿ ಬಚ್ಚಿಟ್ಟಾಗಲೂ ಬಂಗಾ ರವು, ತನ್ನ ಕಾಂತಿಯನ್ನು ಹೊರಕ್ಕೆ ತೋರಿಸುವಂತೆ, ಅದರಲ್ಲಿಯೇ ಆಗಾಗ ನಿನ್ನ ಅದ್ಭುತಶಕ್ತಿಯನ್ನು ಹೊರಪಡಿಸುವುದರಿಂದ, ಅವುಗಳನ್ನು ನೋಡಿ ಜ ನರು ನಿನ್ನನ್ನು ಪರಮಪುರುಷನೆಂದೂ, ಸತ್ವಲೋಕಕಾರಣನೆಂದೂ ಧ್ಯಾ ನಿಸಿ ಪೂಜಿಸುವರು. ದೇವಾ!ನೀನು ಹೀಗೆ ದೇವತಿಬ್ರನುಷ್ಠಾದಿರೂಪದಿಂದ ಅವತಾರವ ನೆತ್ತಿದರೂ, ನಿನ್ನ ಸ್ವರೂಪಸ್ವಭಾವಗಳನ್ನು ವೇದವಾಕ್ಯಗಳಿಂದಲೂ, ತದ ನುಸಾರವಾದ ಮನಸ್ಸಿನಿಂದಲೂ ಅನುಮಾನಿಸಿ ತಿಳಿಯಬೇಕೇಕೊರತು,ಅವು ಇಂದ್ರಿಯಗಳಿಗೆ ಗೋಚರಿಸತಕ್ಕವುಗಳಲ್ಲ. ಆ ನಿನ್ನ ನಾಮ, ರೂಪ, ಗುಣ, ಕರ, ಜನ್ಮಗಳೊಂದನ್ನೂ ಇತರದೇವಮನುಷ್ಯಾದಿಗಳಿಗೆ ಸರಿಹೋಲಿಸಿ ಹೇಳುವುದಕ್ಕಿಲ್ಲ ನಿನ್ನಲ್ಲಿರತಕ್ಕೆ ಅಸಾಧಾರಣ ಗುಣಗಳೇ ಬೇರೆ! ನಿನ್ನ ಸ್ವ ಭಾವವೇ ಬೇರೆ! ಹೀಗೆ ನೀನು ವಿಲಕ್ಷಣಸ್ವರೂಪವುಳ್ಳವನಾಗಿದ್ದರೂ, ಯ ಜ್ಞಾದಿಕ್ರಿಯೆಗಳನ್ನು ನಡೆಸತಕ್ಕವರು, ನಿನ್ನನ್ನು ಆಗೀಂದ್ರಾದಿದೇವತೆಗಳ ರೂಪದಿಂದಲೇ ಭಾವಿಸಿ ಪೂಜೆಗಳನ್ನು ಸಮರ್ಪಿಸುವರು. ಆದರೇನು ? ಆಸ ಮಸ್ಕದೇವತೆಗಳಿಗೂ ನೀನೇ ಅಂತರಾತ್ಮನಾಗಿದ್ದು ಆಯಾಪೂಜೆಗಳನ್ನೂ ನೀನೇ ಗ್ರಹಿಸುವೆ. ದೇವಾ: ಸವ್ರ ಮಂಗಳಗುಣಗಳನ್ನು ಕಿವಿಯಿಂದ ಕೇಳುವುದು, ಆ ದನ್ನು ಮತ್ತೊಬ್ಬರಿಗೆ ಹೇಳುವುದು, ಅವುಗಳನ್ನು ತನಗೆ ಹೇಳತಕ್ಕವರೂ, ತನ್ನಿಂದ ಕೇಳತಕ್ಕವರೂ ಸಿಕ್ಕದಿದ್ದಾಗ, ನಿನ್ನ ನಾಮರೂಪಗಳನ್ನು ಮನಸ್ಸಿ ನಲ್ಲಿಟ್ಟು, ತಮಗೆ ತಾವೇ ಧ್ಯಾನಿಸುತ್ತಿರುವುದು, ತಾವು ಮಾಡತಕ್ಕ ಸಮ ಪ್ರಕಾರಗಳಲ್ಲಿಯೂ ನಿನ್ನ ಚರಣಾರವಿಂದಗಳಲ್ಲಿಯೇ ಮನಸ್ಸನ್ನು ನೆಲೆಗೊ ಳಿಸುವುದು, ಹೀಗೆ ಮಾಡುವವರು, ಎಂದಿಗೂ ಸಂಸಾರಬಂಧದಲ್ಲಿ ಸಿಕ್ಕಿಬಿರ ದೆ ಮುಕ್ತಿಯನ್ನೇ ಹೊಂದುವರು. ಓ ದೇವಾ!ಆ ತ್ರಿತರ ದುಃಖವನ್ನು ನೀಗಿ