ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ, ನ ಬೆಳಿಗ್ಗೆ ರಂಗನಾಥನ ಉಡಿಗೆ ತೊಡಿಗೆಗಳನ್ನು ಕಂಡು ಅವನ ಸಾಧುತದ ಬಗ್ಗೆ ನಾನಾ ಹೈvಶದ ಶಕಗಳನ್ನು ಮಾಡಿದ್ದಿರಿ, ಆದ್ದರಿಂದ ನಾನು ಅವರ ಕೈಯಿಂದ ಇಷ್ಟೆಲ್ಲ ಚಮತ್ಕಾರವನ್ನು ಮಾಡಿಸಬೇಕಾಯಿತು. ನೀನು ಇನ್ನು ಮುಂದೆ # ಧುಗಳ ಬಗ್ಗೆ ಯಾವ ತರದ ಸಶಯವನ್ನು ತೆಗೆದುಕೊಳ್ಳಬೇಡು, ಸಾಧುಗಳು ಜಗತ್ತಿನಲ್ಲಿ ಯಾವ ವೇಷದಿಂದ ಸಂಚರಿಸುತ್ತರೆಂಬುವದು ಗೊತ್ತಿಲ್ಲ, ಸಾಧುಗಳ ಚಿಕಿತ್ಸೆಯನ್ನು ಎಂದೂ ಮಾಡಬಾರದು, ಸಾಧುಗಳನ್ನು ಕಂಡಕೂಡಲೆ ಅವರ ಚಣಕ್ಕೆ ಲೀನರಾಗಬೇಕು” ಎಂದು ಉಪದೇಶಿಸಿದರು, ಅಗ್ನಿಪ್ರಳಯ-ಒಂದಾನೊಂದು ದಿವಸ ಸಮರ್ಥರು ಚುಫಳ ಎಂಬ ಊರಿ೦ ದ ಸರಳೀ ಎಂಬ ಊರಿಗೆ ಹೋಗುತ್ತಿದ್ದಾಗ್ಗೆ ಪಾಡಳೀ ಎಂಬ ಊರ ಸಮೀಪದಲ್ಲಿ ಬಂದರು. ಆಗ ಮಧ್ಯಾಹ್ನವಾಯಿತು. ಬಿಸಿಲಲ್ಲಿ ನಡೆದು ನಡೆದು ಶಿಷ್ಯರೆಲ್ಲರು ಬಿಸಿಲಿನ ತಾಪದಿಂದ ಬಿಸುಸುಯ್ದು ಇಲ್ಲಿಯೇ ಸ್ನಾನ ಸಂಧ್ಯಾದಿಗಳನ್ನು ತೀರಿಸಿ ಕೊಂಡು ಮುಂದೆ ಹೋಗಬೇಕೆಂದು ಸಮರ್ಥರಿಗೆ ವಿನಂತಿ ಮಾಡಿದರು, ಸವ ರ್ಥರು ಅದಕ್ಕೆ ಒಪ್ಪಿಕೊಂಡದ್ದರಿಂದ ಎಲ್ಲರು ನದಿಯ ತೀರದಲ್ಲಿ ಇಳಕೊಂಡರು. ಕೆಲವು ಶಿಷ್ಯರು ಊರೊಳಗೆ ಭಿಕ್ಷೆಯನ್ನು ಬೇಡಿಕೊಂಡು ಬರಲಿಕ್ಕೆ ಹೋದರು. ಆಗ ಊರಲ್ಲಿ ಚಾವಡಿಯೊಳಗೆ ಸುಭೇದಾರನೂ ಗ್ರಾಮಸ್ಥರೂ ಕೂತಿದ್ದರು, ಸುಭೇ ಐರನು ಆ ಶಿಷ್ಯರನ್ನು ನೋಡಿದವನೇ ಅವರಿಗೆ ಬಹಳ ಅಪಮಾನವಾಗುವಂತ ಬರಿ ದು ಮಾತಾಡಿದನು, “ ನೀನು ಭಿಕ್ಷೆ ಬೇಡಿ ತಿನ್ನುತ್ತೀರಿ, ಹಾಗೂ ಲಂಗೋಟಿ ಯನ್ನು ಹಾಕಿಕೊಂಡು ಅರ್ಧಬತ್ತಲೆಯಾಗಿ ಊರಲ್ಲಿ ಓಡಾಡುತ್ತೀರಿ, ಇದು ಯಾವ ದೇಶದ ಧರ್ಮವ?” ಎಂತ ಅಂದು ಸುಭೇದಾರನು ಆ ಶಿಷ್ಯರ ಜೋಳಿಗೆ ಗಳನ್ನೂ ಖಡಾಸನಗಳನ್ನೂ ಕಸದುಕೊಳ್ಳಲಿಕ್ಕೆ ತನ್ನ ಸಿಪಾಯರಿಗೆ ಅಪ್ಪಣಿ ಮಾ ಡಿದನು, “ ಈ ಶಿಷ್ಯರು ರಾಮದಾಸ ಸ್ವಾಮಿಗಳ ಶಿಷ್ಯರು, ಇವರಿಗೆ ಅಪಮಾನ ಮಾಡಬೇಡಿರಿ” ಎಂದು ಹತ್ತರ ಇದ್ದ ಜನರು ಹೇಳಿದಾಗ್ಯೂ ಸುಭೇದಾರನು ಅವ ರ ಮಾತನ್ನು ಪಾಲಿಸದೆ ಆ ಶಿಷ್ಯರಿಗೆ ಸಿಪಾಯರ ಕೈಯಿಂದ ಚಂಡಿನ ಮೇಲೆ ಕೈ ಕೊಟ್ಟು ಊರಬಿಟ್ಟು ದಬ್ಬಿ ಹಾಕಿಸಿದನು ಆ ಶಿಷ್ಯರು ಸಮರ್ಥರ ಕಡೆಗೆ ಬಂದು ಊರಲ್ಲಿ ನಡೆದ ವೃತ್ತಾಂತವನ್ನು ತಿಳಿಸಿದರು, ಆಗ ಸಮರ್ಥರು ಜೋಳಿಗೆ ಕಸ ದುಕೊಂಡು ನಿಮ್ಮನ್ನು ಬಿಟ್ಟಿದ್ದೇ ಉಪಕಾರವಾಯಿತು, ಇನ್ನು ಮೇಲೆ ಇಂಥ ಊರಲ್ಲಿ ಒಂದು ಅರಕ್ಷಣ ಸಹ ನಿಲ್ಲುವದು ಉಚಿತವಲ್ಲ " ಎಂದು ನುಡಿದು ಎಲ್ಲರ ನ್ನು ಗಡಿಬಿಡಿಯಿಂದ ಹೊರಡಿಸಿಕೊಂಡು ನಡೆದರು ಅವರೆಲ್ಲರು ಸ್ವಲು ದೂರ ಹೋಗಿರುವಷ್ಟರಲ್ಲಿ ಪಾತಳಿ ಊರಿಗೆ ಬೆಂಕಹತ್ತಿತು, ಅದರಿಂದ ಊರೋಳಗಲ್ಲ ಅಲ್ಲೋಲಕಲ್ಲೋಲವಾಯಿತುಊರವರೆಲ್ಲಾ “ ಇದು ಸುಭೇದಾರನು ಕಾದುದು