ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ: ೨.] ದಶಮಸ್ಕಂಧವು. ೧೪೧ ಸತಕ್ಕ ನೀನು, ನಮ್ಮೆಲ್ಲರ ಭಾಗ್ಯವಶದಿಂದ, ಈಗ ಈ ದೇವಕಿಯ ಗರ್ಭದಲ್ಲಿ ಆವಿರ್ಭವಿಸುತ್ತಿರುವೆ! ಈಗ ನೀನು ಈವಿಧವಾಗಿ ಅವತರಿಸಿದಮಾತ್ರಕ್ಕೆ, ನಿನ್ನ ಪಾದಭೂತೆಯಾದ ಈ ಭೂಮಿಯ ಭಾರವು ನೀಗಿದಂತೆಯೇ ಭಾವಿಸುವೆವು. ಆಹಾ!ಏನುಭಾಗ್ಯವು! ಧ್ವಜವಜ್ರಾಂಕುಶಾಜಶುಭಲಕ್ಷಣಗಳು ನಿನ್ನ ಪಾದ ರೇಖೆಯಿಂದ ಅಂಕಿತವಾದ ಈ ಭೂಮಿಯೇ, ಈಗ ನಮಗೆ, ನಿನ್ನ ನಿತ್ಯವಿ ಭೂತಿಯಾದ ವೈಕುಂಠಕ್ಕೆ ಸಮಾನವಾಗಿ ತೋರುವುದು - ಓ ಪ್ರಭೋ ! ನೀನು ಸತ್ಯೇಶ್ವರನು! ಕರಾಠೀನವಾದ ಉತ್ಪತ್ತಿ ಯಿಲ್ಲದ-ನು! ಹಾಗಿದ್ದರೂ ನೀನು ಈಗ ಈ ಮನುಷ್ಯಗರ್ಭದಲ್ಲಿ ಜನಿಸು ವುದು, ನಿನ್ನ ವಿನೋವಾರ್ಧವಾಗಿಯೇ ಹೊರತು ಇದಕ್ಕೆ ಬೇರೆ ಕಾರ ಣವೊಂದನ್ನೂ ಹೇಳುವುದಕ್ಕಿಲ್ಲ. ಆಹಾ! ಇದಲ್ಲವೇ ಆಶ್ಚರೈವು ! ನಿನ್ನ ಮಾ ಯೆಯಿಂದ ಮೋಹಿತವಾದ ಈ ಜಗತ್ತಿಗೆ, ಉತ್ಪತ್ತಿ, ಸ್ಥಿತಿ, ಲಯ, ಮೊದ ಲಾದ ವಿಕಾರಗಳೆಲ್ಲವೂ ಹುಟ್ಟುವುದಕ್ಕೆ, ಯಾವ ನಿನ್ನ ಲೀಲೆಯೇ ಕಾರಣವೆ ನಿಸಿರುವುದೋ, ಆ ಲೀಲೆಯೇ ಈ ವಿಧವಾದ ಸಿನ್ನ ಅವತಾರಗಳಿಗೂ ಕಾರ ಇವಲ್ಲದೆ ಬೇರೆಯಲ್ಲ! ಸಿರಿಕಾರನಾದ ನಿನ್ನಲ್ಲಿ ಈ ವಿಕಾರಗಳು ತೋರುವು ದಕ್ಕೆ ನಿನ್ನ ಲೀಲೆಯೇ ಕಾರಣವು. ಓ' ದೇವಾ ! ಮತ್ತ್ವ, ಅಶ್ವ (ಹಯಗ್ರೀವ) ಕಚ್ಛಪ, ವರಾಹ, ನೃ ಸಿಂಹಿ, ಹಂಸ, ಕ್ಷತ್ರಿಯ, (ರಾಮ) ಬ್ರಾಹ್ಮಣ, ದೇವತಾರೂಪದಿಂದ ನೀ ನು ಹಿಂದೆ ಬೇರೆಬೇರೆ ಅವತಾರಗಳನ್ನೆ ತಿ, ನಮ್ಮನ್ನೂ, ತ್ರೈಲೋಕ್ಯವನ್ನೂ ಕಾಪಾಡುತ್ತ ಬಂದಂತೆಯೇ, ಈಗಲೂ ಈ ಅವತಾರವನ್ನೆತ್ತಿ ಭೂಭಾರವನ್ನು ನೀಗಿಸಬೇಕು ! ಓ ಯದತ್ತಮಾ ! ನಿನಗೆ ವಂದನವು.” ಎಂದು ದೇವತೆ ಗಳೆಲ್ಲರೂ ಭಗವಂತನನ್ನು ಸ್ತುತಿಸಿದಮೇಲೆ, ದೇವಕಿಯನ್ನು ಕುರಿತು (ಅ ಮ್ಯಾ ! ನಮ್ಮ ಶ್ರೇಯಸ್ಸಿಗಾಗಿ ಪರಮಪುರುಷನು, ತನ್ನ ಸಂಕಲ್ಪದಿಂದ ನಿನ್ನ ಗರ್ಭದಲ್ಲಿ ಪ್ರವೇಶಿಸಿರುವನು. ಇದರಿಂದಲೇ ಕಂಸನಿಗೆ ಮೃತ್ಯುವು ಸನ್ನಿಹಿತವಾಯಿತೆಂಬುದು ಸ್ಪಷ್ಟವು. ಇನ್ನು ನೀನು ಅವನಿಗಾಗಿ ಸ್ವಲ್ಪಮಾ ತ್ರವೂ ಭಯಪಡಬೇಕಾದುದಿಲ್ಲ. ಈ ನಿನ್ನ ಗರ್ಭಶಿಶುವೇ,ಸಮಸ್ತ ಯಾದವರ ಕಷ್ಟವನ್ನೂ ನೀಗಿಸಿ ಕಾಪಾಡುವವನೆಂದು ತಿಳಿ!” ಎಂದರು. ಓ ಪರೀಕ್ಷೆ