ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಚಕರೇ ಊಹಿಸಿ ತಿಳಿಯಬೇಕಲ್ಲದೆ ನಾವು ಹೇಳುವುದರಿಂದ ಜನರಿಗೆ ಅಷ್ಟು ಮಂದಟ್ಟಾಗಲಾರದುದರಿಂದ ಆ ವಿಷಯವಾಗಿ ನಾವು ಏನನ್ನೂ ಹೇಳಲಾರೆವು, ಮುಖ್ಯವಾಗಿ, ಗ್ರಂಥಕರ್ತರ ಉದ್ದೇಶವನ್ನೂ ಗ್ರಂಥದ ಸರಸ್ಯ ಪ್ರಯೋಜನಗಳನ್ನೂ ಸಾವಧಾನದಿಂದ ಸಮಾಲೋಚಿಸಬೇಕಂ ದೂ, ನಂದಿನಿ-ಹಿತ್ಯವಿಣಿಯ ಹೆಸರನ್ನು ಹೇಳಿದ ಮಾತ್ರಕ್ಕೆ ಪುಸ್ತಕವನ್ನು ನೋಡದೆಯೇ ಬಿಸುಡಬಾರದೆಂದೂ ನಂದಿನಿ-ಸತೀಹಿಣಿಯಲ್ಲಿ ಪ್ರಕಟ ವಾಗುವ ಗ್ರಂಥಗಳನ್ನೇ ವಿಮರ್ಶೆ ಮಾಡಲು ಕಂಕಣಬದ್ಧರಾಗಿರುವ ಪಂ ಡಿತ ಮಹಾಶಯರಲ್ಲಿ ಸವಿನಯವಾಗಿ ನಿವೇದಿಸುವವು ಈ ಗ್ರಂಥದ ಪ್ರತಿಪದ್ಯಗಳ ಕ್ಲಿಷ್ಟ್ಯಪದಗಳಿಗೂ ಟಿಪ್ಪಣಿಗಳನು ಕೊಡಬೇಕೆಂಬ ಅಭಿಲಾಷೆಯಿದ್ದರೂ ಸದ್ಯಕ್ಕೆ ಅದು ಆಗದಿರುವುದರಿಂದ ಮುಂದಿನ ಮುದ್ರಣದಲ್ಲಿ ಸೇರಿಸುವುದಾಗಿ ಯೋಚಿಸಿರುವವು, ಪದ್ಯಗಳಲ್ಲಿ ಬಿದ್ದಿರಬಹುದಾದ ಮುದ್ರಣ ದೋಷಗಳಿಗೆ ಮಾತ್ರವೇ ಸುದ್ದಿ ಪತ್ರವನ್ನು ಕೊಟ್ಟಿರುವೆವು, ಉಳಿದ ಅಲಂಕಾರಭಾಗಕ್ಕೆ ಸುದ್ದಿ ಪತ್ರವನ್ನು ಕೊಡಲು ಕಾಲಾವಕಾಶವಾಗಲಿಲ್ಲವಾಗಿ ಕೊಡಲಿಲ್ಲ, ಇದಕ್ಕಾಗಿ ನಮ್ಮ ಸೋದರೀಸೋದರರಲ್ಲಿ ಪ್ರಾರ್ಥಿಸುತ್ತ ಇಷ್ಟಕ್ಕೆ ವಿರಮಿಸುವೆವು. ಸತೀಹಿತೈಷಿಣಿ ಮಾತೃವಂದಿರಂ ನಂಜನಗೂಡು ಸಿದ್ದಾರ್ಥಿ ಸಂ|| ಜೈಷ್ಣ ಶು|| | ನಿರಂತರ ಶ್ರೇಯಃಕಾಂಕ್ಷಿಣೆ ತೃತೀಯ ಭಾನುವಾರ (1-6-199) | ಧರ್ಮಭಗಿನಿ ಸಂ. ನಂದಿನಿ ಇತಿ