ರಾಮದಾಸಸ್ವಾಮಿಗಳ ಚರಿತ್ರ. ೩೧ ಸ ಸ್ವಾಮಿಗಳ ಶಿಷ್ಯರಿಗೆ ಅವಮಾನವಾಗಿ ಪೀಡಿಸಿದ್ದರ ಫಲವು” ಎಂದು ಅವ ನಿಗೆ ದೊಷಣಿಯನ್ನು ಕೊಡಹತ್ತಿದರು, ಆಗ ಆ ಸುಭೇದಾರನಿಗೂ ಕೆಡಕು ಅನ್ನಿಸಿತು, ಸ್ವಾಮಿಗಳ ಕ್ಷಮೆಯನ್ನು ಬೇಡಿಕೊಳ್ಳದೇ ತ ಅನರ್ಥವ ತಪ್ಪನ ದಿಲ್ಲೆಂದು ತಿಳಿದು ಸುಭೇದಾರ ಸಹಿತವಾಗಿ ಊರೊಳಗಿನ ಎಲ್ಲ ಜನರು ತಮ್ಮ ಹೆಂ ಡರು ಮಕ್ಕಳನ್ನು ಕಟ್ಟಿಕೊಂಡು ಸಮರ್ಥರ ಕಡೆಗೆ ಹೊರಟು ಸಮಧರು ಊರದಾಟ ಮಾವಿನ ತೋಪಿನಲ್ಲಿ ಇಳಕೊಂಡಿದ್ದಾರೆಂದು ಅವರಿಗೆ ವರ್ತಮಾನವ ಹತ್ತಿತು, ಅದರಂತೆ ಅವರೆಲ್ಲರು ಅಲ್ಲಿ ಹೋಗಿ ನೋಡಲು ಸಮರ್ಥರು ಅಲ್ಲಿ ದಿಲ್ಲ, ಮುಂದೆ ಹೋಗಿದ್ದಾರೆಂದು ತಿಳಿಯಬಂತು, ಆಗ ಊರ ಜನರೆಲ್ಲ ಊರ. ಕಡೆಗೆ ತಿರಿಗಿ ನೋಡಲು ಒಂದು ಕಪಿಯು ಕೈಯಲ್ಲಿ ಕೊಳ್ಳಿಯನ್ನು ಹಿಡಿದು ಒe ದು ಮನೆಯಿಂದ ಇನ್ನೊಂದು ಮನೆಗೆ ಹಾರಿ ಒಂದರ ತರುವಾಯ ಇನ್ನೊಂದು ಮನೆಗೆ ಉರಿ ಹಚ್ಚುತ್ತ ಹೋಗುವಂತೆ ಕಂಡರು! ಈ ಅನರ್ಧವನ್ನು ನೋಡಿ ಊರ ವರೆಲ್ಲರು ಭಯಪಟ್ಟು ಸ್ವಾಮಿಗಳನ್ನು ಕಾಣದೆ ತಿರುಗಿ ಬರಬಾರದೆಂದು ನಿಶ್ಮಿಯಿಸಿ ಮುಂದಕ್ಕೆ ಮಾರ್ಗ ಕ್ರಮಣ ಮಾಡಿದರು, ಅವರಿಗೆ ರಾಮದಾಸಸ್ವಾಮಿಗಳ ಭೇ ಟೆಯು ಖಿಂಡಿ ಎಂಬ ಊರಲ್ಲಿ ಆಯಿತು, ಆಗ ಎಲ್ಲರೂ ಅವರ ಕಾಲಿಗೆ ಅಡ್ಡ ಬಿ. ದ್ದು ತಮ್ಮ ಅಪರಾಧವನ್ನು ಕ್ಷಮಿಸಬೇಕೆಂದು ದೀನೋಕ್ತಿಯಿಂದ ಬೇಡಿಕೊಳ್ಳು ಲಾಗಿ ಸಮರ್ಥ ರು ಆ ಚಿಂತನಾಡಬೇಡರಿ, ನಿಮ್ಮ ಊರ ಕಡೆಗೆ ತಿರಿಗಿ ನೋಡಿ ರಿ” ಎಂದು ಹೇಳಿದರು, ಅದರಂತೆ ಅವರು ನೋಡಲಾಗಿ ಮೊದಲು ಕೈಯಲ್ಲಿ ಕಳ್ಳಿಯನ್ನು ಹಿಡಿದು ಮನೆಗಳಿಗೆ ಉbಹಚ್ಚುತ್ತಿದ್ದ ಕಪಿಯು ಹೆಗಲ ಮೇಲೆ ನೀರ ಕೊಡವನ್ನು ಹೊತ್ತು ಉರಿಯ ನ್ನು ನಂದಿಸಹತ್ತಿರುವದನ್ನು ಕಂಡರು! ಈ ಚಮ ಶಾರವನ್ನು ನೋಡಿ ಅವರು ಸಮರ್ಥರಿಗೆ ನೀವು ನಮ್ಮ ಊರಿಗೆ ನಿಮ್ಮ ಶಿಷ್ಯ ಸಹ ವರ್ತಮಾನ ಬಂದು ಭೋಜನವನ್ನು ತೀರಿಸಿಕೊಂಡು ಹೋಗಬೇಕು ಎಂದು ಶರಗೊಡ್ಡಿ ಬೇಡಿಕೊಂಡರು, ಸಮರ್ಥರು ಆ ಹಾಗೇ ಆಗಲಿ ಎಂದು ಹೇಳಿ ತಮ್ಮ ೪ ಶಿಷ್ಯರನ್ನು ಕರೆದುಕೊಂಡು ಆ ಊರಿಗೆ ತಿರಿಗಿ ಬಂದರು ಊರೊಳಗೆ ಒಬ್ಬರ ಮನಗೂ ಬೆಂಕೆಯಿಂದ ಕೇಡಾಗಿದ್ದಿಲ್ಲ! ಸಮರ್ಥ ರೂ ಅವರೆಲ್ಲ ಶಿಷ್ಯರೂ ಆ ಊರ 2 ಭೋಜನವನ್ನು ತೀರಿಸಿಕೊಡರು ಆಗ ಊರವರು “ ನಮ್ಮ ಬದ ಊರಿನ ಮೇಲೆ ನಿಮ್ಮ ಕೃಪಾದೃಷ್ಟಿ ಇರಬೇಕು, ಎಂತ ಬೇಡಿಕೊಂಡರು, ಶಮರ್ಧರು ಅವರಿಗೆ ಆ ನಿಮ್ಮ ಊರಿಗೆ ಎಂದೆಂದಿಗೂ ಅಗ್ನಿನಾರಾಯಣನ ಉಪದ್ರವವು ಆಗ 'ಅಕ್ಕಿಲ್ಲ ಎಂದು ಅಭಯವನ್ನು ಕೊಟ್ಟರು. ಈ ಸಂಗತಿಯು ಶಕ ೧೫೩೩ ನೇ ಫಾಲ್ಗುಣ ವದ್ಯ ೧೩ ನೇ ದಿವಸ ಸಂಭವಿಸಿತು.
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೪೧
ಗೋಚರ