ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸವಿನಯನಿವೇದನ ಕಾಳಯುಕ್ತ ಸಂವತ್ಸರದಲ್ಲಿಯೇ ಪ್ರಕಾಶಕ್ಕೆ ಬರಬೇಕಾಗಿದ್ದ ಈ ಗ್ರಂಥವು ಅನೇಕ ಅನಿವಾರ್ಯಗಳಿಂದ ತಡೆಯಲ್ಪಟ್ಟಿದ್ದು ದಕ್ಕಾಗಿ, ನಮ್ಮ ನಂದಿನಿಯ ವರ್ಗಣೀದಾರರಲ್ಲಿ ನಾವು ವಚನಭ್ರಷ್ಟರೆನ್ನಿಸಿಕೊಳ್ಳಬೇಕಾ ಯಿತಂಬ ಖೇದವು, ದಯಾಳುವಾದ ಲಕ್ಷ್ಮೀನೃಸಿಂಹಸ್ವಾಮಿಯ ಅನುಗ್ರ ಹದಿಂದ ನಿವಾರಣವಾಗಿ, ಇಂದಿಗಾದರೂ ಈ ಗ್ರಂಥವು ಪ್ರಕಾರಕ್ಕೆ ಬರು ವಂತಾಯಿತಂಬ ಸಂತೋಷವ ನಮಗೆ ಅಪಾರವಾದುದಾಗಿರುವುದು. ಈ ಗ್ರಂಥಕರ್ತರ ಪೀಠಿಕೆಯಲ್ಲಿ ಸೂಚಿಸಿರುವಂತೆ ಇವರಿಂದ ವಿರ ಚಿತವಾಗಿರುವ ಉತ್ತಮೋತ್ತಮ ಗ್ರಂಥಗಳನ್ನು ಪ್ರಕಾರಕ್ಕೆ ತರುವುದು ದೇಶಭಾಷಾ ಸೇವಕರಿಗೆ ಅವಶ್ಯ ಕರ್ತವ್ಯವೆಂದು ಸೂಚಿಸಿದ ನಮ್ಮ ಹಿತ ಚಿಂತಕ ಭ್ರಾತೃವರ್ಗಿಯರಾದ ಬಿ. ರಾಮರಾಯರವರ ಅಭಿಪ್ರಾಯವು ನಮಗೆ ಮಾನ್ಯವಾಗಿ ತೋರಿದುದರಿಂದ, ಮೊದಲು ಅಭೀಷ್ಟಫಲಪ್ರದವೂ ದುಘ್ನ ನಿಗ್ರಹ ಶಿಷ್ಟ ಸಂರಕ್ಷಕನೂ ಆದ ಲಕ್ಷ್ಮೀನೃಸಿಂಹನ ಅಂಕಿತಕ್ಕೂ ಳಪಟ್ಟು ವಿದ್ಯಾರ್ಥಿಗಳಿಂದ ಮೊದಲು ಸಕಲರಿಗೂ ಉಪಯೋಗವಾಗುವತಿ ತಹ ಅತ್ಯುಪಯುಕ್ತ ವಿಚಾರಗಳನ್ನೊಳಗೊಂಡಿರುವ ಈ ಗ್ರಂಥವನ್ನೇ ನಂದಿನಿಯ ಬಹುಮಾನ ಪುಸ್ತಕವಾಗಿ ಪ್ರಕಾಶಕ್ಕೆ ತರಲು ಸಂಕಲ್ಪಿಸಿದೆವು. ನಮ್ಮ ಸಂಕಲ್ಪದಂತೆ ತಮ್ಮ ಗ್ರಂಥಗಳನ್ನು ಪ್ರಕಾಶಪಡಿಸಲು ಸಮ್ಮತಿಸಿ, ಕಳುಸಿದುದಕ್ಕಾಗಿ ನಮ್ಮ ಭ್ರಾತೃವರ್ಗಿಯರಾದ ಈ ಗ್ರಂಥಕರ್ತರ ಸೌ ಜನ್ಯವು ನಮಗೆ ಸಂಸ್ಮರಣೀಯವಾಗಿರುವುದು. - ಈ ಗ್ರಂಥಕರ್ತರಿಂದ ರಚಿತವಾದ ಇನ್ನೂ ಅನೇಕ ಗ್ರಂಥಗಳು ಮುದ್ರಣವಾಗದಿರುವುವು, ಅವುಗಳಲ್ಲಿ ಅತ್ಯುತ್ತಮ ತರದ ವಿಚಾರಗಳ ನೊಳಕೊಂಡಿರುವ “ನಿತ್ಯಚರ್ಯೆ” ಎಂಬ ಹೆಸರಿನ ಆರೋಗ್ಯಶಾಸ್ತ್ರ : ಆಚಾರಶಾಸ್ತ್ರಗಳಿಗನುಸಾರವಾಗಿ ಬೋಧಿಸುವ ಗ್ರಂಥವು ನಂದಿನಿಯಲ್ಲಿ ಪ್ರಕಟವಾಗುತ್ತಿರುವುದಲ್ಲದೆ, ಮತ್ತೊಂದಾದ ಪ್ರಾಚೀನಭಾರತಪ್ರಿಯರ ಚರಿತ್ರೆಯೂ ಆ7ರಲ್ಲಿ ನಂದಿನಿಯಲ್ಲಿ ಪ್ರಕಟವಾಗುವುದೆಂಬ ನಿರೀಕ್ಷೆಯಿ ರುವುದು, ಇವರ ಗ್ರಂಥಗಳ ವಾಚನದಿಂದಾಗುವ ಪ್ರಯೋಜನವನ್ನು