ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ. ರು, ಮಂಗಗಳಂತ ಅವರು ಅತಿಶಯ ಎತ್ತರವಾದ ಗಿಡಗಳ ಮೇಲೆ ವಿ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಯ ಮೇಲೆ ಜಿಗಿದಾಡುತ್ತಿದ್ದರು, ಒಮ್ಮೊ ಮ ನಲದ ಮೇಲೆ ಬೀಳುವಂತ ಗಿಡದ ಕೊಂಬೆಯನು ಹಿಡಕೊಂಡು ಜೋತಾ ಡುವಾಗ ಇವರ ಸಂಗಡಿಗರು ನಾರಾಯಣನು ಬಿದ್ದನು ಎಂದು ಆರ್ತಸ್ವರದಿಂ ದ ಕೂಗುವಷ್ಟರಲ್ಲಿ ಇವರು ಇನ್ನೊಂದು ಕೊ೦ಬೆಯನ್ನು ಹಿಡಿದುಕೊಂಡು ಎರಡ ಈ ಗಿಡದ ಮೇಲೆ ಹೋಗಿ ಕೊಡುತ್ತಿದ್ದರು, ಇಲ್ಲವೆ ಎತ್ತರವಾದ ಗೋಡೆಯ ಮೇಲೆ ಹೋಗಿ ಎದ್ದು ನಿಂತಿರುತ್ತಿದ್ದರು, ನಾಲ್ಕೆಂಟು ಮೊಳ ಅಂತರವಿದ್ದರೂ ಒಂದು ಮನತು ಕುಂಬಿಯ ಮೇಲಿಂದ ಇನ್ನೊಂದು ಮನೆಯ ಕಂಬಿಗೆ ಜಿಗಿಯು ಯುತ್ತಿದ್ದರು, ಇವರು ೫ನೇ ವರ್ಷದವರಿರುವಾಗಲೇ ಇವರ ತಂದೆಯು ಇವರ ವೃತಬಂಧನವನ್ನು ಮಾಡಿಸಿದನು. ಇವರು ೭ನೇ ವರ್ಷದವರಿದ್ದಾಗ ಇವರ ತಂದೆ ಹಣದ ಸೂರ್ಯ ಜಿಪಂತನು ತೀರಿಕೊಂಡನು. ಸಮರ್ಥರು ಅನುಗ್ರಹ ಪಡೆದುಕೊಂಡದ್ದು-ಉಭಯ ಅಣ್ಣ ತಮ್ಮಂದಿ ರೊಳಗೆ ವಿಶೇಷ ಪ್ರೇಮವಿತ್ತು. ಇವರಿಬ್ಬರೂ ತಮ್ಮ ತಂದೆಯು ತೀರಿಕೊಂಡ ದುಃಖವನ್ನು ಮರೆತು ತಮ್ಮ ಮಾತೋಶ್ರಿಯನ್ನು ಸಮಾಧಾನ ಪಡಿಸಿ ಬಹಳ ಹಿತ ದಿಂದ ಇರುತ್ತಿದ್ದರು, ಶ್ರೇಷ್ಠನ ಮನಸ್ಸಿನ ಶಳವು ಬಾಲ್ಯದಿಂದ ಭಗವದ್ಭಕ್ತಿಯ ಕಡೆಗೆ ಇದ್ದಂತ ಸಮರ್ಥರದು ಸಹಾ ಇತ್ತು. ಇದಲ್ಲದೆ ವೈರಾಗ್ಯ ವೃತ್ತಿಯು ಸಮರ್ಥರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು, ಶ್ರೇಷ್ಠನು ದೊಡ್ಡ ಭಗವದ್ಭಕ್ತನಿ ದ್ದ ಕಾರಣ ಅವನ ಕಡೆಯಿಂದ ಉಪದೇಶವನ್ನು ತೆಗೆದುಕೊಂಡು ಅನುಗ್ರಹವನ್ನು ಪಡೆಯಲಿಕ್ಕೆ ಅನೇಕ ಜನರು ಬರುತ್ತಿದ್ದರು, `ಶ್ರೇಷನು ಯೋಗ್ಯರಾದ ಭಗವ “ಕರಿಗೆ ಅನುಗ್ರಹವನ್ನು ಕೊಡುತ್ತಿದ್ದನು, ಅದನ್ನು ಕಂಡು ಸಮರ್ಥರು ಸಹಾ ಅಣ್ಣನನ್ನುದ್ದೇಶಿಸಿ ತಮಗೂ ಅನುಗ್ರಹವನ್ನು ಆಶೀರ್ವದಿಸಬೇಕೆಂದು ಅಂಗಲಾಚಿ ಬೇಡಿಕೊಂಡರು, ಆದರೆ ಸಮರ್ಥರು ಇನ್ನೂ ಚಿಕ್ಕವರಿದ್ದ ಕಾರಣ' ಶ್ರೇಷ್ಠನಿಗೆ ಸಮರ್ಥರ ಮಾತು ಒಡಂಬಡಿಕೆಯಾಗಲಿಲ್ಲ, ಆಗ ಸಮರ್ಥರು ಇದಕ್ಕಾಗಿ ಚಿಂತ ಬಡುತ್ತ ಮನೆಯನ್ನು ಬಿಟ್ಟು ಯಾರಿಗೂ ಹೇಳಕೇಳದೆ ರಾತ್ರಿಯ ಹೊತ್ತಿನಲ್ಲಿ ಗಂ ತೀರದಲ್ಲಿರುವ ಪಂಚವಟಿಯ ಹನುಮಂತ ದೇವರ ಗುಡಿಗೆ ಹೋಗಿ ಹನುಮಂತ ದೇವರನ್ನು ಅಭಂಗಗಳಿಂದ ಸ್ತುತಿ ಮಾಡುತ್ತ ಆರಾಧನೆಯನ್ನು ಆರಂಭಿಸಿ ದರು. ಅವರು ಇನ್ನೂ ಸುಕುಮಾರರಿದ್ದ ಕಾರಣ ತಮ್ಮ ಭಕ್ತಿಗೆ ಮೆಚ್ಚಿ ದೇವ ರು ಬೇಗ ಪ್ರಸನ್ನನಾಗಲಿಲ್ಲವೆಂದು ವ್ಯಾಕುಲ ಪಟ್ಟು ದೇಗುಲದ ಸುತ್ತಲು ಪ್ರದಕ್ಷಿ mಯನ್ನು ಹಾಕುವ ದಾರಿಯಲ್ಲಿ ಹೋಗಿ ಕತ್ತಲೊಳಗೆ ಮಲಗಿದರು. ಆದನ್ನು ಕಂಡು ಮಾರುತಿರಾಯನು ಇವರು ಧ್ರುವನಂತೆ ತನಗೆ ಏಕನಿಷ್ಠೆಯಿಂದ ಆರಾಧನೆ